Moto Edge 60 Stylus Launched in India
Moto Edge 60 Stylus 5G Launched: ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಮೋಟೋರೋಲದ ಇತ್ತೀಚಿನ 5G ಸ್ಮಾರ್ಟ್‌ಫೋನ್ ಆಗಿ Moto Edge 60 Stylus ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹ್ಯಾಂಡ್‌ಸೆಟ್ Snapdragon 7s Gen 2 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. Moto Edge 60 Stylus ಫೋನ್ IP64 ರೇಟೆಡ್ ಬಿಲ್ಡ್ ಅನ್ನು ಹೊಂದಿದೆ ಮತ್ತು ಇದು 50MP ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ 68W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
Moto Edge 60 Stylus ಸ್ಮಾರ್ಟ್ಫೋನ್ ಒಂದೇ ಒಂದು ರೂಪಾಂತದರಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದ್ದು ಇದರ 8GB RAM ಮತ್ತು 256B ಸ್ಟೋರೇಜ್ ರೂಪಾಂತರವನ್ನು ₹22,999 ರೂಗಳಿಗೆ ಪರಿಚಯಿಸಲಾಗಿದೆ. ಆದರೆ ರೂ. 1,000 ವಿನಿಮಯ ರಿಯಾಯಿತಿಯನ್ನು ಪಡೆಯಬಹುದು. ಇದರಿಂದಾಗಿ ಹ್ಯಾಂಡ್‌ಸೆಟ್‌ನ ಪರಿಣಾಮಕಾರಿ ಬೆಲೆ ರೂ. 21,999 ಕ್ಕೆ ಇಳಿಯುತ್ತದೆ. ಅಥವಾ ನೀವು ಆಕ್ಸಿಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಪೂರ್ಣ ಸ್ವೈಪ್ ವಹಿವಾಟುಗಳ ಮೇಲೆ ತಕ್ಷಣ ರೂ. 1,000 ರಿಯಾಯಿತಿಯನ್ನು ಆನಂದಿಸಬಹುದು.
Moto Edge 60 Stylus ಸ್ಮಾರ್ಟ್ಫೋನ್ ಪ್ಯಾಂಟೋನ್ ಜಿಬ್ರಾಲ್ಟರ್ ಸೀ ಮತ್ತು ಪ್ಯಾಂಟೋನ್ ಸರ್ಫ್ ದಿ ವೆಬ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ ಫೋನ್ ದೇಶದಲ್ಲಿ ಫ್ಲಿಪ್‌ಕಾರ್ಟ್ ಅಧಿಕೃತ ಮೊಟೊರೊಲಾ ಇಂಡಿಯಾ ವೆಬ್‌ಸೈಟ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ IST ನಿಂದ ಖರೀದಿಗೆ ಲಭ್ಯವಿರುತ್ತದೆ.
Moto Edge 60 Stylus 5G ಸ್ಮಾರ್ಟ್ಫೋನ್ 6.67 ಇಂಚಿನ 1.5K (1220 x 2712 ಪಿಕ್ಸೆಲ್‌ಗಳು) 2.5D pOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 3,000 ನಿಟ್ ಗರಿಷ್ಠ ಬ್ರೈಟ್‌ನೆಸ್ ಮಟ್ಟವನ್ನು ಹೊಂದಿದೆ. ಫೋನ್ ಕಾರ್ನಿಂಗ್ ಗೊರಿಲ್ಲಾ 3 ರಕ್ಷಣೆಯೊಂದಿಗೆ ಆಕ್ವಾ ಟಚ್ ಬೆಂಬಲದೊಂದಿಗೆ ಬರುತ್ತದೆ.
ಈ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್‌ನೊಂದಿಗೆ 8GB LPDDR4X RAM ಮತ್ತು 256GB UFS2.2 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. Motorola Edge 60 Stylus ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಣೆಯನ್ನು ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್ 15 ಆಧಾರಿತ ಹಲೋ UI ಸ್ಕಿನ್‌ನೊಂದಿಗೆ ಬರುತ್ತದೆ ಮತ್ತು ಎರಡು ವರ್ಷಗಳ ಪ್ರಮುಖ OS ಅಪ್‌ಗ್ರೇಡ್‌ಗಳು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.
Moto Edge 60 Stylus 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಸೋನಿ LYTIA 700C ಪ್ರೈಮರಿ ಸೆನ್ಸರ್ ಮತ್ತೊಂದು 13MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು ಮೀಸಲಾದ 3 ಇನ್ 1 ಲೈಟ್ ಸೆನ್ಸರ್ ಸೇರಿದಂತೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಮುಂಭಾಗದ ಕ್ಯಾಮೆರಾ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.