Mi Days: ಇಂದು ಈ ಮಾರಾಟದ ಕೊನೆ ದಿನ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳನ್ನು ಭಾರಿ ಡಿಸ್ಕೌಂಟಲ್ಲಿ ಪಡೆಯಬವುದು

Updated on 09-Jul-2019
HIGHLIGHTS

Redmi Note 5 Pro ಸ್ಮಾರ್ಟ್ಫೋನ್ 6GB + 64GB ಸ್ಟೋರೇಜ್ ರೂಪಾಂತರ 13,999 ರೂಗಳ ಬದಲು ಕೇವಲ 11,999 ರೂಗಳಲ್ಲಿ ಲಭ್ಯ.

Redmi Note 7 Pro ಸ್ಮಾರ್ಟ್ಫೋನ್ 6GB + 128GB ಸ್ಟೋರೇಜ್ ರೂಪಾಂತರಗಳು ಸೇರಿದಂತೆ ಇದರ 4GB + 64GB ಸ್ಟೋರೇಜ್ ರೂಪಾಂತರಗಳನ್ನು ಸಹ ಸೆಲ್‌ನಲ್ಲಿ ಲಭ್ಯ

ಮೀ ಡೇಸ್ ಮಾರಾಟವನ್ನು ಇಂದು ಅಮೆಜಾನ್ ಮತ್ತು ಮೀ ಫ್ಲಿಪ್‌ಕಾರ್ಟ್‌ನಲ್ಲಿ ಆಯೋಜಿಸಲಾಗಿದೆ. ಅಲ್ಲದೆ ಶಿಯೋಮಿಯ ಅಧಿಕೃತ ಸೈಟಲ್ಲಿ  ಸೂಪರ್ ಸೇಲ್ ಅನ್ನು ಪ್ರಾರಂಭಿಸಲಾಗಿದೆ. ಈ ಸೇಲ್ ಇಂದು ಅಂದ್ರೆ 9ನೇ ಜುಲೈ 2019 ರಂದು ಕೊನೆಗೊಳ್ಳಲಿದೆ. ನೀವು Xiaomi  ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಇದು ಉತ್ತಮ ಅವಕಾಶವಾಗಿದೆ. ಈ ಮಿ ಡೇಸ್ ಮತ್ತು ಮಿ ಸೂಪರ್ ಸೇಲ್ ಸಮಯದಲ್ಲಿ ಬಳಕೆದಾರರು Redmi 6A, Redmi Note 5 Pro, Poco F1, Mi A2 ಮತ್ತು Redmi Y3 ನಂತಹ ಅದ್ದೂರಿಯ ಸ್ಮಾರ್ಟ್ಫೋನ್ಗಳನ್ನು ಭಾರಿ ರಿಯಾಯಿತಿ ಮತ್ತು ಕೊಡುಗೆಗಳೊಂದಿಗೆ ಖರೀದಿಸಲು ಸಾಧ್ಯವಾಗುತ್ತದೆ.

Mi Days: Last Day Deals

ಈ ಅದ್ದೂರಿಯ ಮಿ ಡೇಸ್ ಮತ್ತು ಮಿ ಸೂಪರ್ ಸೇಲ್‌ನಲ್ಲಿ ಕಂಡುಬರುವ ಡೀಲ್‌ಗಳೆಂದರೆ ಮೊದಲಿಗೆ Redmi 6A  ಸ್ಮಾರ್ಟ್ಫೋನ್ 2GB ಯ RAM ಮತ್ತು 32GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಕೇವಲ 6,499 ರೂಗಳಾಗಿವೆ ಆದರೆ ಈ ಸೇಲಲ್ಲಿ ನಿಮಗೆ 6,199 ರೂಗಳಿಗೆ  ಲಭ್ಯಗೊಳಿಸಲಾಗಿದೆ. ಅದೇ ಸಮಯದಲ್ಲಿ Redmi Note 5 Pro ಸ್ಮಾರ್ಟ್ಫೋನಿನ 6GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರಗಳು 13,999 ರೂಗಳ ಬದಲು ಕೇವಲ 11,999 ರೂಗಳಲ್ಲಿ ಲಭ್ಯವಿದೆ. ಈ ಅದ್ದೂರಿಯ ಡೀಲ್ಗಳು ಅಮೆಜಾನ್ ಮತ್ತು ಮಿ.ಕಾಂನಲ್ಲಿ ಲಭ್ಯವಿದೆ.

Redmi Note 7 Pro ಸ್ಮಾರ್ಟ್ಫೋನ್ 6GB + 128GB ಸ್ಟೋರೇಜ್ ರೂಪಾಂತರಗಳು ಸೇರಿದಂತೆ ಇದರ 4GB + 64GB ಸ್ಟೋರೇಜ್ ರೂಪಾಂತರಗಳನ್ನು ಸಹ ಸೆಲ್‌ನಲ್ಲಿ ಲಭ್ಯಗೊಳಿಸಲಾಗಿದೆ. ಈ ಎರಡೂ ರೂಪಾಂತರಗಳು ಫ್ಲಿಪ್ಕಾರ್ಟ್ ಮತ್ತು ಮಿ.ಕಾಂನಲ್ಲಿ ಓಪನ್ ಸೇಲಲ್ಲಿ ಮಾರಾಟಕ್ಕೆ ಲಭ್ಯವಿದೆ. ಅದೇ ಸಮಯದಲ್ಲಿ Redmi Note 7 Pro ಸ್ಮಾರ್ಟ್ಫೋನ್ 4GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರದ ಮುಂದಿನ ಫ್ಲ್ಯಾಷ್ ಸೆಲ್ ಜುಲೈ 12 ರಂದು ನಡೆಯಲಿದೆ. ಈ ಡೀಲ್ ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಂನಲ್ಲಿ ಲಭ್ಯವಿದೆ.

Redmi Note 7S ಸ್ಮಾಟ್ಫೋನ್ ಮೇಲೆ 1,000 ರೂಗಳ ಹೆಚ್ಚುವರಿ ವಿನಿಮಯ ರಿಯಾಯಿತಿ ನೀಡಲಾಗುತ್ತಿದೆ. ಈ ಕೊಡುಗೆಯನ್ನು ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಂನಲ್ಲಿ ನೀಡಲಾಗುತ್ತಿದೆ. ಅದೇ ಸಮಯದಲ್ಲಿ Redmi Y3 ಅನ್ನು ಮಿ.ಕಾಮ್ ಮತ್ತು ಅಮೆಜಾನ್ ನೊಂದಿಗೆ 1,000 ರೂಪಾಯಿಗಳ ಹೆಚ್ಚುವರಿ ವಿನಿಮಯ ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದಲ್ಲದೆ Poco F1 ಸಾಮರ್ಟ್ಫೋನ್ ಮಿ.ಕಾಮ್ ಮತ್ತು ಫ್ಲಿಪ್ಕಾರ್ಟ್ನಲ್ಲಿ 3,000 ರೂ.ಗಳ ವಿನಿಮಯ ರಿಯಾಯಿತಿ ನೀಡಲಾಗುತ್ತಿದೆ. ಅದೇ ಸಮಯದಲ್ಲಿ Mi A2 ಅನ್ನು ಅಮೆಜಾನ್ ಮತ್ತು ಮಿ.ಕಾಂನಿಂದ ಹೆಚ್ಚುವರಿ ವಿನಿಮಯ ರಿಯಾಯಿತಿಯೊಂದಿಗೆ 2,000 ರೂಗಳನ್ನು ಕಡಿಮೆಗೊಳಿಸಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :