Lava Play Ultra
Lava Play Ultra 5G Launched: ಭಾರತದಲ್ಲಿ ಇಂದು ಸ್ವದೇಶಿ ಬ್ರಾಂಡ್ ಲಾವಾ (Lava) ತನ್ನ ಹೊಸ 5G ಜನಸಾಮಾನ್ಯರಿಗೆ ಗೇಮಿಂಗ್ ಪವರ್‌ಹೌಸ್ ಲಾವಾ ಹೊಸ ಲಾವಾ ಪ್ಲೇ ಅಲ್ಟ್ರಾ 5G ಯೊಂದಿಗೆ ಬಜೆಟ್ ಗೇಮಿಂಗ್ ಸ್ಮಾರ್ಟ್‌ಫೋನ್ ವಿಭಾಗಕ್ಕೆ ದಿಟ್ಟ ಪ್ರವೇಶ ಮಾಡುತ್ತಿದೆ. ಕಂಪನಿ ತನ್ನ ಅಧಿಕೃತ ಯೂಟ್ಯೂಬ್ ವೀಡಿಯೊದಲ್ಲಿ ಹೈಲೈಟ್ ಮಾಡಿದಂತೆ ಈ ಸ್ಮಾರ್ಟ್ಫೋನ್ ಪವರ್ಫುಲ್ ಕಾರ್ಯಕ್ಷಮತೆ-ಬೆಲೆ ಅನುಪಾತವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಬಾರಿ ಕಂಪನಿ ಗೇಮರುಗಳಿಗಾಗಿ ಮತ್ತು ಬಜೆಟ್‌ನಲ್ಲಿ ಬಳಕೆದಾರರನ್ನು ಪೂರೈಸುತ್ತದೆ. ಈ ಫೋನ್ ಇದೆ 25ನೇ ಆಗಸ್ಟ್ 2025 ರಿಂದ ಮೊದಲ ಮಾರಾಟ ಅಮೆಜಾನ್‌ನಲ್ಲಿ ಪ್ರತ್ಯೇಕವಾಗಿ ಖರೀದಿಗೆ ಲಭ್ಯವಿರುತ್ತದೆ.
ಈ ಹೊಸ ಲಾವಾ ಸ್ಮಾರ್ಟ್ ಫೋನ್ ಬ್ಯಾಂಕ್ ಆಫರ್ ಜೊತೆಗೆ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಆಕರ್ಷಕ ₹14,999 ರೂಗಳಿಗೆ ಪರಿಚಯಿಸಿದೆ. ಇದರ ಕ್ರಮವಾಗಿ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ಆಕರ್ಷಕ ₹16,499 ರೂಗಳಿಗೆ ಪರಿಚಯಿಸಿದೆ. ಆದರೆ ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು 1000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯುವ ಮೂಲಕ ಆರಂಭಿಕ ಕೇವಲ 13,999 ರೂಗಳಿಗೆ ಖರೀದಿಸಬಹುದು. ಈ Lava Play Ultra 5G ಸ್ಮಾರ್ಟ್ಫೋನ್ ಇದೆ 25ನೇ ಆಗಸ್ಟ್ 2025 ರಿಂದ ಮೊದಲ ಮಾರಾಟ ಅಮೆಜಾನ್‌ನಲ್ಲಿ ಪ್ರತ್ಯೇಕವಾಗಿ ಖರೀದಿಗೆ ಲಭ್ಯವಿರುತ್ತದೆ.
ಫೋನ್ ದೊಡ್ಡ ಮತ್ತು ರೋಮಾಂಚಕ 6.67 ಇಂಚಿನ FHD+AMOLED ಡಿಸ್ಪ್ಲೇಯನ್ನು ಹೊಂದಿದ್ದು ನಯವಾದ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ನೀವು ಗೇಮಿಂಗ್ ಮಾಡುತ್ತಿರಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೋಲ್ ಮಾಡುತ್ತಿರಲಿ ಅಥವಾ ಗೇಮಿಂಗ್ ಆಡುತ್ತೀರಿ ಕ್ಲೀನ್ ಮತ್ತು ಸೂಪರ್ ಕೂಲ್ ಅನುಭವವನ್ನು ಖಚಿತಪಡಿಸುತ್ತದೆ.
Also Read: ವಾಹ್! ಅಮೆಜಾನ್ ಸೇಲ್‌ನಲ್ಲಿ 55 ಇಂಚಿನ 4K Smart TV ಈಗ ₹25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ!
ಹಿಂಭಾಗದಲ್ಲಿ ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಪ್ರೈಮರಿ 64MP SONY IMX682 ಮೆಗಾಪಿಕ್ಸೆಲ್ ಸೆನ್ಸರ್ ಜೊತೆಗೆ ಬರುತ್ತದೆ ಅಂದ್ರೆ ಕ್ಯಾಮೆರಾ ಡಿಸೆಂಟ್ ಫೋಟೋ ವಿಡಿಯೋಗಳನ್ನು ನೀಡುತ್ತದೆ. ಮತ್ತೊಂದು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಸಹ ಹೊಂದಿದೆ. ಕೊನೆಯದಾಗಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಈ ಹೊಸ ಲಾವಾ ಸ್ಮಾರ್ಟ್ ಫೋನ್ MediaTek Dimensity 7300 Processor ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು ದೈನಂದಿನ ಕೆಲಸಗಳು ಮತ್ತು ಗೇಮಿಂಗ್ ಅನ್ನು ಸುಲಭವಾಗಿ ನಿರ್ವಹಿಸುವ ಸಮರ್ಥ ಪ್ರೊಸೆಸರ್ ಆಗಿದೆ. ಸ್ಮಾರ್ಟ್ಫೋನ್ 128GB ಸ್ಟೋರೇಜ್ UFS 3.1 ತೀವ್ರವಾದ ಗೇಮಿಂಗ್ ಅವಧಿಗಳ ಮೂಲಕ ನಿಮ್ಮನ್ನು ಮುಂದುವರಿಸಲು ಫೋನ್ 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ದೃಢವಾದ 5,000mAh ಬ್ಯಾಟರಿಯನ್ನು ಹೊಂದಿದೆ.ಹೆಚ್ಚುವರಿಯಾಗಿ Google Play Store, Gmail, Youtube, Google, Google Assistant, Maps, Files ಸಪೋರ್ಟ್ ಮಾಡುತ್ತದೆ.