ನಾಳೆ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Lava Bold N4 Pro 5G ಸ್ಮಾರ್ಟ್‌ಫೋನ್‌

HIGHLIGHTS

ಸೆಪ್ಟೆಂಬರ್ 18 ರಂದು ಲಾವಾ ಬೋಲ್ಡ್ N4 ಪ್ರೊ 5G ಲಾಂಚ್

ಲಾವಾ ಬೋಲ್ಡ್ N4 ಪ್ರೊ 5G ಫೋನ್‌ ಡ್ಯುಯಲ್‌ ಕ್ಯಾಮೆರಾ ಪಡೆದಿರಲಿದೆ

ಲಾವಾ ಬೋಲ್ಡ್ N4 ಪ್ರೊ 5G ಫೋನ್‌ 6,000mAh ಬ್ಯಾಟರಿ ಹೊಂದಿರಲಿದೆ

ನಾಳೆ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Lava Bold N4 Pro 5G ಸ್ಮಾರ್ಟ್‌ಫೋನ್‌

ಲಾವಾ ಮೊಬೈಲ್‌ ಕಂಪನಿಯು ತನ್ನ ಬೋಲ್ಡ್‌ ಸರಣಿಯಲ್ಲಿ ಇದೀಗ Lava Bold N4 Pro 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್‌ ನಾಳೆ (ಸಪ್ಟಂಬರ್ 18 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಮೊಬೈಲ್‌ ಬಿಡುಗಡೆ ಕುರಿತು ಈಗಾಗಲೇ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಅಂದಹಾಗೆ ನೂತನವಾಗಿ ಲಗ್ಗೆ ಇಡಲಿರುವ ಈ ಮೊಬೈಲ್‌ ಆಕ್ಟಾ ಕೋರ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಹಾಗಾದರೆ ಲಾವಾ ಬೋಲ್ಡ್ N4 ಪ್ರೊ 5G ಮೊಬೈಲ್‌ನ ಲಾಂಚ್‌ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio ಗ್ರಾಹಕರೇ ಕಡಿಮೆ ಬೆಲೆಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಜೊತೆಗೆ ಬಿಗ್ ವ್ಯಾಲಿಡಿಟಿ ಬೇಕೆ? ಈ ಪ್ಲಾನ್ ಗಮನಿಸಿ

ನಾಳೆ Lava Bold N4 Pro 5G ಫೋನ್‌ ಲಾಂಚ್

ಲಾವಾ ಕಂಪನಿಯು ತನ್ನ ಹೊಸ ಲಾವಾ ಬೋಲ್ಡ್ N4 ಪ್ರೊ 5G ಮೊಬೈಲ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಲು ಸಜ್ಜಾಗಿದೆ. ಅಂದಹಾಗೆ ಈ ಮೊಬೈಲ್‌ ನಾಳೆ (ಸಪ್ಟಂಬರ್ 18 ರಂದು) ಮಧ್ಯಾಹ್ನ 12 ಗಂಟೆಗೆ ಲಾಂಚ್ ಮಾಡಲಿದೆ. ಈಗಾಗಲೇ ಅಮೆಜಾನ್‌ನಲ್ಲಿ ಈ ಫೋನ್‌ಗಳಿಗಾಗಿ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಬಿಡುಗಡೆಯ ನಂತರ ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಮೂಲಕ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿ ದೃಢಪಡಿಸಿದೆ. ಇನ್ನು ಈ ಫೋನ್‌ ಬಜೆಟ್‌ ಬೆಲೆಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

Lava Bold N4 Pro 5G to Launch Tomorrow in India
Lava Bold N4 Pro 5G

ಲಾವಾ ಬೋಲ್ಡ್ N4 ಪ್ರೊ 5G ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಲಾವಾ ಬೋಲ್ಡ್ N4 ಪ್ರೊ 5G ಮೊಬೈಲ್ 6.75 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ ಅಗತ್ಯ ಬ್ರೈಟ್‌ನೆಸ್ ಸೌಲಭ್ಯ ಪಡೆದಿರಬಹುದು. ಅಲ್ಲದೇ ಇದು ಆಕ್ಟಾ ಕೋರ್ ಚಿಪ್‌ಸೆಟ್‌ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ v16 ಸಪೋರ್ಟ್‌ ಪಡೆದಿರುವ ಸಾಧ್ಯತೆಗಳು ಇವೆ.

ಲಾವಾ ಬೋಲ್ಡ್ N4 ಪ್ರೊ 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರುವ ನಿರೀಕ್ಷೆಗಳು ಇವೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್‌ ನಲ್ಲಿ ಇರಬಹುದು ಹಾಗೆಯೇ ಸೆಕೆಂಡರಿ ಕ್ಯಾಮೆರಾವು ಬೇಸಿಕ್‌ ಸೆನ್ಸಾರ್‌ ಬಲ ಪಡೆದಿರಲಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗುವ ಸಾಧ್ಯತೆಗಳು ಇವೆ. ಹಾಗೆಯೇ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಆಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile