ಇಂದಿನಿಂದ Lava Bold N2 Lite ಸ್ಮಾರ್ಟ್‌ಫೋನ್ ಸೇಲ್ ಪ್ರಾರಂಭ! ಆಫರ್ ಬೆಲೆ ನೋಡಿ
ಇಂದು (ಏಪ್ರಿಲ್ 10 ರಿಂದ) ಲಾವಾ ಬೋಲ್ಡ್ N2 ಲೈಟ್ ಖರೀದಿಗೆ ಲಭ್ಯ
ಈ ಹೊಸ ಸ್ಮಾರ್ಟ್‌ಫೋನ್ 90Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ
ಈ ನೂತನ ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ
ಲಾವಾದ ನೂತನ Lava Bold N2 Lite ಮೊಬೈಲ್ ಅಗ್ಗದ ದರದ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಇಂದು (ಏಪ್ರಿಲ್ 10 ರಂದು) ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಲಿದೆ. ಈ ನೂತನ ಮೊಬೈಲ್ ಆಕ್ಟಾ ಕೋರ್ Unisoc 9863A ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಜೊತೆಗೆ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 90Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೇ ಈ ಫೋನ್ ಕೋಲಾರ್ ಗೋಲ್ಡ್ ಮತ್ತು ನೀಲಗಿರಿ ಬ್ಲೂ ಕಲರ್ ಆಯ್ಕೆಯೊಂದಿಗೆ ಎಂಟ್ರಿ ಕೊಟ್ಟಿದೆ. ಹಾಗಾದರೇ ಲಾವಾ ಬೋಲ್ಡ್ N2 ಲೈಟ್ ಫೋನಿನ ಮಾರಾಟ, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಬಜೆಟ್ ಬೆಲೆಯ Redmi 15C 5G ಮೊಬೈಲ್ ಈಗ ಬೆಸ್ಟ್ ಆಫರ್‌ನಲ್ಲಿ ಲಭ್ಯ!
Lava Bold N2 Lite ಫೋನ್ ಸೇಲ್ ಮಾಹಿತಿ
ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಲಾವಾ ಬೋಲ್ಡ್ N2 ಲೈಟ್ ಮೊಬೈಲ್ ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್ ಆಗಿದೆ. ಇನ್ನು ಈ ಮೊಬೈಲ್ ಇಂದು (ಏಪ್ರಿಲ್ 10 ರಂದು) ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಈ ಹೊಸ ಲಾವಾ ಬೋಲ್ಡ್ N2 ಲೈಟ್ ಮೊಬೈಲ್‌ನ 3GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆ 7,399 ರೂ.ಗಳು ಆಗಿದೆ. ಆದರೆ ಲಾಂಚ್ ಕೊಡುಗೆಯಾಗಿ ಈ ಫೋನ್ ಅಮೆಜಾನ್‌ನಲ್ಲಿ 6,749 ರೂ.ಗಳಿಗೆ ಲಭ್ಯವಾಗಲಿದೆ. ಅಂದಹಾಗೆ ಈ ಮೊಬೈಲ್ ಕೋಲಾರ್ ಗೋಲ್ಡ್ ಮತ್ತು ನೀಲಗಿರಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ಲಾವಾ ಬೋಲ್ಡ್ N2 ಲೈಟ್ ಫೀಚರ್ಸ್ ಹೀಗಿವೆ
ಹೊಸ ಲಾವಾ ಬೋಲ್ಡ್ N2 ಲೈಟ್ ಮೊಬೈಲ್ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 90Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 720 × 1,600 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ Unisoc 9863A ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.
ಹಾಗೆಯೇ ಲಾವಾ ಬೋಲ್ಡ್ N2 ಲೈಟ್ ಮೊಬೈಲ್ ಹಿಂಭಾಗದಲ್ಲಿ LED ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಇದರ ಮೊದಲ ಕ್ಯಾಮೆರಾವು 13MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 10W ವೈರ್ಡ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile