ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ Lava Bold N1 5G ಸ್ಮಾರ್ಟ್‌ಫೋನ್‌! ಗ್ಲಾಸಿ ಲುಕ್ ಇದೆ

HIGHLIGHTS

ನಾಳೆ (ಮೇ 20 ರಂದು) ಭಾರತದಲ್ಲಿ ಲಾವಾ ಬೋಲ್ಡ್‌ N1 5G ಲಾಂಚ್.

ಲಾವಾದ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ.

ಈ ಮೊಬೈಲ್‌ ಯುನಿಸಾಕ್ T765 ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರಲಿದೆ.

ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ Lava Bold N1 5G ಸ್ಮಾರ್ಟ್‌ಫೋನ್‌! ಗ್ಲಾಸಿ ಲುಕ್ ಇದೆ

ಜನಪ್ರಿಯ ಲಾವಾ ಮೊಬೈಲ್‌ ಕಂಪನಿಯು ತನ್ನ ಬೋಲ್ಡ್‌ ಸರಣಿಯಲ್ಲಿ ಹೊಸದಾಗಿ Lava Bold N1 5G ಹೆಸರಿನ ಮೊಬೈಲ್‌ ಅನ್ನು ಪರಿಚಯಿಸಲು ತಯಾರಾಗಿದೆ. ಈ ಮೊಬೈಲ್‌ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಅಂದಹಾಗೆ ಈ ಸರಣಿಯ ಸ್ಮಾರ್ಟ್‌ಫೋನ್‌ ಯುನಿಸಾಕ್ T765 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಒಳಗೊಂಡಿರಲಿದೆ. ಇದರೊಂದಿಗೆ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿರಲಿವೆ. ಹಾಗೆಯೇ ಹಿಂಭಾಗದಲ್ಲಿ ಪ್ರೀಮಿಯಂ ಗ್ಲಾಸಿ ಡಿಸೈನ್‌ ಅನ್ನು ಪಡೆದಿರುವುದು ಖಚಿತವಾಗಿದೆ. ಹಾಗಾದರೆ ಮುಂಬರುವ ಲಾವಾ ಬೋಲ್ಡ್‌ N1 5G ಫೋನ್‌ಗಳ ಲಾಂಚ್ ಡೇಟ್, ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ವೇಗದ ಪ್ರೊಸೆಸರ್‌ ಇರುವ Motorola Edge 60 Fusion 5G ಬೆಲೆಯಲ್ಲಿ ಸಖತ್ ಇಳಿಕೆ!

Lava Bold N1 5G ಮೊಬೈಲ್‌ ನಾಳೆ ಲಾಂಚ್

ಲಾವಾ ಕಂಪನಿಯು ಹೊಸದಾಗಿ ಲಾವಾ ಬೋಲ್ಡ್‌ N1 5G ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್‌ ಮಾಡಲು ಸಜ್ಜಾಗಿದೆ. ಈ ಮೊಬೈಲ್‌ ನಾಳೆ (ಮೇ 20 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಲಾಂಚ್ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಪೇಜ್‌ ಸಹ ಲೈವ್ ಆಗಿದೆ. ಇನ್ನು ಈ ಫೋನ್‌ ರಾಯಲ್‌ ಬ್ಲೂ ಮತ್ತು ಚಾಂಪಿಯನ್‌ ಗೋಲ್ಡ್‌ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಪಕ್ಕಾ ಆಗಿದೆ. ಈ ಫೋನಿನ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

Lava Bold N1 5G

ಲಾವಾ ಬೋಲ್ಡ್‌ N1 5G ಫೋನಿನ ನಿರೀಕ್ಷಿತ ಫೀಚರ್ಸ್‌

ಮುಂಬರುವ ಹೊಸ ಲಾವಾ ಬೋಲ್ಡ್‌ N1 5G ಸ್ಮಾರ್ಟ್‌ಫೋನ್‌ ಪ್ರೀಮಿಯಂ ಗ್ಲಾಸಿ ಬ್ಯಾಕ್ ಫಿನಿಶ್‌ನಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಈ ಮೊಬೈಲ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರುತ್ತದೆ ಎಂದು ಲಾವಾ ದೃಢಪಡಿಸಿದೆ. ಹಾಗೆಯೇ ಈ ಫೋನ್‌ ಯುನಿಸಾಕ್ T765 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 15 ಓಎಸ್‌ ಸಪೋರ್ಟ್‌ ಒಳಗೊಂಡಿರಲಿದೆ. ಇದು 4GB ವರ್ಚುವಲ್ RAM ಜೊತೆಗೆ 4GB RAM + 64GB ಆಂತರೀಕ ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ.

ಇನ್ನು ಈ ಫೋನ್‌ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸಪೋರ್ಟ್‌ ಪಡೆದಿರುವ ನಿರೀಕ್ಷೆಗಳು ಇವೆ. ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್‌ ಬಲದಲ್ಲಿ ಇರಲಿದೆ. ಇದರೊಂದಿಗೆ IP54 ಸ್ಪ್ಲಾಶ್‌ ಮತ್ತು ಧೂಳು ನಿರೋಧಕ ರೇಟಿಂಗ್ ಸೌಲಭ್ಯ ಇರಬಹುದು. ಅಲ್ಲದೇ ಫೇಸ್‌ ರಿಕೈಗ್ನೇಷನ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಎರಡನ್ನೂ ಒಳಗೊಂಡಿರಲಿದೆ. ಈ ಫೋನ್ ಖರೀದಿಯೊಂದಿಗೆ ಲಾವಾ ಉಚಿತ ಮನೆ ಸೇವಾ ಸೌಲಭ್ಯವನ್ನು ಸಹ ನೀಡುತ್ತಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile