ಹೊಸ ವೇರಿಯಂಟ್‌ನಲ್ಲಿ Lava Bold N1 5G ಮೊಬೈಲ್‌ ಲಾಂಚ್‌! ಬೆಲೆ ಗಮನಿಸಿ

HIGHLIGHTS

ಲಾವಾ ಬೋಲ್ಡ್‌ N1 5G ಫೋನ್‌ 6GB + 128GB ವೇರಿಯಂಟ್‌ನಲ್ಲಿ ಲಾಂಚ್

ಈ ನೂತನ ಫೋನ್‌ ಇದೇ ಮೇ 1 ರಂದು ಭಾರತದಲ್ಲಿ ಸೇಲ್ ಆರಂಭಿಸಲಿದೆ

ಲಾವಾದ ಈ ಹೊಸ ಫೋನ್‌ ಯುನಿಸಾಕ್ T765 ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿದೆ

ಲಾವಾ ಮೊಬೈಲ್‌ ಕಂಪನಿಯ Lava Bold N1 5G ಮೊಬೈಲ್‌ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಕಂಪನಿಯು ಈ ಮೊಬೈಲ್‌ನಲ್ಲಿ 6GB RAM + 128GB ಸ್ಟೋರೇಜ್‌ನ ಹೊಸ ವೇರಿಯಂಟ್‌ ಅನ್ನು ಬಿಡುಗಡೆ ಮಾಡಿದೆ. ಅಂದಹಾಗೆ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದ್ದು ಇದರೊಂದಿಗೆ 13MP ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಆಕ್ಟಾ-ಕೋರ್ ಯುನಿಸಾಕ್ T765 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 15 ಓಎಸ್‌ ಸಪೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸಬಹುದು. ಹಾಗಾದರೆ ಲಾವಾ ಬೋಲ್ಡ್‌ N1 5G ಮೊಬೈಲ್‌ನ ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : RBI New Rule: OTP ಇಲ್ಲದೆ ಬಿಲ್ ಪಾವತಿ ಸಾಧ್ಯ! ಚಂದಾದಾರಿಕೆಗಳ ಬಿಲ್ ಪಾವತಿಗೆ ಹೊಸ ವ್ಯವಸ್ಥೆ

Lava Bold N1 5G ಹೊಸ ವೇರಿಯಂಟ್‌ ಬೆಲೆ ಹಾಗೂ ಲಭ್ಯತೆ

ಲಾವಾ ಬೋಲ್ಡ್‌ N1 5G ಮೊಬೈಲ್‌ ಈಗ ಹೊಸ ವೇರಿಯಂಟ್‌ನಲ್ಲಿ ಬಿಡುಗಡೆ ಆಗಿದೆ. ಹೊಸ 6GB RAM + 128GB ಸ್ಟೋರೇಜ್‌ ವೇರಿಯಂಟ್‌ 12,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಫೋನ್‌ ಈಗ 4GB RAM + 64GB ಮತ್ತು 4GB RAM + 128GB ವೇರಿಯಂಟ್‌ ಆಯ್ಕೆಗಳಲ್ಲಿ ಸಿಗುತ್ತದೆ. ಇನ್ನು ಹೊಸದಾಗಿ 6GB RAM + 128GB ವೇರಿಯಂಟ್‌ನಲ್ಲಿ ಲಭ್ಯ. ಅಂದಹಾಗೆ ಹೊಸ ವೇರಿಯಂಟ್‌ ಇದೇ ಮೇ 1 ರಿಂದ ಅಮೆಜಾನ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಇನ್ನು ಈ ಫೋನ್‌ ಷಾಂಪೇನ್ ಗೋಲ್ಡ್ ಮತ್ತು ರಾಯಲ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಲಾವಾ ಬೋಲ್ಡ್‌ N1 5G ಫೀಚರ್ಸ್‌ ಹೀಗಿವೆ

ಹೊಸ ಲಾವಾ ಬೋಲ್ಡ್‌ N1 5G ಮೊಬೈಲ್‌ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್‌ 90Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 2.5D ಗ್ಲಾಸ್ ರಕ್ಷಣೆಯನ್ನು ಪಡೆದಿರುವ ಜೊತೆಗೆ 20:9 ಆಕಾರ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಈ ಫೋನ್‌ ಆಕ್ಟಾ-ಕೋರ್ ಯುನಿಸಾಕ್ T765 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಪಡೆದಿದೆ.

ಹಾಗೆಯೇ ಲಾವಾ ಬೋಲ್ಡ್‌ N1 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 10W ವೈರ್ಡ್ ಚಾರ್ಜಿಂಗ್‌ ಅನ್ನು ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :