ಭಾರತದಲ್ಲಿ Lava Bold N1 5G ಸ್ಮಾರ್ಟ್‌ಫೋನ್ ಬಿಡುಗಡೆ! ಅಗ್ಗದ ಬೆಲೆಯಲ್ಲಿ ಲಭ್ಯ
ಇದೇ ಮೇ 27 ರಂದು ಭಾರತದಲ್ಲಿ ಲಾವಾ ಬೋಲ್ಡ್ N1 5G ಸೇಲ್.
ಲಾವಾದ ಈ ಹೊಸ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.
ಈ ಫೋನ್ ಆಕ್ಟಾ ಕೋರ್ T765 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಲಾವಾ ಮೊಬೈಲ್ ಕಂಪನಿಯು ತನ್ನ ಬೋಲ್ಡ್ ಸರಣಿಯಲ್ಲಿ ಹೊಸದಾಗಿ Lava Bold N1 5G ಹೆಸರಿನ ಹೊಸ ವೇರಿಯಂಟ್ ಮೊಬೈಲ್ ಅನ್ನು ಇಂದು ಭಾರತದಲ್ಲಿ ಲಾಂಚ್ ಮಾಡಿದೆ. ಈ ಮೊಬೈಲ್ ಆಕ್ಟಾ ಕೋರ್ T765 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದುಕೊಂಡಿದೆ. ಇದಲ್ಲದೆ ಹಿಂಭಾಗದಲ್ಲಿ ಪ್ರೀಮಿಯಂ ಗ್ಲಾಸಿ ಡಿಸೈನ್ ಅನ್ನು ಪಡೆದಿರುವುದು ಹೈಲೈಟ್ ಎನಿಸಿದ್ದು, 13MP ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗಾದರೆ ಹೊಸ ಲಾವಾ ಬೋಲ್ಡ್ N1 5G ಸ್ಮಾರ್ಟ್‌ಫೋನ್ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ.
SurveyAlso Read : Google I/O 2026: ಜೆಮಿನಿ AI ಆಧಾರಿತ ಆಂಡ್ರಾಯ್ಡ್ XR ಸ್ಮಾರ್ಟ್ ಗ್ಲಾಸ್‌ಗಳ ಅನಾವರಣ
Lava Bold N1 5G ಮೊಬೈಲ್ ಬೆಲೆ ಹಾಗೂ ಲಭ್ಯತೆ
ಲಾವಾ ಕಂಪನಿಯು ನೂತನವಾಗಿ ಲಾವಾ ಬೋಲ್ಡ್ N1 5G ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೊಬೈಲ್ 4 GB RAM + 64 GB ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದ್ದು, ಇದರ ಬೆಲೆಯು 11,999 ರೂ.ಗಳು ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕವಾಗಿ ಸೀಮಿತ ಅವಧಿಗೆ 10,999 ರೂ.ಗಳ ಬೆಲೆಗೆ ಖರೀದಿಸಬಹುದು. ಇನ್ನು ಈ ಫೋನ್ ಮೇ 27 ರಂದು ಮಾರಾಟ ಪ್ರಾರಂಭಿಸಲಿದೆ. ಇದು ರಾಯಲ್ ಬ್ಲೂ ಮತ್ತು ಚಾಂಪಿಯನ್ ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಲಭ್ಯ.

ಲಾವಾ ಬೋಲ್ಡ್ N1 5G ಫೀಚರ್ಸ್ ಮಾಹಿತಿ
ನೂತನ ಲಾವಾ ಬೋಲ್ಡ್ N1 5G ಸ್ಮಾರ್ಟ್‌ಫೋನ್ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದರ ಸ್ಕ್ರೀನ್ 90Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 2.5D ಗ್ಲಾಸ್ ರಕ್ಷಣೆಯನ್ನು ಪಡೆದಿರುವ ಜೊತೆಗೆ 20:9 ಆಕಾರ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ T765 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಪಡೆದಿದೆ.
ಅಲ್ಲದೇ ಲಾವಾ ಬೋಲ್ಡ್ N1 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಮೊದಲ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 10W ವೈರ್ಡ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile