Lava Agni 4 ಸ್ಮಾರ್ಟ್‌ಫೋನ್ Dimensity 8350 ಪ್ರೊಸೆಸರ್‌ನೊಂದಿಗೆ ಬಿಡುಗಡೆ! ಆಫರ್ ಬೆಲೆ ಮತ್ತು ಫೀಚರ್ಗಳೇನು?

Updated on 20-Nov-2025
HIGHLIGHTS

ಭಾರತದಲ್ಲಿ Lava Agni 4 ಸ್ಮಾರ್ಟ್‌ಫೋನ್ ಅಧಿಕೃತವಗಿ ಬಿಡುಗಡೆಯಾಗಿದೆ.

Lava Agni 4 ಸ್ಮಾರ್ಟ್‌ಫೋನ್ Dimensity 8350 ಪ್ರೊಸೆಸರ್‌ನೊಂದಿಗೆ ಪರಿಚಯವಾಗಿದೆ.

Lava Agni 4 ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 120Hz Flat AMOLED ಡಿಸ್ಪ್ಲೇಯನ್ನು ಹೊಂದಿದೆ.

ಭಾರತದ ಕಂಪನಿ ಲಾವಾ ತನ್ನ ಹೊಸ ಸ್ಮಾರ್ಟ್‌ಫೋನ್ Lava Agni 4 ಅನ್ನು ಮಾರುಕಟ್ಟೆಗೆ ತಂದಿದೆ. ಇದು ಪ್ರೀಮಿಯಂ ವಿನ್ಯಾಸ, ಬಲಿಷ್ಠ ಹಾರ್ಡ್‌ವೇರ್ ಮತ್ತು ಕಂಪನಿಯದೇ ಆದ ಹೊಸ Vayu AI ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಹೊಂದಿದೆ. ಈ ಫೋನ್‌ನಲ್ಲಿ ವೇಗದ ಉದ್ದೇಶಕ್ಕಾಗಿ MediaTek Dimensity 8350 5G ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದು ಬ್ಲೋಟ್‌ವೇರ್ ಇಲ್ಲದ ಶುದ್ಧವಾದ Android 15 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಲಾವಾ ಕಂಪನಿಯು ಮೂರು ವರ್ಷಗಳ ಪ್ರಮುಖ Android ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುವ ಭರವಸೆ ನೀಡಿದೆ.

Also Read: BSNL Plan: ಬರೋಬ್ಬರಿ 72 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!

Lava Agni 4 ಬೆಲೆ ಮತ್ತು ಆಫರ್‌ಗಳು:

ಲಾವಾ ಅಗ್ನಿ 4 ಅನ್ನು ಒಂದೇ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ ಅದು 8GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿದೆ. ಇದರ ಬೆಲೆ ₹24,999 ಆಗಿದೆ. ಆದರೆ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಕಂಪನಿಯು ಆರಂಭಿಕ ಕೊಡುಗೆಯಾಗಿ ₹2,000 ರಿಯಾಯಿತಿ ನೀಡಿದರೆ ಇದರಿಂದ ಫೋನ್‌ನ ಪರಿಣಾಮಕಾರಿ ಬೆಲೆ ₹22,999 ಆಗುತ್ತದೆ. ಈ ಫೋನ್ ಫ್ಯಾಂಟಮ್ ಬ್ಲಾಕ್ ಮತ್ತು ಲೂನಾರ್ ಮಿಸ್ಟ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದರ ಮಾರಾಟವು 25ನೇ ನವೆಂಬರ್ 2025 ರಿಂದ ಪ್ರಾರಂಭವಾಗಲಿದೆ.

ಲಾವಾ ಅಗ್ನಿ 4 ಡಿಸ್ಪ್ಲೇ ಮತ್ತು ಕ್ಯಾಮೆರಾ:

ಈ 6.67 ಇಂಚಿನ 1.5K AMOLED ಡಿಸ್ಪ್ಲೇ ಫೋನ್ ಹೊಂದಿದೆ. ಇದು ಅತ್ಯಂತ ಸ್ಪಷ್ಟ ಮತ್ತು ಪ್ರಕಾಶಮಾನವಾದ ಚಿತ್ರಗಳನ್ನು ನೀಡುತ್ತದೆ. ಜೊತೆಗೆ 120Hz ರಿಫ್ರೆಶ್ ರೇಟ್ ಕಾರಣದಿಂದ ತುಂಬಾ ನಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಹೊಂದಿದೆ. ಕ್ಯಾಮೆರಾ ವಿಭಾಗ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. 50MP ಮುಖ್ಯ ಕ್ಯಾಮೆರಾ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಸೆಲ್ಫಿಗಾಗಿ ಇದು 50MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದ ಮತ್ತು ಮುಂಭಾಗದ ಕ್ಯಾಮೆರಾಗಳು ಎರಡೂ 4K ರೆಸಲ್ಯೂಶನ್‌ನಲ್ಲಿ 60fps ವೀಡಿಯೊ ರೆಕಾರ್ಡಿಂಗ್ ಮಾಡಲು ಸಮರ್ಥವಾಗಿದೆ.

ಲಾವಾ ಅಗ್ನಿ 4 ಹಾರ್ಡ್‌ವೇರ್ ಮತ್ತು ಬ್ಯಾಟರಿ:

ಅಗ್ನಿ 4 ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡಲು MediaTek Dimensity 8350 5G ಪ್ರೊಸೆಸರ್ ಇದೆ. ಇದು ವೇಗವಾದ ಸಾಧನಕ್ಕಾಗಿ 8GB LPDR5X RAM ಮತ್ತು ತ್ವರಿತ ಡೇಟಾ ಪ್ರವೇಶಕ್ಕಾಗಿ 256GB UFS 4.0 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಬಿಸಿಯಾಗುವುದನ್ನು ತಡೆಯಲು VC ಲಿಕ್ವಿಡ್ ಕೂಲಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ 66W ವೇಗದ ಚಾರ್ಜಿಂಗ್ ಬೆಂಬಲವಿದೆ. ಇದು ಕೇವಲ 19 ನಿಮಿಷಗಳಲ್ಲಿ ಬ್ಯಾಟರಿಯನ್ನು 50% ರಷ್ಟು ಚಾರ್ಜ್ ಮಾಡಬಲ್ಲದು. ಜೊತೆಗೆ ಇದು ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಕೀ ಅನ್ನು ಹೊಂದಿದೆ. ಇದನ್ನು ಟಾರ್ಚ್ ಕ್ಯಾಮೆರಾ ಅಥವಾ ಇತರ ಅಪ್ಲಿಕೇಶನ್‌ಗಳಿಗಾಗಿ ಶಾರ್ಟ್‌ಕಟ್ ಆಗಿ ಬಳಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :