Lava Agni 4 Launch Conformed
Lava Agni 4 Launch Conformed: ಲಾವಾ ತನ್ನ ಮುಂಬರಲಿರುವ ಪ್ರೀಮಿಯಂ ಸ್ಮಾರ್ಟ್ಫೋನ್ ಬಿಡುಗಡೆಗೆ ದಿನಾಂಕವನ್ನು ಕಂಫಾರ್ಮ್ ಮಾಡಿದ್ದೂ ಇದೆ 20ನೇ ನವಂಬರ್ 2025 ರಂದು ಬಿಡುಗಡೆಗೆ ಸಜ್ಜಾಗಿದೆ. ಇದರ ಬಗ್ಗೆ ಕಂಪನಿ ಸ್ವತಃ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ದೃಢಪಡಿಸಿದೆ. ಈ ಮುಂಬರುವ ಸ್ಮಾರ್ಟ್ಫೋನ್ ಬಳಸಲಾದ ಚಿಪ್‌ಸೆಟ್ ಅನ್ನು ಊಹಿಸಲು ಅಭಿಮಾನಿಗಳಿಂದ ಕೇಳುವ ಟೀಸರ್ ಅನ್ನು ಬ್ರಾಂಡ್ ಹಂಚಿಕೊಂಡಿದೆ. ಇದು ಪವರ್ಫುಲ್ ಚಿಪ್‌ಸೆಟ್ ಅನ್ನು ಸೂಚಿಸುತ್ತದೆ. ಪೋಸ್ಟರ್‌ನಲ್ಲಿರುವ ಡೈಮೆನ್ಸಿಟಿ ಲೋಗೋವನ್ನು ಆಧರಿಸಿದ್ದು ಇದು ಮೀಡಿಯಾ ಟೆಕ್ ಚಿಪ್‌ನಿಂದ ಚಾಲಿತವಾಗಲಿದೆ ಎಂದು ಕಂಫಾರ್ಮ್ ಮಾಡಿದೆ. ಹಾಗಾದ್ರೆ Lava Agni 4 ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
ಈ ಸ್ಮಾರ್ಟ್ಫೋನ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಹಿಂಭಾಗದ ಪ್ಯಾನಲ್ ಹೊಂದಿದ್ದು ಎರಡು ಸೆನ್ಸರ್ಗಳನ್ನು ಹೊಂದಿರುವ ಅಡ್ಡಲಾಗಿರುವ ಕ್ಯಾಮೆರಾ ಬಾರ್ “Agni” ಬ್ರಾಂಡಿಂಗ್ ಮತ್ತು ಮಧ್ಯದಲ್ಲಿ ಡ್ಯುಯಲ್-LED ಫ್ಲ್ಯಾಷ್ ಅನ್ನು ಹೊಂದಿರುತ್ತದೆ. ಈ ವಿನ್ಯಾಸವು ಫೋನ್ ಹಿಂದಿನ ಮಾದರಿಯಂತೆ ಎರಡನೇ ಡಿಸ್ಪ್ಲೇ ಹೊಂದಿರುವುದಿಲ್ಲ ಎಂದು ಸೂಚಿಸುತ್ತದೆ. ಫೋನ್ ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.78ಇಂಚಿನ AMOLED ಡಿಸ್ಟ್ರೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹೆಚ್ಚುವರಿಯಾಗಿ ಇದು ಡೈಮೆನ್ಸಿಟಿ 8350 ಚಿಪ್‌ಸೆಟ್ ಮತ್ತು UFS 4.0 ಸ್ಟೋರೇಜ್‌ನಿಂದ ಚಾಲಿತವಾಗಿದೆ ಎಂದು ವದಂತಿಗಳಿವೆ ಇದು ಸುಧಾರಿತ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುತ್ತದೆ. ಇತ್ತೀಚಿನ ನೆಮ್ಮೊ ಪ್ರಮಾಣೀಕರಣ ಪಟ್ಟಿಯು 7050mAh ಲಿಥಿಯಂ-ಐಯಾನ್ ಸೆಲ್ ಅನ್ನು ಸೂಚಿಸಿದಂತೆ ಫೋನ್ ದೊಡ್ಡ 7000mAh ಬ್ಯಾಟರಿಯನ್ನು ಸಹ ಒಳಗೊಂಡಿರಬಹುದು.
ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಪೂರ್ಣ HD+ ಡಿಸ್ಟ್ರೇಯನ್ನು ಹೊಂದಿರಬಹುದು. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು UFS 4.0 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಮುಂಬರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಎರಡು 50-ಮೆಗಾಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. IECEE ಪಟ್ಟಿಯ ಆಧಾರದ ಮೇಲೆ ಇದು 7000mAh ಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ಹೇಳಲಾಗುತ್ತದೆ.