itel Zeno 20 Max launching soon in India
ಭಾರತದಲ್ಲಿ ಮುಂಬರಲಿರುವ ಮತ್ತು ಸಿಕ್ಕಾಪಟ್ಟೆ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳಿಗೆ ಜನಪ್ರಿಯವಾಗಿರುವ ಐಟೆಲ್ (itel) ಈಗ ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಐಟೆಲ್ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ತನ್ನ Zeno 20 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು ಮತ್ತು ಈಗ ಬ್ರಾಂಡ್ ದೇಶದಲ್ಲಿ itel Zeno 20 Max ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಮುಂಬರುವ ಫೋನ್‌ನ ಮೈಕ್ರೋಸೈಟ್ ಅಮೆಜಾನ್‌ನಲ್ಲಿಯೂ ಸಹ ನೇರ ಪ್ರಸಾರವಾಗಿದೆ ಅಲ್ಲಿ ಕಂಪನಿಯು ಬಿಡುಗಡೆಗೂ ಮುನ್ನ ಅದರ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.ಮುಂಬರುವ ಫೋನ್‌ನ ವಿಶೇಷ ವೈಶಿಷ್ಟ್ಯಗಳನ್ನು ಹತ್ತಿರದಿಂದ ನೋಡೋಣ.
Also Read: ಅಮೆಜಾನ್‌ನಲ್ಲಿ ಇಂದು 43 ಇಂಚಿನ Smart TV ಅತ್ಯುತ್ತಮ ಫೀಚರ್ಗಳೊಂದಿಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ!
ಫೋನ್ ಅನೇಕ ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುತ್ತದೆ. ಈ ಫೋನ್‌ನ ಮೈಕ್ರೋಸಿಗ್ನಲ್ ಅಮೆಜಾನ್‌ನಲ್ಲಿ ಬಿಡುಗಡೆಯಾಗಿದ್ದು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ಸುಳಿವು ನೀಡಿದೆ. ಮೈಕ್ರೋಸೈಟ್ ಇದನ್ನು ಮೂರು ಬಣ್ಣಗಳಲ್ಲಿ ಪಟ್ಟಿ ಮಾಡಿದೆ. ಈ ಫೋನ್ ನೀಲಿ, ಕಪ್ಪು ಮತ್ತು ನೀಲಿ ಮತ್ತು ನೇರಳೆ ಸಂಯೋಜನೆಯ ಮಾದರಿಯ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸುವ ನಿರೀಕ್ಷೆ. ಇದರ ಹಿಂಭಾಗದ ಪ್ಯಾನಲ್ ಎರಡು ಕ್ಯಾಮೆರಾ ಸೆನ್ಸರ್ ಮತ್ತು ಎಲ್‌ಇಡಿ ಫ್ಲ್ಯಾಷ್ ಅನ್ನು ಹೊಂದಿರುವ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಮುಂಭಾಗದ ಡಿನ್ನೆ ಸೆಲ್ಪಿ ಕ್ಯಾಮೆರಾಕ್ಕಾಗಿ ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ಹೊಂದಿದೆ.
ಇದರ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಭಾಗದಲ್ಲಿವೆ. ಕೆಳಗಿನ ಅಂಚಿನಲ್ಲಿ ಸ್ಪೀಕರ್ ಗ್ರಿಲ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸಿಮ್ ಕಾರ್ಡ್ ಟ್ರೇ ಇದೆ. ಈ ಸ್ಮಾರ್ಟ್ ಫೋನ್ MIL-STD-810H ಮಾನದಂಡವನ್ನು ಅನುಸರಿಸುತ್ತದೆ ಮತ್ತು ವಿವಿಧ ಪರಿಸ್ಥಿತಿಗಳಿಗೆ ಅದರಲ್ಲೂ ತೇವಾಂಶ, ಆಘಾತ ಮತ್ತು ಕುಸಿತ, ಕಡಿಮೆ ತಾಪಮಾನ ಮತ್ತು ಹೆಚ್ಚಿನ ತಾಪಮಾನದ ಪರೀಕ್ಷಿಸಲಾಗಿದೆ. ಇದು IP54 ಧೂಳು ಮತ್ತು ನೀರಿನ ನಿರೋಧಕ ನಿರ್ಮಾಣವನ್ನು ಹೊಂದಿದೆ.
ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 35 ದಿನಗಳ ಸ್ಟ್ಯಾಂಡ್‌ಬೈ ಸ್ನಾ ಸಮಯದೊಂದಿಗೆ 31 ಗಂಟೆಗಳ ಟಾಕ್ ಟೈಮ್, 75 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಮತ್ತು 18 ಗಂಟೆಗಳ ವೀಡಿಯೊ ಸ್ಟ್ರೀಮಿಂಗ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಡಿಸ್ಟ್ರೇಯನ್ನು ಹೊಂದಿದೆ. ಇದು ಶಕ್ತಿಯುತ ಧ್ವನಿಗಾಗಿ DTS ಸರೌಂಡ್ ಸೌಂಡ್ ಅನ್ನು ಸಹ ನೀಡುತ್ತದೆ.