ಭಾರತದಲ್ಲಿ itel City 300 5G ಮೊಬೈಲ್ ಈಗ ಖರೀದಿಗೆ ಲಭ್ಯ; ಆಕರ್ಷಕ ಕಲರ್ ಆಯ್ಕೆ
ಭಾರತದಲ್ಲಿ ಐಟೆಲ್ ಸಿಟಿ 300 ಸ್ಮಾರ್ಟ್ಫೋನ್ ಖರೀದಿಗೆ ಲಭ್ಯ
ಐಟೆಲ್ ಸಂಸ್ಥೆಯ ಈ ಫೋನ್ 13 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದಿದೆ
ಐಟೆಲ್ನ ಈ ಫೋನ್ ಆಕ್ಟಾ-ಕೋರ್ T8200 5G ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ
ಐಟೆಲ್ ಮೊಬೈಲ್ ಸಂಸ್ಥೆಯು ಹೊಸದಾಗಿ itel City 300 5G ಸ್ಮಾರ್ಟ್ಫೋನ್ ಅನ್ನು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ ಮಾಡಿದ್ದು, ಈ ಮೂಲಕ ತನ್ನ ಉತ್ಪನ್ನಗಳ ಲಿಸ್ಟ್ ವಿಸ್ತರಿಸಿದೆ. ಈ ನೂತನ ಸ್ಮಾರ್ಟ್ಫೋನ್ ಡಾರ್ಕ್ ರೂಬಿ ಮತ್ತು ಮಿಸ್ಟ್ ಬೀಜ್ ಕಲರ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ T8200 5G ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ 16 ಗೋ ಎಡಿಷನ್ ಓಎಸ್ ಪಡೆದುಕೊಂಡಿದೆ. ಹಾಗೆಯೇ ಐಟೆಲ್ ಸಿಟಿ 300 5G ಮೊಬೈಲ್ 5,000mAh ಬ್ಯಾಟರಿ ಪಡೆದಿದೆ. ಹಾಗಾದರೆ ಐಟೆಲ್ ಕಂಪನಿಯ ಈ ಫೋನ್ ಬೆಲೆ, ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
itel City 300 5G ಮೊಬೈಲ್ ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಐಟೆಲ್ ಸಿಟಿ 300 5G ಫೋನ್ ಬಜೆಟ್ ದರದ ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ 4GB + 64GB ಸ್ಟೋರೇಜ್ ವೇರಿಯಂಟ್ 14,999 ರೂ.ಗಳ ಆರಂಭಿಕ ಬೆಲೆಯನ್ನು ಪಡೆದಿದೆ. ಈ ಮೊಬೈಲ್ ಆಫ್ಲೈನ್ ಸ್ಟೋರ್ಗಳಲ್ಲಿ ಲಭ್ಯವಿದೆ. ಇನ್ನು ಐಟೆಲ್ ಸಿಟಿ 300 5G ಫೋನ್ ಡಾರ್ಕ್ ರೂಬಿ ಮತ್ತು ಮಿಸ್ಟ್ ಬೀಜ್ ಕಲರ್ ಆಯ್ಕೆಗಳನ್ನು ಒಳಗೊಂಡಿದೆ.
ಐಟೆಲ್ ಸಿಟಿ 300 5G ಫೋನ್ ಮೊಬೈಲ್ ಫೀಚರ್ಸ್
ಐಟೆಲ್ ಸರಣಿಯ ಎರಡೂ ಮೊಬೈಲ್ಗಳು 6.75 ಇಂಚಿನ HD+ LCD ಟಚ್ಸ್ಕ್ರೀನ್ ಅನ್ನು ಹೊಂದಿದ್ದು, ಇದು 120Hz ವರೆಗಿನ ರಿಫ್ರೆಶ್ ರೇಟ್ ಮತ್ತು 650 ನಿಟ್ಸ್ (nits) ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ. ಹಾಗೆಯೇ ಐಟೆಲ್ ಸಿಟಿ 300 5G ಮಾದರಿಯು 6.7 ಇಂಚಿನ HD+ LCD ಟಚ್ಸ್ಕ್ರೀನ್ ಅನ್ನು ಹೊಂದಿದ್ದು, ಈ ಫೋನ್ 5,000mAh ಬ್ಯಾಟರಿ ಒಳಗೊಂಡಿದೆ.
ಐಟೆಲ್ ಸಿಟಿ 300 5G ಮಾದರಿಯು ಹಿಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಇದು ಆಟೋಫೋಕಸ್ ಸೌಲಭ್ಯ ಆಯ್ಕೆಗಳನ್ನು ಒಳಗೊಂಡಿದೆ. ಮತ್ತೊಂದೆಡೆ ಐಟೆಲ್ ಸಿಟಿ 300 5G ಮಾದರಿಯು ಹಿಂಭಾಗದಲ್ಲಿ ಬೇಸಿಕ್ ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಇದರಲ್ಲಿಯೂ ಆಟೋಫೋಕಸ್ ಸೌಲಭ್ಯವಿದೆ. ಇದಲ್ಲದೆ ರೆಬೆಲ್ ಪ್ರೊ ಮಾದರಿಯು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.