iQOO Z9 Lite 5G Price Cut
iQOO Z9 Lite 5G Price Cut: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಐಕ್ಯೂ (iQOO) ತನ್ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ iQOO Z9 Lite 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್‌ನಲ್ಲಿ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಆಸಕ್ತ ಬಳಕೆದಾರರು ಅಮೆಜಾನ್ ಮೂಲಕ ಬರೋಬ್ಬರಿ 5000mAh ಮತ್ತು 15W ಫಾಸ್ಟ್ ಚಾರ್ಜಿಂಗ್ ಮತ್ತು MediaTek Dimensity 6300 ಚಿಪ್‌ಸೆಟ್‌ನೊಂದಿಗೆ ಬರುವ ಈ ಸ್ಮಾರ್ಟ್ಫೋನ್ HDFC ಮತ್ತು ICICI ಕಾರ್ಡ್ ಬಳಸುವ ಮೂಲಕ ಬರೋಬ್ಬರಿ ₹1000 ರೂಗಳ ಡಿಸ್ಕೌಂಟ್ ಜೊತೆಗೆ ಸುಮಾರು ₹10,850 ರೂಗಳವರೆಗಿನ ವಿನಿಮಯ ಬೋನಸ್ ಸಹ ಪಡೆಯಬಹುದು.
ಪ್ರಸ್ತುತ ಅಮೆಜಾನ್ ಮೂಲಕ ಈ ಸ್ಮಾರ್ಟ್ಫೋನ್ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹10,499 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹11,499ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ಈ ಸ್ಮಾರ್ಟ್ಫೋನ್ ಅನ್ನು HDFC ಮತ್ತು ICICI ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ಬರೋಬ್ಬರಿ 1000 ರೂಗಳ ಡಿಸ್ಕೌಂಟ್ ಜೊತೆಗೆ ಆರಂಭಿಕ ಕೇವಲ ₹9,499 ರೂಗಳಿಗೆ ಖರೀದಿಸುವ ಅವಕಾಶವನ್ನು ಪಡೆಯಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ iQOO Z9 Lite 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಆರಂಭಿಕದೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹9,900 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: Best 5G Smartphones: ಸುಮಾರು 10,000 ರೂಪಾಯಿಗೆ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5G ಸ್ಮಾರ್ಟ್‌ಫೋನ್‌ಗಳು!
iQoo Z9 Lite 5G ಸ್ಮಾರ್ಟ್ಫೋನ್ 6.56 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು 90Hz ರಿಫ್ರೆಶ್ ದರ ಮತ್ತು 840 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.ಸ್ಮಾರ್ಟ್‌ಫೋನ್ ಸೋನಿಯಿಂದ 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ.
ಇದು MediaTek Dimensity 6300 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಹೆಚ್ಚುವರಿಯಾಗಿ ಫೋನ್ 6GB ವರ್ಚುವಲ್ RAM ನೊಂದಿಗೆ ಬರುತ್ತದೆ. iQoo Z9 Lite 5G ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ 14 ಅನ್ನು ರನ್ ಮಾಡುತ್ತದೆ. ಇದು ಎರಡು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ಪಡೆಯುತ್ತದೆ. ಸ್ಮಾರ್ಟ್‌ಫೋನ್ 15W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಸಹ ಹೊಂದಿದೆ. ಇದಲ್ಲದೆ ಇದು IP64 ಪ್ರಮಾಣೀಕರಣ, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.