ಇಂದು ಭಾರತದಲ್ಲಿ iQOO Z11 Lite ಮೊಬೈಲ್‌ ಲಾಂಚ್‌; ಕುತೂಹಲ ಮೂಡಿಸಿದ ಫೀಚರ್ಸ್‌

HIGHLIGHTS

ಇಂದು (ಜುಲೈ 24 ರಂದು) ಐಕ್ಯೂ Z11 ಲೈಟ್ ಮೊಬೈಲ್‌ ಬಿಡುಗಡೆ

ಐಕ್ಯೂ Z11 ಲೈಟ್ ಸ್ಮಾರ್ಟ್‌ಫೋನ್‌ 50MP ಕ್ಯಾಮೆರಾ ರಚನೆ ಪಡೆದಿರಲಿದೆ

ಈ ಮೊಬೈಲ್‌ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿರಲಿದೆ

ಇಂದು ಭಾರತದಲ್ಲಿ iQOO Z11 Lite ಮೊಬೈಲ್‌ ಲಾಂಚ್‌; ಕುತೂಹಲ ಮೂಡಿಸಿದ ಫೀಚರ್ಸ್‌

ಜನಪ್ರಿಯ ಐಕ್ಯೂ ಕಂಪನಿಯು ಇದೀಗ ಹೊಸದಾಗಿ iQOO Z11 Lite ಮೊಬೈಲ್‌ ಅನ್ನು ಇಂದು (ಜುಲೈ 24 ರಂದು) ಲಾಂಚ್ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್ಫೋನ್‌ ಲಾಂಚ್ ಕುರಿತು ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಅಂದಹಾಗೆ ಲಗ್ಗೆ ಇಡಲಿರುವ ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ OriginOS 6 ಆಂಡ್ರಾಯ್ಡ್‌ 16 ಓಎಸ್‌ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಇನ್ನು ಈ ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಹಾಗಾದರೆ ಐಕ್ಯೂ Z11 ಲೈಟ್ ಮೊಬೈಲ್‌ನ ಲಾಂಚ್‌ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Samsung Galaxy Watch 9 ಬಿಡುಗಡೆ: ಹೊಸ ಸ್ನಾಪ್‌ಡ್ರಾಗನ್ ವೇರ್ ಎಲೈಟ್ ಚಿಪ್‌ ಸೌಲಭ್ಯ

ಇಂದು iQOO Z11 Lite ಫೋನ್‌ ಲಾಂಚ್

ಐಕ್ಯೂ ಕಂಪನಿಯು ತನ್ನ ಹೊಸ ಐಕ್ಯೂ Z11 ಲೈಟ್ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅಂದಹಾಗೆ ಈ ಫೋನ್‌ ಇಂದು (ಜುಲೈ 24 ರಂದು) ಮಧ್ಯಾಹ್ನ 12 ಗಂಟೆಗೆ ಲಾಂಚ್ ಆಗಲಿದೆ. ಈಗಾಗಲೇ ಅಮೆಜಾನ್‌ನಲ್ಲಿ ಈ ಫೋನ್‌ಗಳಿಗಾಗಿ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಬಿಡುಗಡೆಯ ನಂತರ ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಮೂಲಕ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿ ದೃಢಪಡಿಸಿದೆ. ಇನ್ನು ಈ ಫೋನ್‌ 4GB + 128GB ಹಾಗೂ 6GB + 128GB ಸ್ಟೋರೇಜ್ ವೇರಿಯಂಟ್‌ಗಳ ಆಯ್ಕೆ ಬರಲಿದೆ ಎನ್ನಲಾಗಿದೆ. ಹಾಗೆಯೇ ಸೋಲಾರ್‌ ಫೇಮ್‌ ಮತ್ತು ಮೀಡ್‌ನೈಟ್‌ ಬ್ಲೂ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ.

iQOO Z11 Lite Launching in India on July 24

ಐಕ್ಯೂ Z11 ಲೈಟ್ ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಮುಂಬರುವ ಈ ಫೋನ್‌ 6.74 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ ಜೊತೆಗೆ 1,200 nits ವರೆಗಿನ ಹೈ ಬ್ರೈಟ್‌ನೆಸ್ ಸೌಲಭ್ಯ ಪಡೆದಿರಬಹುದು. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ OriginOS 6 – ಆಂಡ್ರಾಯ್ಡ್‌ 16 ಓಎಸ್‌ ಸಪೋರ್ಟ್‌ ಪಡೆದಿರುವ ಸಾಧ್ಯತೆಗಳು ಇವೆ.

ಐಕ್ಯೂ Z11 ಲೈಟ್ ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರುವ ನಿರೀಕ್ಷೆಗಳು ಇವೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ನಲ್ಲಿ ಇರಬಹುದು ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್‌ ಬಲ ಪಡೆದಿರಲಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಬಹುದು ಎನ್ನಲಾಗಿದೆ. ಹಾಗೆಯೇ ಧೂಳು ಮತ್ತು ನೀರು-ನಿರೋಧಕ್ಕಾಗಿ ಇದು IP65 ರೇಟಿಂಗ್ ಸೌಲಭ್ಯ ಹೊಂದಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile