ನಾಳೆ iQOO Z11 Lite ಮೊಬೈಲ್‌ ಫಸ್ಟ್‌ ಸೇಲ್‌ ಪ್ರಾರಂಭ; ಫೀಚರ್ಸ್‌ ಗಮನಿಸಿ!

HIGHLIGHTS

ನಾಳೆಯಿಂದ ಹೊಸ ಐಕ್ಯೂ Z11 ಲೈಟ್‌ ಫೋನ್‌ ಖರೀದಿಗೆ ಲಭ್ಯ

ಐಕ್ಯೂದ ಈ ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಪಡೆದಿದೆ

ಈ ಹೊಸ ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದುಕೊಂಡಿದೆ

ನಾಳೆ iQOO Z11 Lite ಮೊಬೈಲ್‌ ಫಸ್ಟ್‌ ಸೇಲ್‌ ಪ್ರಾರಂಭ; ಫೀಚರ್ಸ್‌ ಗಮನಿಸಿ!

ಐಕ್ಯೂ ಸಂಸ್ಥೆಯ ನೂತನ iQOO Z11 Lite ಮೊಬೈಲ್ ಆಕರ್ಷಕ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ನಾಳೆ (ಜುಲೈ 30 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಶುರು ಮಾಡಲಿದೆ. ಈ ನೂತನ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರುವ ಜೊತೆಗೆ 6,500mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಹಾಗೆಯೇ ಇದು ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ ಮಿಡ್‌ನೈಟ್ ಬ್ಲೂ ಮತ್ತು ಸೋಲಾರ್ ಫ್ಲೇಮ್ ಕಲರ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹಾಗಾದರೇ ಐಕ್ಯೂ Z11 ಲೈಟ್‌ ಮೊಬೈಲ್‌ನ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 6,000mAh ಬ್ಯಾಟರಿ ಇರುವ Lava Bold N2 ಮೊಬೈಲ್‌ ಈಗ ಸಸ್ತಾ ಬೆಲೆಯಲ್ಲಿ ಲಭ್ಯ!

ನಾಳೆ iQOO Z11 Lite ಖರೀದಿಗೆ ಲಭ್ಯ

ದೇಶೀಯ ಮಾರುಕಟ್ಟೆಯಲ್ಲಿ ಐಕ್ಯೂ ಕಂಪನಿಯ ಐಕ್ಯೂ Z11 ಲೈಟ್‌ ಮೊಬೈಲ್‌ ನಾಳೆ (ಜುಲೈ 30 ರಿಂದ) ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ ಇ ಕಾಮರ್ಸ್‌ ಮೂಲಕ ಖರೀದಿಗೆ ಲಭ್ಯವಾಗಿದೆ. ಈ ಮೊಬೈಲ್‌ನ 4GB + 128GB ವೇರಿಯಂಟ್‌ ಬೆಲೆಯು 19,499 ರೂ.ಗಳು ಆಗಿದೆ. 6GB + 128GB ವೇರಿಯಂಟ್‌ ಬೆಲೆಯು 21,499 ರೂ.ಗಳ ಪ್ರೈಸ್‌ಟ್ಯಾಗ್‌ ಪಡೆದಿದೆ. ಇದೇ ರೀತಿ 6GB + 256GB ವೇರಿಯಂಟ್‌ ಬೆಲೆಯು 24,499 ರೂ.ಗಳು ಆಗಿದೆ. ಈ ಫೋನ್‌ ಈ ಫೋನ್‌ ಮಿಡ್‌ನೈಟ್ ಬ್ಲೂ ಮತ್ತು ಸೋಲಾರ್ ಫ್ಲೇಮ್ ಕಲರ್‌ ಆಯ್ಕೆಗಳಲ್ಲಿ ಸಿಗಲಿದೆ. ಈ ಫೋನ್‌ ಅಮೆಜಾನ್‌, ಕಂಪನಿಯ ಆನ್‌ಲೈನ್‌ ಸ್ಟೋರ್‌ ಸೇರಿದಂತೆ ಪ್ರಮುಖ ರಿಟೇಲ್‌ ಸ್ಟೋರ್‌ ಮೂಲಕ ಸೇಲ್‌ಗೆ ಲಭ್ಯ.

iQOO Z11 Lite sale
iQOO Z11 Lite sale

ಐಕ್ಯೂ Z11 ಲೈಟ್‌ ಮೊಬೈಲ್‌ ಫೀಚರ್ಸ್‌

ಐಕ್ಯೂ Z11 ಲೈಟ್‌ ಮೊಬೈಲ್‌ 6.74 ಇಂಚಿನ HD LCD ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಈ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಪಡೆದಿದೆ. ಹಾಗೆಯೇ ಡಿಸ್‌ಪ್ಲೇಯು 1,600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಸೌಲಭ್ಯ ಪಡೆದುಕೊಂಡಿದೆ. ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 4GB + 128GB, 6GB + 128GB ಹಾಗೂ 6GB + 256GB ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ ಆಂಡ್ರಾಯ್ಡ್‌ 16 ಆಧಾರಿತ OriginOS 6 ಓಎಸ್ ನೊಂದಿಗೆ ಕಾರ್ಯನಿರ್ವಹಿಸಲಿದೆ.

ಹಾಗೆಯೇ ಐಕ್ಯೂ Z11 ಲೈಟ್‌ ಮೊಬೈಲ್‌ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್‌ 6,500mAh ಬ್ಯಾಟರಿ ಸಪೋರ್ಟ್‌ ಜೊತೆಗೆ 44W ಫ್ಲ್ಯಾಶ್‌ಚಾರ್ಜ್ ಹಾಗೂ ರಿವರ್ಸ್ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile