iQOO Z10 India Launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ iQOO ತನ್ನ ಮುಂಬರಲಿರುವ ಹೊಸ iQOO Z10 ಸ್ಮಾರ್ಟ್ಫೋನ್ ಬಿಡುಗಡೆಯ ಡೇಟ್ ಈಗ ಕಂಫಾರ್ಮ್ ಮಾಡಿದೆ. ಈ ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದದಾದರೆ ಬರೋಬ್ಬರಿ 7300mAh ಬ್ಯಾಟರಿ ಮತ್ತು ಪವರ್ಫುಲ್ Snapdragon 7s Gen 3 ಪ್ರೊಸೆಸರ್ನೊಂದಿಗೆ ಮತ್ತು ಆನೇಕ ಫೀಚರ್ಗಳೊಂದಿಗೆ ಫೋನ್ ಮುಂದಿನ ವಾರ ಅಂದರೆ 11ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದರ ಬಗ್ಗೆ ಸ್ವತಃ ಐಕ್ಯೂ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರಕಟಿಸಿದೆ. ಹಾಗಾದ್ರೆ ಈ iQOO Z10 ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ನಮಗೆ ತಿಳಿದಿರುವ ಒಂದೀಷ್ಟು ಮಾಹಿತಿಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿರುವ ಈ iQOO Z10 ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 21,999 ರೂಗಳಿಗೆ ಬಿಡುಗಡೆಗೊಳಿಸಲು ನಿರೀಕ್ಷಿಸಲಾಗಿದ್ದು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 22,999 ರೂಗಳಿಗೆ ಬಿಡುಗಡೆಗೊಳಿಸಲು ನಿರೀಕ್ಷಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು 2000 ರೂಗಳ ಕಾರ್ಡ್ ಡಿಸ್ಕೌಂಟ್ ಸಹ ನೀಡುವುದಾಗಿ ನಿರೀಕ್ಷಿಸಲಾಗಿದೆ. ಆದರೆ ಇದರ ಅಸಲಿ ಬೆಲೆ ಮತ್ತು ಆಫರ್ಗಳಿಗಾಗಿ ಬಿಡುಗಡೆಯವರೆಗೆ ಅಂದೆರೇ 11ನೇ ಏಪ್ರಿಲ್ 2025 ವರವೆಗೆ ಕಾಯಬೇಕಿದೆ.
Related Article: 8GB RAM ಮತ್ತು 50MP ಕ್ಯಾಮೆರಾವುಳ್ಳ Motorola Edge 60 Fusion ಬಿಡುಗಡೆ! ಬೆಲೆಯೊಂದಿಗೆ ಬೆಸ್ಟ್ ಫೀಚರ್‌ಗಳೇನು ತಿಳಿಯಿರಿ!
iQOO Z10 ಅದ್ಭುತ ಡಿಸ್ಪ್ಲೇ ಗುಣಮಟ್ಟಕ್ಕಾಗಿ 1.5K ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ ಫ್ಲಾಟ್ OLED LTPS ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಖಂಡಿತವಾಗಿಯೂ ಬಳಕೆದಾರರ ಮಾಧ್ಯಮ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. iQOO Z10 ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಹಿಂಭಾಗದಲ್ಲಿ 2MP ಸೆಕೆಂಡರಿ ಡೆಪ್ತ್ ಸೆನ್ಸರ್ ಜೊತೆಗೆ 50MP ಪ್ರೈಮರಿ ಸೆನ್ಸರ್ ಇರಲಿದ್ದು ಅದ್ಭುತ ಸೆಲ್ಫಿಗಳನ್ನು ತೆಗೆದುಕೊಳ್ಳಲು 16MP ಮುಂಭಾಗದ ಕ್ಯಾಮೆರಾ ಕೂಡ ಇರಲಿದೆ.
ಅಗತ್ಯವಿರುವ ಎಲ್ಲಾ ಬಹುಕಾರ್ಯಕ ಕಾರ್ಯಾಚರಣೆಗಳನ್ನು ನಿರ್ವಹಿಸಲು ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಅಥವಾ ಸ್ನಾಪ್‌ಡ್ರಾಗನ್ 7s ಜೆನ್ 3 ಅನ್ನು ಒಳಗಡೆ ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ ಈ ಚಿಪ್ ಗೇಮರುಗಳಿಗಾಗಿ ಅದ್ಭುತವಾಗಿದೆ. ಅಂದರೆ ನೀವು ಇತ್ತೀಚಿನ ಆಂಡ್ರಾಯ್ಡ್ ಆಟಗಳನ್ನು ಸರಾಗವಾಗಿ ಆಡಬಹುದು. iQOO Z10 ದೊಡ್ಡ 7300mAh ಬ್ಯಾಟರಿಯನ್ನು ಹೊಂದಿದ್ದು ಇದು ಇಡೀ ದಿನ ಕಾರ್ಯನಿರ್ವಹಿಸಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಈ ಬೃಹತ್ ಬ್ಯಾಟರಿಯನ್ನು 90W ವೈರ್ಡ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಬಹುದು.