iQOO Neo 10 VS iQOO Neo 10R
iQOO Neo 10 Launch: ಭಾರತದಲ್ಲಿ ಚೀನಾದ ಜನಪ್ರಿಯ ಗೇಮಿಂಗ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುವ ಐಕ್ಯೂ (iQOO) ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ iQOO Neo 10 ಅತಿ ಶೀಘ್ರದಲ್ಲೇ ಬಿಡುಗಡೆಯಗಲಿದ್ದು ಫಸ್ಟ್ ಲುಕ್ ಹೊರ ಬಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ಡ್ಯುಯಲ್ ಟೊನ್ ವಿನ್ಯಾಸದೊಂದಿಗೆ ಒಳೆಯುವ ಆರೆಂಜ್ ಬಣ್ಣವನ್ನು ಹೊಂದಿದ್ದು ಆರಂಭಿಕ ಸುಮಾರು 30,000 ರೂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಆದರೆ ಪ್ರಸ್ತುತ ಲುಕ್ ಹೊರತು ಯಾವುದೇ ಮಾಹಿತಿ ಅಧಿಕೃತವಾಗಿ ಬಂದಿಲ್ಲ ಎನ್ನುವುದು ಗಮನಿಸಬೇಕಿರುವ ಮಾಹಿತಿಯಾಗಿದೆ. ಹಾಗಾದ್ರೆ iQOO Neo 10 ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ iQOO Neo 10 ಸ್ಮಾರ್ಟ್ಫೋನ್ ಬಗ್ಗೆ ಈಗಾಗಲೇ ಮೇಲೆ ತಿಳಿಸಿರುವಂತೆ ಲುಕ್ ಹೊರತು ಬೇರೆ ಯಾವುದೇ ಫೀಚರ್ಗಳು ಅಧಿಕೃತವಾಗಿ ಬಿಡುಗಡೆಯಾಗಿಲ್ಲವಾದರೂ ಸ್ಮಾರ್ಟ್ಫೋನ್ ಲುಕ್ ಆಧಾರವಾಗಿ ಒಂದಿಷ್ಟು ಫೆಯಾತ್ರೆ ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಮೊದಲಿಗೆ ಈ iQOO Neo 10 ಸ್ಮಾರ್ಟ್ಫೋನ್ ಈಗಾಗಲೇ ಇದೆ ಸರಣಿಯಲ್ಲಿ ಕಳೆದ ತಿಂಗಳು ಬಿಡುಗಡೆಯಾದ iQOO Neo 10 Turbo ಸ್ಮಾರ್ಟ್ಫೋನ್ ಮಾದರಿಯಲ್ಲೇ ಬರುವುದಾಗಿ ನಿರೀಕ್ಷಿಸಲಾಗಿದೆ.
ಈ ಮೂಲಕ iQOO Neo 10 ಸ್ಮಾರ್ಟ್ಫೋನ್ ಅದೇ 6.78 ಇಂಚಿನ FHD+ AMOLED 144Hz ಡಿಸ್ಪ್ಲೇಯೊಂದಿಗೆ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವ ನೀರಿಕ್ಷೆಗಳಿವೆ. ಅಲ್ಲದೆ ಸ್ಮಾರ್ಟ್ಫೋನ್ ಅದೇ ಡುಯಲ್ ಪವರ್ಫುಲ್ ಸ್ನಾಪ್‌ಡ್ರಾಗನ್ ಚಿಪ್ ಮತ್ತು 50MP ಪ್ರೈಮರಿ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ ಸುಮಾರು 5500mAh ಬ್ಯಾಟರಿಯನ್ನು ನಿರೀಕ್ಷಿಸಲಾಗಿದೆ. ಆದರೆ ಇದರ ಮಾಹಿತಿಯನ್ನು ಕಂಪನಿ ಪೋಸ್ಟ್ ಮಾಡುವಾಗ ಇದರ ಫೀಚರ್ಗಳನ್ನೂ ನಾನು ನಿಮಗೆ ತಿಳಿಸುತ್ತಿರುತ್ತೇನೆ.
ಇದನ್ನೂ ಓದಿ: Best Air Coolers: ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ ಅತ್ಯತ್ತಮ ಏರ್ ಕೂಲರ್ಗಳ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳು!
ಈ ಮುಂಬರಲಿರುವ iQOO Neo 10 ಸ್ಮಾರ್ಟ್ಫೋನ್ ನಿಮಗೆ ಅದೇ ಎರಡು ಮಾದರಿಗಳಲ್ಲಿ ಬರುವ ನಿರೀಕ್ಷೆಗಳಿವೆ. ಮೊದಲನೇಯದು 8GB RAM ಮತ್ತು 128GB ಸ್ಟೋರೇಜ್ ಮಡಿಯನ್ನು ಸುಮಾರು 28,499 ರೂಗಳಿಗೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಸುಮಾರು 29,499 ರೂಗಳಿಗೆ ನಿರೀಕ್ಷಿಸಲಾಗಿದೆ. ಈ iQOO Neo 10 ಸ್ಮಾರ್ಟ್ಫೋನ್ ಅನ್ನು ನೀವು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿದ್ದು ಬ್ಯಾಂಕ್ ಆಫರ್ ಜೊತೆಗೆ ಅತ್ಯುತ್ತಮ ಕೊಡುಗೆಗಳನ್ನು ಸಹ ನಿರೀಕ್ಷಿಸಲಾಗಿದೆ.