iQOO 15R Conformed to lunch in India Soon
ಐಕ್ಯೂ ಸಂಸ್ಥೆಯು ತನ್ನ ಹೊಚ್ಚ ಹೊಸ ಫ್ಲ್ಯಾಗ್‌ಶಿಪ್ ಸರಣಿಯನ್ನು ವಿಸ್ತರಿಸುತ್ತಿದೆ ಭಾರತದಲ್ಲಿ iQOO 15R ಅನ್ನು ಬಿಡುಗಡೆ ಮಾಡಲಾಗಿದೆ ಅಧಿಕೃತವಾಗಿ ಖಚಿತಪಡಿಸಿದೆ. ಕಳೆದ ವರ್ಷದ ಕೊನೆಯಲ್ಲಿ iQOO 15 ಬಿಡುಗಡೆಯಾದ ನಂತರ ಈಗ iQOO ಇಂಡಿಯಾ ಸಿಐಒ ನಿಪುನ್ ಮರ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಪವರ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಹೊಸ ಫೋನ್‌ನ ಟೀಸರ್ ಹಂಚಿಕೊಂಡಿದ್ದಾರೆ. ಇದು ಪ್ರೀಯಂ ಮಿಡ್-ರೇಂಜ್ ಅತಿ ಹೆಚ್ಚು ಪವರ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿರುತ್ತದೆ. ಗೇಮರ್ಸ್ ಮತ್ತು ಟೆಕ್ ಪ್ರಿಯರನ್ನು ಸೆಳೆಯಲು ಸಿದ್ಧವಾಗಿದೆ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ವಿಶಿಷ್ಟವಾದ ಚೌಕಾಕಾರದ ವಿನ್ಯಾಸ ಮತ್ತು ಸುಂದರವಾದ ಕ್ಯಾಮೆರಾ ಮ್ಯಾಡ್ಯೂಲ್ ಭಾರೀ ಕುತೂಹಲ ಮೂಡಿಸಿದೆ.
Also Read: Realme P4 Power ಸ್ಮಾರ್ಟ್ಫೋನ್ ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯನ್ನು ಘೋಷಿಸಿದ ರಿಯಲ್‌ಮಿ!
iQOO 15R ಒಂದು ಅದ್ಭುತ ಪವರ್‌ಹೌಸ್ ಆಗಿರುತ್ತದೆ ಇದರಲ್ಲಿ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್ ಇರಲಿದೆ ಎಂದು ವರದಿಯಾಗಿದೆ. ಅತಿ ವೇಗದ ಪ್ರೊಸೆಸರ್ ಸೂಚಿಸಲು ಮಲ್ಟಿ-ಟಾಸ್ಕಿಂಗ್ ಮತ್ತು ಹೈ-ಎಂಡ್ ಗೇಮಿಂಗ್ ಮಾಡುವುದು ತುಂಬಾ ಸುಲಭ. ಲೀಕ್ ಆಗಿರುವ ಮಾಹಿತಿಯ ಪ್ರಕಾರ ಈ ಫೋನ್ 16GB LPDDR5X RAM ಮತ್ತು UFS 4.1 ಸ್ಟೋರೇಜ್ ಹೊಂದಿರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬರೋಬ್ಬರಿ 7,600mAh ನ ಬೃಹತ್ ಬ್ಯಾಟರಿ ಇರುತ್ತದೆ. ಇದನ್ನು ಚಾರ್ಜ್ ಮಾಡಲು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ. ಫೋನ್ ಅತಿ ಬೇಗನೆ ಚಾರ್ಜ್ ಆಗುವುದಲ್ಲದೆ ದಿನವಿಡೀ ಬಾಳಿಕೆ ಬರುತ್ತದೆ.
ನೋಡುವುದಕ್ಕೆ ಈ ಫೋನ್ ತುಂಬಾ ಪ್ರಿಯಮ್ ಆಗಿದ್ದು 6.59-ಇಂಚಿನ 1.5K AMOLED ಡಿಸ್ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುವುದರಿಂದ ಪರದೆಯು ತುಂಬಾ ಸ್ಮೂತ್ ಆಗಿರುತ್ತದೆ. ಜೊತೆಗೆ ಬಿಸಿಲಿನಲ್ಲಿಯೂ ತೆರೆಯಲು ಸ್ಪಷ್ಟವಾಗಿ ಕಾಣಲು 5,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡಲಾಗಿದೆ. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ ಹಿಂಭಾಗದಲ್ಲಿ ಚೆಕರ್ಡ್-ಪ್ಯಾಟರ್ನ್ ಮತ್ತು ಮೆಟಲ್ ಫ್ರೇಮ್ ಇರಲಿದೆ ಫೋನ್‌ಗೆ ಗಟ್ಟಿಮುಟ್ಟಾದ ಲುಕ್ ನೀಡಲಾಗಿದೆ. ಅಷ್ಟೇ ಅಲ್ಲದೆ ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಇದು IP68/IP69 ರೇಟಿಂಗ್ ಮತ್ತು ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲ್ ಫಿಂಗರ್ ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ.
ಕೇವಲ ಗೇಮಿಂಗ್ ಮಾತ್ರವಲ್ಲದೆ ಫೋಟೋಗ್ರಾಫಿಗೂ iQOO 15R ಮಾದರಿಯಲ್ಲಿದೆ. ಇದರಲ್ಲಿ 200MP ನ ಪ್ರಮುಖ ಕ್ಯಾಮೆರಾ (OIS) ಸೌಲಭ್ಯದೊಂದಿಗೆ ಇರುವ ಸಾಧ್ಯತೆಯಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಇರುತ್ತದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಅಮೆಜಾನ್ ಮತ್ತು iQOO ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಕಂಪನಿಯು ನಿಖರವಾದ ಬಿಡುಗಡೆಯ ದಿನಾಂಕವನ್ನು ಇನ್ನೂ ತಿಳಿಸಿಲ್ಲವಾದರೂ ಮುಂದಿನ ತಿಂಗಳು ಅಂದರೆ ಫೆಬ್ರವರಿ 2026 ಸುಮಾರಿಗೆ ಇದು ಬಿಡುಗಡೆಯಾಗುತ್ತದೆ ಅಂದಾಜಿಸಲಾಗಿದೆ. ಇದರ ಬೆಲೆ ಅಂದಾಜು ₹45,000 ರಿಂದ ₹48,000 ಇರಬಹುದು.