iQOO 15 launched in India Check price Specs features and other details
iQOO 15 launched: ಭಾರತದಲ್ಲಿ ಇಂದು ಐಕ್ಯೂ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ iQOO 15 ಬಿಡುಗಡೆಯಾಗಿದ್ದು ಇದರ ಆಫರ್ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ವಿವರಿಸಲಾಗಿದೆ. ಈ ಫೋನ್ ಎದ್ದು ಕಾಣುವ ಫೀಚರ್ಗಳೆಂದರೆ ಅದರ ಬೃಹತ್ 7000mAh ಸಿಲಿಕಾನ್-ಆನೋಡ್ ಬ್ಯಾಟರಿ ಇದು ಅಲ್ಟ್ರಾ-ಫಾಸ್ಟ್ 100W ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. iQOO 15 ಫೋನ್ ಉನ್ನತ-ಕಾರ್ಯಕ್ಷಮತೆ ಮತ್ತು ಗೇಮಿಂಗ್ ವಿಭಾಗವನ್ನು ಗುರಿಯಾಗಿಟ್ಟುಕೊಂಡು ಉನ್ನತ ಶ್ರೇಣಿಯ ವಿಶೇಷಣಗಳನ್ನು ಹೊಂದಿದೆ.
ಪ್ರಸ್ತುತ iQOO 15 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹72,999 ರೂಗಳಿಗೆ ಮತ್ತು ಇದರ ಮತ್ತೊಂದು 16GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹79,999 ರೂಗಳಿಗೆ ಪಟ್ಟಿ ಪರಿಚಯಿಸಲಾಗಿದೆ. ಕಂಪನಿ iQOO 15 ಸ್ಮಾರ್ಟ್ಫೋನ್ ಪ್ರಸ್ತುತ ಮ್ಯಾಟ್ ಬ್ಲಾಕ್ ಮತ್ತು ಲೆಜೆಂಡ್ ಆವೃತ್ತಿಗಳಲ್ಲಿ ಪರಿಚಯಿಸಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 7000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ iQOO 15 ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 64,999 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು. ಈ iQOO 15 ಸ್ಮಾರ್ಟ್ಫೋನ್ ಪಾಸ್ ಹೊಂದಿರುವವರಿಗೆ 27ನೇ ನವೆಂಬರ್ನಿಂದ ಲಭ್ಯವಾಗಲಿದ್ದು ಸಾಮಾನ್ಯ ಜನರಿಗೆ 1ನೇ ಡಿಸೆಂಬರ್ 2025 ರಿಂದ ಲಭ್ಯವಾಗಲಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸೈಟ್ ಮೂಲಕ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ.
Also Read: Aadhaar Update: ಮುಂದಿನ ತಿಂಗಳಿಂದ ಹೊಸ ನಿಯಮಗಳನ್ನು ತರಲು ಸಜ್ಜಾಗಿರುವ UIDAI
iQOO 15 ಸ್ಮಾರ್ಟ್ಫೋನ್ 6.85 ಇಂಚಿನ Samsung 2K M14 LEAD OLED ಡಿಸ್ಪ್ಲೇ ಪೂರ್ತಿ 144Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. iQOO 15 ಫೋನ್ ಕಾಮೆರದಲ್ಲಿ 50MP ಸೋನಿ IMX921 ಸೆನ್ಸರ್ ಮತ್ತೊಂದು 50MP IMX882 ಮತ್ತು ಕೊನೆಯದಾಗಿ ಇದರ 50MP ಅಲ್ಟ್ರಾ ವೈಡ್ ಲೆನ್ಸ್ ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
iQOO 15 ಫೋನ್ Qualcomm Snapdragon 8 Elite Gen 5 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಜೊತೆಗೆ ColorOS 16 ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, eSIM Support, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ iQOO 15 ಸ್ಮಾರ್ಟ್ಫೋನ್ 7000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 100W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 3 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.