ಭಾರತದಲ್ಲಿ iQOO 15 ಸ್ಮಾರ್ಟ್ಫೋನ್ ಮುಂದಿನ ತಿಂಗಳು ಬಿಡುಗಡೆಯನ್ನು ಕಂಫಾರ್ಮ್ ಮಾಡಿದ ಐಕ್ಯೂ!

Updated on 16-Oct-2025
HIGHLIGHTS

ಜನಪ್ರಿಯ ಐಕ್ಯೂ (iQOO) ಬ್ರಾಂಡ್ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಬಿಡುಗಡೆಗೆ ಸಜ್ಜು.

ಮುಂಬರಲಿರುವ iQOO 15 ಸ್ಮಾರ್ಟ್ಫೋನ್ ಮುಂದಿನ ತಿಂಗಳು ಬಿಡುಗಡೆಯನ್ನು ಕಂಫಾರ್ಮ್.

iQOO 15 ಸ್ಮಾರ್ಟ್ಫೋನ್ Snapdragon 8 Gen 5 ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗಲಿದೆ.

iQOO 15 Launch: ಜನಪ್ರಿಯ ಐಕ್ಯೂ ಕಂಪನಿಯ ಮುಂದಿನ ಪ್ರಮುಖ ಸ್ಮಾರ್ಟ್‌ಫೋನ್ ಆದ iQOO 15 ಭಾರತದಲ್ಲಿ ಬಿಡುಗಡೆಯಾಗುವುದು ಈಗ ಖಚಿತವಾಗಿದೆ. ಈ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದ ತಕ್ಷಣ ಇದನ್ನು ಭಾರತೀಯ ಮಾರುಕಟ್ಟೆಗೆ ತರಲು ಫೋನ್ ಆಗಿರುತ್ತದೆ. ಐಕ್ಯೂ ಇಂಡಿಯಾದ ಮುಖ್ಯಸ್ಥರಾದ ನಿಪುನ್ ಮಾರ್ಯ (Nipun Marya) ಇದನ್ನು ದೃಢಪಡಿಸಿದ್ದಾರೆ. ಈ ಸ್ಮಾರ್ಟ್ ಫೋನ್ ಅತ್ಯಂತ ಪವರ್ಫುಲ್ ಮತ್ತು ಪ್ರೀಮಿಯಂ ಪ್ರೊಸೆಸರ್ ಮತ್ತು ಹೊಸ ವಿನ್ಯಾಸದೊಂದಿಗೆ ಬರುವ ಈ ಫೋನ್ ಮುಂದಿನ ತಿಂಗಳು ನವೆಂಬರ್ 2025 ರಲ್ಲಿ ಬಿಡುಗಡೆಯಾಗಲಿದೆ. ಕಂಪನಿ ಇದನ್ನು ಮುಖ್ಯವಾಗಿ ಗೇಮಿಂಗ್ ಮತ್ತು ಪವರ್ಫುಲ್ ಫೀಚರ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ.

iQOO 15 ನಿರೀಕ್ಷಿತ ಬಿಡುಗಡೆ ದಿನಾಂಕ ಮತ್ತು ಬೆಲೆ:

ಈ ಮುಂಬರಲಿರುವ iQOO 15 ಸ್ಮಾರ್ಟ್ ಫೋನ್ ಚೀನಾದಲ್ಲಿ ಇದೆ 20ನೇ ಅಕ್ಟೋಬರ್ 2025 ರಂದು ಬಿಡುಗಡೆಯಾಗಲಿದೆ. ಇದರ ನಂತರ ಭಾರತದಲ್ಲಿ ನವೆಂಬರ್‌ನಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ ಪ್ರಸ್ತುತ ಇದರ ನಿಖರವಾದ ದಿನಾಂಕವನ್ನು ಇನ್ನೂ ಕಂಪನಿ ಹೇಳಿಲ್ಲ. ಕೆಲವು ವರದಿಗಳ ಪ್ರಕಾರ ಈ ಫೋನ್ 15ನೇ ನವೆಂಬರ್ನಿಂದ 25 ನವೆಂಬರ್ ನಡುವೆ ಮಾರುಕಟ್ಟೆಗೆ ಬರುವುದಾಗಿ ನಿರೀಕ್ಷಿಸಲಾಗಿದೆ.

ಈ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದದರೆ iQOO 15 ಫೋನ್ ತನ್ನ ಹಿಂದಿನ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಇದರ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಬೆಲೆ ಸುಮಾರು ₹60,000 ರೂಗಳೊಳಗೆ ಇರಬಹುದೆಂದು ನಿರೀಕ್ಷಿಸಲಾಗಿದೆ.

Also Read: Voter ID: ನಿಮ್ಮ ವೋಟರ್ ಐಡಿ ಕಾರ್ಡ್ ಕಳೆದೋಗಿದ್ರೆ ಚಿಂತಿಸಬೇಡಿ! ಮರು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಭಾರತದ ಐಕ್ಯೂ 15 ನಿರೀಕ್ಷಿತ ಫೀಚರ್ ಮತ್ತು ವಿಶೇಷತೆಗಳೇನು?

ಇದರ ಪ್ರಮುಖ ವೈಶಿಷ್ಟ್ಯಗಳೆಂದರೆ ಇದು ಕ್ವಾಲ್ಕಾಮ್‌ನ ಹೊಸ Snapdragon 8 Elite Gen 5 ಪ್ರೊಸೆಸರ್‌ನಿಂದ ಪವರ್ ಪಡೆಯಲಿದ್ದು ಇದರ ಜೊತೆಗೆ ವಿಶೇಷ ಗೇಮಿಂಗ್ ಅನುಭವಕ್ಕಾಗಿ Q3 ಗೇಮಿಂಗ್ ಚಿಪ್ ಅನ್ನು ಸಹ ಅಳವಡಿಸಲಾಗಿರುತ್ತದೆ. ಫೋನ್‌ ಬಿಸಿಯಾಗುವುದನ್ನು ತಡೆಯಲು ಇದು ಬೃಹತ್ 8K VC Dome ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಫೋನ್ ಡಿಸ್ಪ್ಲೇ ವಿಭಾಗದಲ್ಲಿ ಇದು 6.85 ಇಂಚಿನ 2K LTPO AMOLED ಸ್ಕ್ರೀನ್ ಅನ್ನು ಹೊಂದಿದ್ದು 144Hz ರಿಫ್ರೆಶ್ ರೇಟ್ ಮತ್ತು ಅತ್ಯಧಿಕ 6,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾಗಳ ವಿಷಯದಲ್ಲಿ ಇದು ಹಿಂಭಾಗದಲ್ಲಿ ಮೂರು 50MP ಸೆನ್ಸರ್‌ಗಳ ಸೆಟಪ್ ಅನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಸಹ ಸೇರಿರುತ್ತದೆ. ಇನ್ನು ಬ್ಯಾಟರಿಯು 7000mAh ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದು 100W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿರಲಿದೆ. ಇದರ ಜೊತೆಗೆ ಇದು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್‌ಗಾಗಿ IP68/IP69 ರೇಟಿಂಗ್ ಹಾಗೂ ಭದ್ರತೆಗಾಗಿ ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :