iPhone 16 Plus ಫೋನ್‌ಗೆ 18,010 ರೂಗಳ ನೇರ ರಿಯಾಯಿತಿ! ಈ ಚಾನ್ಸ್‌ ಮಿಸ್‌ ಮಾಡ್ಕೋತೀರಾ?

Updated on 26-Jan-2026
HIGHLIGHTS

iPhone 16 Plus ಖರೀದಿಸುವ ಪ್ಲಾನ್ ಇದ್ರೆ ಈ ಅವಕಾಶ ಮಿಸ್‌ ಮಾಡ್ಕೋಬೇಡಿ

Vijay Sales ವೆಬ್‌ಸೈಟ್‌ನಲ್ಲಿ iPhone 16 Plus ಫೋನಿಗೆ 18,010 ರೂಗಳ ನೇರ ರಿಯಾಯಿತಿ

ಆಪಲ್‌ ಸಂಸ್ಥೆಯ iPhone 16 Plus ಸ್ಮಾರ್ಟ್‌ಫೋನ್‌ ಅನ್ನು ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಸಲು ಬಯಸುತ್ತಿರಾ? ಹಾಗಿದ್ದರೆ Vijay Sales ಆನ್‌ಲೈನ್‌ ಪ್ಲಾಟ್‌ಫಾರ್ಮ್ ನಿಮಗೆ ಸೂಕ್ತ ಎನ್ನಬಹುದು. ಏಕೆಂದರೆ ಈ ಆನ್‌ಲೈನ್‌ ತಾಣದಲ್ಲಿ ಇದೀಗ ಆಪಲ್‌ನ iPhone 16 Plus ಮಾಡೆಲ್‌ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಅನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ. ಇನ್ನು ಈ ಐಫೋನ್‌ ಆಕರ್ಷಕ ಬ್ಲ್ಯಾಕ್‌, ಪಿಂಕ್, ವೈಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಈ ಫೋನ್ iOS 18 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗಾದರೇ iPhone 16 Plus ಫೋನಿಗೆ ಲಭ್ಯ ಇರುವ ಆಫರ್‌ ಹಾಗೂ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Also Read : Upcoming Smartphone: ಹೊಸ ಫೋನ್‌ ಖರೀದಿಸುವ ಪ್ಲಾನ್‌ ಇದ್ರೆ ಇಲ್ಲಿ ಗಮನಿಸಿ; ಈ ವಾರ ಲಾಂಚ್‌ ಆಗಲಿವೆ ಈ ಫೋನ್‌ಗಳು!

iPhone 16 Plus ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ

ಆಪಲ್ ಕಂಪನಿಯ iPhone 16 Plus ಮೊಬೈಲ್‌ ದೇಶಿಯ ಮಾರುಕಟ್ಟೆಯಲ್ಲಿ 89,900 ರೂಗಳ ಆರಂಭಿಕ ದರದಲ್ಲಿ ಬಿಡುಗಡೆ ಆಗಿತ್ತು. ಆದರೆ ಪ್ರಸ್ತುತ Vijay Sales ನ ಅಧಿಕೃತ ಆನ್‌ಲೈನ್‌ ಪ್ಲಾಟ್‌ಫಾರ್ಮ್ನಲ್ಲಿ 128GB ಸ್ಟೋರೇಜ್‌ನ iPhone 16 Plus ಸ್ಮಾರ್ಟ್‌ಫೋನ್ 18,010 ರೂಗಳ ನೇರ ರಿಯಾಯಿತಿ ಪಡೆದಿದ್ದು ಈಗ 71,890 ರೂಗಳಿಗೆ ಖರೀದಿಗೆ ಸಿಗಲಿದೆ. ಹಾಗೆಯೇ ICICI Bank ಕ್ರೆಡಿಟ್ ಕಾರ್ಡ್ ಮತ್ತು Axis Bank ಕ್ರೆಡಿಟ್ ಕಾರ್ಡ್ ಗಳ EMI ವಹಿವಾಟುಗಳ ಮೇಲೆ 5,000 ರೂಗಳ ಹೆಚ್ಚುವರಿ ಡಿಸ್ಕೌಂಟ್‌ ಅನ್ನು ಸಹ ಗ್ರಾಹಕರು ಪಡೆದುಕೊಳ್ಳಲು ಚಾನ್ಸ್‌ ಇದೆ.

iPhone 16 Plus ಸ್ಮಾರ್ಟ್‌ಫೋನ್‌ ಪ್ರಮುಖ ಫೀಚರ್ಸ್‌

iPhone 16 Plus ಮೊಬೈಲ್‌ ಸಂಸ್ಥೆಯ A18 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು ಇದು ಆಪಲ್‌ನ ಇಂಟೆಲಿಜೆನ್ಸ್ ಫೀಚರ್ಸ್‌ಗಳ ಸಂಪೂರ್ಣ ಸೂಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ 6.7 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಅನ್ನು ಪಡೆದಿದೆ. ಫೋಟೋಗ್ರಫಿಗಾಗಿ ಇದು 12MP ಅಲ್ಟ್ರಾವೈಡ್ ಲೆನ್ಸ್‌ ಜೊತೆಗೆ ಜೋಡಿಸಲಾದ 48MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 12MP ಕ್ಯಾಮೆರಾ ರಚನೆ ಪಡೆದುಕೊಂಡಿದೆ.

ಈ ಫೋನ್‌ 128GB ಸ್ಟೋರೇಜ್‌, 256GB ಸ್ಟೋರೇಜ್‌ ಹಾಗೂ 512GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ. Face ID, Emergency SOS, Messages ಮತ್ತು Find My via satellite ನಂತಹ ಅಗತ್ಯ ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ. ಇದರೊಂದಿಗೆ ಈ ಫೋನ್‌ IP68 ರೇಟಿಂಗ್ ಅನ್ನು ಪಡೆದಿದ್ದು ಇದು ಅಲ್ಯೂಮಿನಿಯಂ ಫ್ರೇಮ್ ರಚನೆ ಅನ್ನು ಹೊಂದಿದೆ. ಹಾಗೆಯೇ ದೀರ್ಘಾವಧಿಯ ವರೆಗೂ ಬ್ಯಾಕ್‌ಅಪ್‌ ಒದಗಿಸುವ ಬ್ಯಾಟರಿ ಸೌಲಭ್ಯ ಇದ್ದು, ಒಂದೇ ಚಾರ್ಜ್‌ನಲ್ಲಿ 27 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಒದಗಿಸಬಲ್ಲದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :