Apple iPhone 16 Deals
ನೀವೇನಾದರೂ ಹೊಸ ಐಫೋನ್ ಖರೀದಿಸಬೇಕು ಎಂದು ಪ್ಲಾನ್ ಮಾಡಿದ್ದರೆ ಅದಕ್ಕೆ ಇದಕ್ಕಿಂತ ಒಳ್ಳೆ ಸಮಯ ಮತ್ತೊಂದಿಲ್ಲ. ಯಾಕೆಂದರೆ ಪ್ರಸ್ತುತ ಈ ವರ್ಷದ ಕೊನೆಯಲ್ಲಿ ನಾವಿದ್ದು ಈ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳ ಸಂಭ್ರಮಕ್ಕಾಗಿ ಆಪಲ್ ಕಂಪನಿಯ iPhone 16 ಮೇಲೆ ಹಿಂದೆಂದೂ ಕಾಣದಂತಹ ರಿಯಾಯಿತಿ ಸಿಗುತ್ತಿದೆ. ಭಾರತದಲ್ಲಿ ಈ ಫೋನ್ ಬಿಡುಗಡೆಯಾದಾಗ ಇದರ ಬೆಲೆ ₹79,900 ಇತ್ತು. ಆದರೆ ಈಗ ನೀವು ಇದನ್ನು ತುಂಬಾ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು. ಹಳೆ ಐಫೋನ್ ಆಗಿರುವ iPhone 15 ಹೋಲಿಸಿದರೆ ಈ ಫೋನ್‌ನ ಕ್ಯಾಮೆರಾ, ಸ್ಪೀಡ್ ಮತ್ತು ಡಿಸೈನ್ ಎಲ್ಲವೂ ಸಖತ್ ಆಗಿ ಅಪ್‌ಡೇಟ್ ಆಗಿದೆ. ಸದ್ಯಕ್ಕೆ ಈ ಭರ್ಜರಿ ಆಫರ್ ಅನ್ನು ವಿಜಯ್ ಸೇಲ್ಸ್ (Vijay Sales) ಮಳಿಗೆಗಳಲ್ಲಿ ನೀಡಲಾಗುತ್ತಿದೆ.
ಸದ್ಯಕ್ಕೆ ವಿಜಯ್ ಸೇಲ್ಸ್‌ನಲ್ಲಿ ಈ iPhone 16 ಆರಂಭಿಕ ಬೆಲೆಯನ್ನು ₹66,900 ಎಂದು ತೋರಿಸಲಾಗಿದೆ. ಅಂದರೆ ಬಿಡುಗಡೆಯಾದ ಬೆಲೆಗಿಂತ ಬರೋಬ್ಬರಿ ₹13,000 ಕಡಿಮೆ ಮಾಡಲಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಹೊಸ iPhone 17 ಮಾರುಕಟ್ಟೆಗೆ ಬರುತ್ತಿದ್ದಂತೆ ಆಪಲ್ ಈ ಬೆಲೆಯನ್ನು ಅಧಿಕೃತವಾಗಿ ₹69,900 ಕ್ಕೆ ಇಳಿಸಿದೆ. ಇದರ ಜೊತೆಗೆ ವಿಜಯ್ ಸೇಲ್ಸ್ ಇನ್ನೂ ₹3,000 ಎಕ್ಸ್‌ಟ್ರಾ ಡಿಸ್ಕೌಂಟ್ ಕೊಡುತ್ತಿದೆ. ಅಷ್ಟೇ ಅಲ್ಲ ನೀವು ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಇನ್ನೂ ₹4,000 ಉಳಿಸಬಹುದು. ಈ ಎಲ್ಲಾ ಆಫರ್‌ಗಳನ್ನು ಬಳಸಿಕೊಂಡರೆ ನಿಮಗೆ ಈ ಐಫೋನ್ ಕೇವಲ ₹62,900 ರೂಗಳ ಆಸುಪಾಸಿನಲ್ಲಿ ಖರೀದಿಸಲು ಸಿಗುತ್ತದೆ.
ನೀವು ಇದಕ್ಕೆ ಹಣ ಒಟ್ಟಿಗೆ ಕೊಡಲು ಸಾಧ್ಯವಾಗದಿದ್ದರೆ ತಿಂಗಳಿಗೆ ಬರೀ ₹2,927 ರಿಂದ ಶುರುವಾಗುವ ಸುಲಭ ಕಂತಿನ (EMI) ಸೌಲಭ್ಯ ಕೂಡ ಇದೆ. ಆದರೆ ನೆನಪಿಡಿ ಇಎಂಐ ಮಾಡಿದಾಗ ಫೈಲ್ ಚಾರ್ಜ್ ಮತ್ತು ಬಡ್ಡಿ ಹೆಚ್ಚುವರಿಯಾಗಿ ಬೀಳಬಹುದು. ನಿಮ್ಮ ಹತ್ತಿರ ಯಾವುದಾದರೂ ಹಳೆಯ ಫೋನ್ ಇದ್ದರೆ ಅದನ್ನು ಎಕ್ಸ್‌ಚೇಂಜ್ (Exchange) ಮಾಡಿ ಫೋನಿನ ಕಂಡೀಷನ್ ಮೇಲೆ ಇನ್ನು ಹೆಚ್ಚಿನ ರಿಯಾಯಿತಿ ಪಡೆಯಬಹುದು. ಫೋನ್ ಸುರಕ್ಷತೆಗಾಗಿ ಬೇಕಿದ್ದರೆ ಎಕ್ಸ್‌ಟ್ರಾ ಹಣ ಪಾವತಿಸಿ ‘ಆಪಲ್ ಕೇರ್+’ ಕೂಡ ತಗೋಬಹುದು.
ಆಪಲ್ ಐಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಪ್ಯಾನೆಲ್ ಅನ್ನು ಹೊಂದಿದೆ. ಇದು ಆಪಲ್ A18 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 8GB RAM ಅನ್ನು ಪ್ಯಾಕ್ ಮಾಡುತ್ತದೆ. ಈ ಇತ್ತೀಚಿನ iOS 26 ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ 3,561mAh ಬ್ಯಾಟರಿಯಿಂದಾಗಿ ಐಫೋನ್ 15 ಗಿಂತ ಉತ್ತಮ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದು 25W ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್ ಸೆನ್ಸಾರ್-ಶಿಫ್ಟ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 48MP ಪ್ರೈಮರಿ ಶೂಟರ್ ಮತ್ತು 12MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.