Infinix Note 50X 5G Launch Date Confirmed
Infinix Note 50X 5G Launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಇನ್ಫಿನಿಕ್ಸ್ (Infinix) ತನ್ನ ಮುಂಬರಲಿರುವ Infinix Note 50X 5G ಸ್ಮಾರ್ಟ್ಫೋನ್ ಬಿಡುಗಡೆಯನ್ನು ಇದೆ ತಿಂಗಳ 27ನೇ ಮಾರ್ಚ್ 2025 ರಂದು ಪರಿಚಯಿಸಲು ಸಜ್ಜಾಗಿದೆ. ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾದೊಂದಿಗೆ ಬರುವುದಾಗಿ ಫೋನ್ ಹಿಂಭಾಗದ ಲುಕ್ ಮಾತ್ರ ಅಧಿಕೃತವಾಗಿ ಪೋಸ್ಟ್ ಮಾಡಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
Infinix Note 50X 5G ಸ್ಮಾರ್ಟ್ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ನಿರೀಕ್ಷಿಸಲಾಗಿದ್ದು ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 14,999 ರೂಗಳಿಗೆ ಮತ್ತೊಂದು 6GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 15,999 ರೂಗಳಿಗೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ನಿರೀಕ್ಷಿಸಲಾಗಿದೆ. Infinix Note 50X 5G ಸ್ಮಾರ್ಟ್ಫೋನ್ ಬಿಡುಗಡೆಯ ಕೊಡುಗೆಯಾಗಿ ಬ್ಯಾಂಕ್ ಆಫರ್ ಸಹ ನೀಡುವ ನಿರೀಕ್ಷೆಗಳಿವೆ.
Also Read: Airtel ನಂತರ ಈಗ Jio ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ತರಲು SpaceX ಜೊತೆಗೆ ಕೈ ಜೋಡಿಸಿದೆ!
ಈ ಸ್ಮಾರ್ಟ್ಫೋನ್ ಲೇಟೆಸ್ಟ್ ಆಂಡ್ರಾಯ್ಡ್ 15 ಆಧಾರಿತ XOS 15 ಸಂಪೂರ್ಣವಾಗಿ ಬಿಡುಗಡೆಯಾಗಲಿದೆ. ಒನ್-ಟೇಕ್ ವಾಲ್‌ಪೇಪರ್ ವೈಶಿಷ್ಟ್ಯದೊಂದಿಗೆ ಬಳಕೆದಾರರು ಹೋಮ್ ಸ್ಕ್ರೀನ್, ಲಾಕ್ ಸ್ಕ್ರೀನ್ ಮತ್ತು ಇತರ ಸ್ಥಳಗಳಿಗೆ ಸ್ವಯಂಚಾಲಿತವಾಗಿ ಅನ್ವಯಿಸಲಾಗುವ ಒಂದು ಚಿತ್ರವನ್ನು ಆಯ್ಕೆ ಮಾಡಲು ಸಾಧ್ಯವಾಗಬಹುದು. ಅಲ್ಲದೆ ಹೆಚ್ಚುವರಿಯಾಗಿ ನಿಮಗೆ ಅಪ್ಡೇಟೆಡ್ ಹೆಚ್ಚು ವೈಯಕ್ತಿಕಗೊಳಿಸಿದ ಗ್ರಾಹಕೀಕರಣ ಆಯ್ಕೆಗಳು, ಅಲರ್ಟ್ ಮತ್ತು ನೋಟಿಫಿಕೇಶನ್ ಡೈನಾಮಿಕ್ ಬಾರ್ ಮತ್ತು ಇತರ ಫೀಚರ್ ನೀಡುವ ನಿರೀಕ್ಷೆಗಳಿವೆ.
ಇದರ ಆಪರೇಟಿಂಗ್ ಸಿಸ್ಟಂ ಬಳಕೆದಾರ ಇಂಟರ್ಫೇಸ್ (UI) ಪ್ರಕೃತಿಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಏತನ್ಮಧ್ಯೆ, ಅನಿಮೇಷನ್‌ಗಳು ನದಿಯ ಹರಿವನ್ನು ಅನುಕರಿಸುತ್ತವೆ (mimic the flow of a river) ಎಂದು ವರದಿಯಾಗಿದೆ. ವರ್ಧಿತ ವೈಯಕ್ತೀಕರಣಕ್ಕಾಗಿ ಬಳಕೆದಾರರು ಹೆಚ್ಚು ವ್ಯಾಪಕವಾದ ಅಪ್ಲಿಕೇಶನ್ ಐಕಾನ್ ಬಣ್ಣಗಳು, ಆಕಾರಗಳು ಮತ್ತು ಗಾತ್ರಗಳನ್ನು ಪ್ರವೇಶಿಸಲು ಸಾಧ್ಯವಾಗಬಹುದು.