Infinix Hot 50 5G Sale
ನಿಮಗೊಂದು ಹೊಸ ಬಜೆಟ್ 5G ಸ್ಮಾರ್ಟ್ಫೋನ್ ಸುಮಾರು 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಹುಡುಕುತ್ತಿದ್ದರೆ ಅತ್ಯುತ್ತಮ ಕಾರ್ಯಕ್ರಮತೆಯನ್ನು ಹೊಂದಿರುವ ಈ Infinix Hot 50 5G ನಿಮಗೆ ಉತ್ತಮ ಆಯ್ಕೆಯಾಗಿದೆ. ಇದರ ವಿಶೇಷವೆಂದರೆ ಅಮೆಜಾನ್‌ನ ಡೀಲ್‌ನಲ್ಲಿ ನೀವು ಈ ಫೋನ್ ಅನ್ನು ಬ್ಯಾಂಕ್ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್‌ನೊಂದಿಗೆ ಖರೀದಿಸಬಹುದು ಫೋನ್ 16GB RAM (8GB + 8GB ವರ್ಚುವಲ್) ಮತ್ತು 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ. ಇದರ ಬೆಲೆ 10,499 ರೂಗಳಾಗಿವೆ. ಅಲ್ಲದೆ ಈ Infinix Hot 50 5G ಸ್ಮಾರ್ಟ್ಫೋನ್‌ನಲ್ಲಿ 500 ರೂ.ಗಳ ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ.
ಈ ರಿಯಾಯಿತಿಯೊಂದಿಗೆ 9999 ರೂಗಳಿಗೆ ಫೋನ್ ನಿಮ್ಮದಾಗಲಿದೆ. ಈ ಕೊಡುಗೆ ಪ್ರಸ್ತುತ 31ನೇ ಜುಲೈ 2025 ರವರೆಗೆ ಚಾಲ್ತಿಯಲ್ಲಿರುತ್ತದೆ. ಕಂಪನಿಯು ಫೋನ್‌ನಲ್ಲಿ 524 ರೂ.ಗಳವರೆಗೆ ಕ್ಯಾಶ್ ಬ್ಯಾಕ್ ನೀಡುತ್ತಿದೆ. ಅಲ್ಲದೆ ಎಕ್ಸ್‌ಚೇಂಜ್ ಆಫರ್‌ನಲ್ಲಿ ನೀವು ಈ ಫೋನ್ ಬೆಲೆಯನ್ನು ಮತ್ತನ್ನು ಕಡಿಮೆ ಮಾಡಬಹುದು. Infinix Hot 50 5G ಫೋನ್ ಎಕ್ಸ್‌ಚೇಂಜ್ ಆಫರ್‌ನಲ್ಲಿ ಲಭ್ಯವಿರುವ ರಿಯಾಯಿತಿಯು ನಿಮ್ಮ ಹಳೆಯ ಫೋನ್ ಸ್ಥಿತಿ, ಬ್ಯಾಂಡ್ ಮತ್ತು ಕಂಪನಿಯ ಎಕ್ಸ್‌ಚೇಂಜ್ ನೀತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ: 43 ಇಂಚಿನ LG ಲೇಟೆಸ್ಟ್ ಜಬರ್ದಸ್ತ್ Smart TV ಫ್ಲಿಪ್‌ಕಾರ್ಟ್‌ನಲ್ಲಿ ಲಿಮಿಟೆಡ್ ಸಮಯಕ್ಕೆ ಲಭ್ಯ!
ಈ ಫೋನ್ 6.7-ಇಂಚಿನ HD+ ಡಿಸ್ಟ್ರೇಯನ್ನು ಹೊಂದಿದ್ದು 1500 x 720 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಈ LCD ಡಿಸ್ಟ್ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ Infinix ಫೋನ್ 8GB ವರೆಗೆ LPDDR4x RAM ಮತ್ತು 128GB ವರೆಗೆ UFS 2 2 ಸ್ಟೋರೇಶ್ ಆಯ್ಕೆಗಳೊಂದಿಗೆ ಬರುತ್ತದೆ. Infinix Hot 50 5G ಫೋನ್ 8GB ವರೆಗೆ ವರ್ಚುವಲ್ RAM ಅನ್ನು ಸಹ ಹೊಂದಿದೆ. ಇದು ಫೋನ್‌ನ ಒಟ್ಟು RAM ಅನ್ನು 16GB ಗೆ ಹೆಚ್ಚಿಸುತ್ತದೆ. ಪ್ರೊಸೆಸರ್ ಆಗಿ ಫೋನ್ ಡೈಮನ್ಸಿಟಿ 6300 ಚೆಪ್‌ಸೆಟ್ ಅನ್ನು ಹೊಂದಿದೆ.
Infinix Hot 50 5G ಫೋನ್ LED ಫ್ಲ್ಯಾಷ್ ಹೊಂದಿರುವ 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಅದೇ ಸಮಯದಲ್ಲಿ ನೀವು ಸೆಲ್ಪಿಗಾಗಿ ಫೋಸ್‌ನ ಮುಂಭಾಗದಲ್ಲಿ 8-ಮಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆಯುತ್ತೀರಿ. ಫೋನ್‌ನ ಬ್ಯಾಟರಿ 5000mAh ಆಗಿದೆ. ಈ ಬ್ಯಾಟರಿ 18-ಪ್ಯಾಟ್ ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಫೋನ್ IP54 ದೂಳು ಮತ್ತು ನೀರಿನ ನಿರೋಧಕ ರೇಟಿಂಗ್ನೊಂದಿಗೆ ಬರುತ್ತದೆ. Infinix Hot 50 5G ಫೋನ್ Android 14 ಆಧಾರಿತ XOS 14.5 ನಲ್ಲಿ ಕಾರ್ಯನಿರ್ವಹಿಸುತ್ತದೆ.