ಹೊಸ Huawei P30 Pro ಸ್ಮಾರ್ಟ್ಫೋನ್ ಸೇಲ್ ಇಲ್ಲಿದೆ ಇದರ ಫೀಚರ್ಗಳು, ಬೆಲೆ, ಲಭ್ಯತೆ ಮತ್ತು ಆಫರ್ಗಳು

Updated on 16-Apr-2019
HIGHLIGHTS

ಕಳೆದ ವಾರ ಬಿಡುಗಡೆಯಾದ ನಂತರ ಭಾರತದಲ್ಲಿ ಈ Huawei P30 Pro ಸ್ಮಾರ್ಟ್ಫೋನ್ ಮಾರಾಟವಾಗುತ್ತಿದೆ. ಅಮೆಜಾನ್ ಇಂಡಿಯಾ ವೆಬ್ಸೈಟ್ನಿಂದ ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು. ಮತ್ತು ನೆನ್ನೆಯಿಂದ ಆಫ್ಲೈನ್ ಮಾರಾಟ ಪ್ರಾರಂಭವಾಗಿದೆ. ಇದು ಕ್ರೋವಾ ಸ್ಟೋರ್ ಮತ್ತು ಪ್ರತ್ಯೇಕವಾಗಿ ಅಮೆಜಾನ್ ಇಂಡಿಯಾದಲ್ಲಿ ಈಗಾಗಲೇ Huawei P30 Pro ಸ್ಮಾರ್ಟ್ಫೋನ್ ಪ್ರೀ ಆರ್ಡರ್ಗಳನ್ನು ಸ್ವೀಕರಿಸುತ್ತಿತ್ತು. ಆದರೆ ಈಗ 8GB ಯ RAM ಮತ್ತು 256GB ಸ್ಟೋರೇಜ್ ರೂಪಾಂತರ ಕೇವಲ 71,990 ರೂಗಳಲ್ಲಿ ಲಭ್ಯವಿದೆ. ಈಗಾಗಲೇ ವಿಶ್ವವೇ ತಿಳಿದಿರುವಂತೆ ಹುವಾವೇ ಕಂಪನಿಯ ಪ್ರಮುಖ ಫೋನ್ನ ಯಾವುದೇ ಭಿನ್ನತೆಗಳಿಲ್ಲ.

ಇದರ ಬಿಡುಗಡೆಯ ಆಫರ್ಗಳೊಂದಿಗೆ ಸಂಬಂಧಿಸಿದಂತೆ ಹೇಳಬೇಕೆಂದರೆ ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದ EMI ಆಯ್ಕೆಗಳಲ್ಲಿ ಈ Huawei P30 Pro ಸ್ಮಾರ್ಟ್ಫೋನ್ ಲಭ್ಯವಾಗುತ್ತದೆ. ಈ ಫೋನ್ ಖರೀದಿದಾರರು 15ನೇ ಏಪ್ರಿಲ್ 2019 ಯಿಂದ 17ನೇ ಏಪ್ರಿಲ್  2019 ನಡುವೆ ಅದ್ದೂರಿಯ ಕ್ಯಾಶ್ಬ್ಯಾಕ್ ಆಫರ್ಗಳನ್ನು ಸಹ ಪಡೆಯಬಹುದು. ಇದು ಹುವಾವೇ ಇದರೊಂದಿಗೆ 6 ತಿಂಗಳುಗಳ ಸ್ಕ್ರೀನ್ ವಿಮೆ ಯೋಜನೆಯನ್ನು ನೀಡುತ್ತಿದೆ. ಅಲ್ಲದೆ ರಿಲಯನ್ಸ್ ಜಿಯೋ ಚಂದಾದಾರರು ಸುಮಾರು 2200 ಕ್ಯಾಶ್ಬ್ಯಾಕ್ ಮತ್ತು ಡಬಲ್ ಡೇಟಾ ರಿಚಾರ್ಜ್ ಮತ್ತು 10,000 ರೂ ವರೆಗಿನ ಇತರ ಪ್ರಯೋಜನಗಳನ್ನು ಪಡೆಯುತ್ತಾರೆ.

ಈ Huawei P30 Pro ಸ್ಮಾರ್ಟ್ಫೋನ್ 6.47 ಇಂಚಿನ OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಆದ್ರೆ 2340 x 1080 ಪಿಕ್ಸೆಲ್ಗಳ ರೆಸುಲ್ಯೂಷನ್ ನೀಡುತ್ತದೆ. ಮತ್ತು 19.5: 9 ಆಕಾರ ಅನುಪಾತವನ್ನು ಹೊಂದಿರುತ್ತದೆ. ಇದರ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯಲ್ಲಿ 32MP ಫ್ರಂಟ್ ಕ್ಯಾಮೆರಾ ಹೊಂದಿದೆ. ಇದು ಕಿರಿನ್ 980 ಸೋಕ್ ಹೈವರೀಡ್ ಡ್ಯುಯಲ್ ಸಿಮ್ ಕಾನ್ಫಿಗರೇಶನ್ನಲ್ಲಿ ಹುವಾವೇನ ನ್ಯಾನೋ ಮೆಮರಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ ಪೈ ಅನ್ನು EMUI 9.1 ಕಸ್ಟಮ್ ಜೊತೆಗೆ ನಡೆಸುತ್ತದೆ. ಇದರ ಹಿಂಭಾದಲ್ಲಿ ಒಟ್ಟಾರೆಯಾಗಿ 40+20+8MP ಮತ್ತು ToF ಕ್ಯಾಮೆರಾಗಳೊಂದಿಗೆ ಬರುತ್ತದೆ.

ಮೊದಲನೇಯದು 40MP ಪ್ರೈಮರಿ ಸೂಪರ್ಸ್ಪೆಕ್ಟ್ರಮ್ ಸೆನ್ಸರ್ ಮತ್ತು f/ 2.2 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ನ 20MP ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುವ ಕ್ವಾಡ್ ಕ್ಯಾಮೆರಾ ಸೆಟಪ್ನೊಂದಿಗೆ Huawei P30 Pro ಬರುತ್ತದೆ. ಮತ್ತು ಟೆಲಿಫೋಟೋ f/ 3.4 ಲೆನ್ಸ್ನೊಂದಿಗೆ 8MP ಸೆನ್ಸರ್ ನೀಡಲಾಗಿದೆ. ನಾಲ್ಕನೇ ಸೆನ್ಸರ್ ಟೈಮ್ ಆಫ್ ಫ್ಲೈಟ್ (ToF) ಸೆನ್ಸರ್ ಆಗಿರುತ್ತದೆ. ಕೊನೇಯದಾಗಿ 32MP ಸೆಲ್ಫ್ ಕ್ಯಾಮೆರಾ ಮತ್ತು ಆನ್ಬೋರ್ಡ್ ಒಳಗೊಂದಿಗೆ. ಇದು 4G ವೋಲ್ಟೆ, ವೈ-ಫೈ 802.11ac, ಬ್ಲೂಟೂತ್ ವಿ 5.0, USB ಟೈಪ್ C (v3.1), NFC, ಮತ್ತು ಡ್ಯುಯಲ್ ಬ್ಯಾಂಡ್ ಜಿಪಿಎಸ್. ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು 4200mAh ಬ್ಯಾಟರಿ ಕೂಡ ಇದೆ. ಡಸ್ಟ್ ಮತ್ತು ವಾಟರ್ ಪ್ರೂಫ್ IP68 ಪ್ರಮಾಣೀಕರಿಸಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :