ಕ್ಯಾಮೆರಾದ ವಿಷಯದಲ್ಲಿ Huawei P30 Pro ಈವೆರೆಗಿನ ಅತ್ಯುತ್ತಮವಾದ ಸ್ಮಾರ್ಟ್ಫೋನ್

Updated on 27-Mar-2019
HIGHLIGHTS

ಕ್ವಾಡ್ ಕ್ಯಾಮೆರಾದೊಂದಿಗೆ 5X ಆಪ್ಟಿಕಲ್ ಜೂಮ್ ಮತ್ತು 4200mAh ಬ್ಯಾಟರಿಯನ್ನು ಒಳಗೊಂಡಿದೆ.

ಇಂದಿನ ದಿನಗಳಲ್ಲಿ ಯಾವುದೇ ಹೊಸ ಫೋನ್ನನ್ನು ಖರೀದಿಸುವಾಗ ಹೆಚ್ಚಿನ ಜನರು ಆ ಫೋನ್ನಿಂದ ಬರುವ ಚಿತ್ರಗಳು ಹೇಗೆ ಬರುತ್ತದೆಂದು ಕೇಂದ್ರೀಕರಿಸುತ್ತಾರೆ. ನೀವೊಂದು ಅದ್ದೂರಿಯ ಕ್ಯಾಮೆರಾ ಹೊಂದಿರುವ ಫೋನ್ ತೆಗೆದುಕೊಳ್ಳುವ ಕುರಿತು ಯೋಚಿಸುತ್ತಿದ್ದರೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ ಹೊಸ Huawei P30 Pro. ಕ್ಯಾಮೆರಾಗಳನ್ನು ಸ್ಮಾರ್ಟ್ಫೋನ್ಗಳ ಶ್ರೇಯಾಂಕಗಳಿಗಾಗಿ ಪರೀಕ್ಷಿಸುವ ಡಕ್ಸೊಮಾರ್ಕ್ ಇಮೇಜ್ ಲ್ಯಾಬ್ಸ್ ಮತ್ತೊಮ್ಮೆ ಕ್ಯಾಮೆರಾಗಳಿಗಾಗಿ ಸ್ಕೋರ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇದು 112ನೇ ಸಂಖ್ಯೆಯೊಂದಿಗೆ ಮೇಲ್ಭಾಗದಲ್ಲಿದೆ. ಹುವಾವೇ ತನ್ನ ಮುಂದಿನ ದೊಡ್ಡ ಸ್ಮಾರ್ಟ್ಫೋನ್ P ಸರಣಿಯಡಿಯಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳ ಅನುಭವವನ್ನು ನೀಡುವಲ್ಲಿ ಕೇಂದ್ರೀಕರಿಸಿದೆ.

ಕಂಪನಿಯ ಇದರಲ್ಲಿ SuperSpectrum ಟೆಕ್ನಾಲಜಿಯ 40MP ಮೆಗಾಪಿಕ್ಸೆಲ್ ಸೆನ್ಸರ್, ಆಪ್ಟಿಕಲ್ ಝೂಮ್ ಲೆನ್ಸ್, 5X  ಝೂಮ್ ಮತ್ತು TOF ಫೀಚರ್ ಕ್ಯಾಮೆರಾವನ್ನು ಆಳವಾಗಿ ಸೆರೆಹಿಡಿಯಲು ಅನನ್ಯವಾದ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಈ  ಹೊಸ Huawei P30 Pro ಸ್ಮಾರ್ಟ್ಫೋನಲ್ಲಿ ನೀಡಲಾಗಿದೆ. ಈ ಸ್ಮಾರ್ಟ್ಫೋನ್ 6.47 ಇಂಚಿನ ಪೂರ್ಣ HD+ (2340×1080 ಪಿಕ್ಸೆಲ್ಗಳು) OLED ಪ್ಯಾನಲನ್ನು 19.5: 9 ಆಕಾರ ಅನುಪಾತವನ್ನು ಹೊಂದಿರುತ್ತದೆ. ಇದರ ಅಂಚುಗಳ ಸುತ್ತಲೂ ವಕ್ರವಾಗಿರುತ್ತದೆ. ಇದರಲ್ಲೂ ಕಂಪನಿ ಇನ್ ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಅಕೌಸ್ಟಿಕ್ ಡಿಸ್ಪ್ಲೇ ಟೆಕ್ನಾಲಜಿಯನ್ನು ಸಹ ನೀಡಿದೆ. ಇದರಲ್ಲಿ ಮ್ಯಾಗ್ಲೆವ್ ಸ್ಪೀಕರ್ನಲ್ಲಿ ಸ್ಪೀಕರ್ ಆಗಿ ಪರಿವರ್ತಿಸುತ್ತದೆ. 

ಇದರಲ್ಲಿ Mi Mix and LG ThinQ ನಂತರ ಇದು ಮತ್ತೋಂದು ಸ್ಮಾರ್ಟ್ಫೋನ್ G8 ಫೀಚರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ Mali-G76 GPU ಜೊತೆ 7nm ಆಕ್ಟಾ-ಕೋರ್ ಕಿರಿನ್ 980 ಸೋಕ್ ಹೊಂದಿದೆ. 128GB, 256GB ಅಥವಾ 512GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿರುವ 8GB RAM ಕೂಡ ಇದೆ. ಇದು SuperSpectrum ಟೆಕ್ನಾಲಜಿಯ 40MP ಮೆಗಾಪಿಕ್ಸೆಲ್ ಸೆನ್ಸರ್ f/1.6 ಅಪೆರ್ಚರೊಂದಿಗೆ ಬಂದ್ರೆ ಮತ್ತೋಂದು 20MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ f/2.2 ಅಪೆರ್ಚರೊಂದಿಗೆ ಬರುತ್ತದೆ. ಮತ್ತೊಂದು 8MP ಮೆಗಾಪಿಕ್ಸೆಲ್ ಟೆಲಿಫೋಟೋ f/3.4 ಅಪೆರ್ಚರೊಂದಿಗೆ ಬರುತ್ತದೆ. ಸುಧಾರಿತ ಅಂಚಿನ ಪತ್ತೆಗೆ ಆಳವಾದ ಮಾಹಿತಿಯನ್ನು ಸೆರೆಹಿಡಿಯುವ  TOF ಕ್ಯಾಮೆರಾ. 

ಇದರಲ್ಲಿನ 40MP ಮೆಗಾಪಿಕ್ಸೆಲ್ ಕ್ಯಾಮೆರಾವು ಉತ್ತಮ  ಕಾರ್ಯಕ್ಷಮತೆಗಾಗಿ ಕಸ್ಟಮ್ RYYB ಬಣ್ಣ ಫಿಲ್ಟರ್ನೊಂದಿಗೆ ಸೋನಿ IMX600 ಸೆನ್ಸರ್ ಒಳಗೊಂಡಿದೆ. ಇದರ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ f/2.0 ಅಪೆರ್ಚರೊಂದಿಗೆ ಬರುತ್ತದೆ. AI HDR+ ಅನ್ನು ವಿಭಿನ್ನ ಬೆಳಕಿನ ಪರಿಸ್ಥಿತಿಗಳಲ್ಲಿ ಸೆಲ್ಫಿ ಅನ್ನು ಅತ್ಯುತ್ತಮವಾಗಿಸುತ್ತದೆ. ಉಳಿದ ಫೀಚರ್ಗಳಲ್ಲಿ ಕಂಪೆನಿಯ 40W ಸೂಪರ್ ಚಾರ್ಜ್ ತಂತ್ರಜ್ಞಾನದೊಂದಿಗೆ 4200 mAh ಬ್ಯಾಟರಿ IP68 ಪ್ರಮಾಣೀಕರಣದಂತೆಯೇ ರಿವರ್ಸ್ ವೈರ್ಲೆಸ್ ಚಾರ್ಜಿಂಗ್ನೊಂದಿಗೆ ವೈರ್ಲೆಸ್ ಚಾರ್ಜಿಂಗ್ ಸೇರಿವೆ. ಇದರಲ್ಲಿನ ಶಾಖ ನಿರ್ವಹಣೆಗಾಗಿ ಗ್ರ್ಯಾಫೀನ್ ಫಿಲ್ಮ್ ಕೂಲಿಂಗ್ ವ್ಯವಸ್ಥೆಯು ಸಹ ಇದೆ. ಹುವಾವೇನ EMUI 9.1 ರೊಂದಿಗೆ ಆಂಡ್ರಾಯ್ಡ್ 9.0 ಪೈನಿಂದ ಸ್ಮಾರ್ಟ್ಫೋನ್ ಬರುತ್ತದೆ.

 

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :