Honor X70 launched with 8300mAh battery: ಇಂದು ಚೀನಾದಲ್ಲಿ Honor X70 ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಸ್ಮಾರ್ಟ್ಫೋನ್ ಒಟ್ಟು 4 ಆಕರ್ಷಕ ಬಣ್ಣಗಳಲ್ಲಿ ಸಿಕ್ಕಾಪಟ್ಟೆ ದೊಡ್ಡ 8300mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜ್ ಮತ್ತು ಅದೇ 80w ಫಾಸ್ಟ್ ವೈರ್ಲೆಸ್ ಚಾರ್ಜ್ ಅನ್ನು ಸಪೋರ್ಟ್ ಮಾಡುತ್ತದೆ. ಸ್ಮಾರ್ಟ್ಫೋನ್ ಅನೇಕ ವಿಶೇಷ ಫೀಚರ್ಗಳೊಂದಿಗೆ ಪಕ್ಕ ಆಗಿದ್ದು AMOLED ಡಿಸ್ಪ್ಲೇ, Snapdragon ಚಿಪ್ ಮತ್ತು 12GB RAM ಮತ್ತು ಅನೇಕ ಹೊಸ ಫೀಚರ್ಗಳನ್ನು ಹೊಂದಿದೆ. ಹಾಗಾದ್ರೆ ಈ ಹೊಸ Honor X70 ಸ್ಮಾರ್ಟ್ ಫೋನ್ ಬೆಲೆ ಮತ್ತು ಇದರ ಸಂಪೂರ್ಣ ವಿಶೇಷಣತೆಗಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಈ ಹೊಸ ಬರೋಬ್ಬರಿ 8300mAh ಬ್ಯಾಟರಿವುಳ್ಳ ಹಾನರ್‌ನ ಹೊಸ 5G ಫೋನ್ ಬಾಂಬೊ ಗ್ರೀನ್, ಮೂನ್ ಷಡೊ ವೈಟ್, ಮ್ಯಾಜಿಕ್ ನೈಟ್ ಬ್ಲಾಕ್ ಮತ್ತು ವರ್ಮಿಲಿಯನ್ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಲ್ಲದೆ ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ ಫೋನ್ ಒಟ್ಟು 4 ರೂಪಾಂತರಗಳಲ್ಲಿ ಬರುತ್ತದೆ.
ಇದನ್ನೂ ಓದಿ: 32 ಇಂಚಿನ QLED ಗೂಗಲ್ Smart TV ಇಷ್ಟು ಕಡಿಮೆ ಬೆಲೆಗೆ ಮತ್ತೆ ಸಿಗೋಲ್ಲ! ಕೈ ಜಾರುವ ಮೊದಲು ಖರೀದಿಸಿ!
8GB RAM ಮತ್ತು 128GB ಸ್ಟೋರೇಜ್ ಸುಮಾರು CNY 1,399 (ಸುಮಾರು 16,000 ರೂಗಳು)
8GB RAM ಮತ್ತು 256GB ಸ್ಟೋರೇಜ್ ಸುಮಾರು CNY 1,599 (ಸುಮಾರು 19,000 ರೂಗಳು)
12GB RAM ಮತ್ತು 256GB ಸ್ಟೋರೇಜ್ ಸುಮಾರು CNY 1,799 (ಸುಮಾರು 21,000 ರೂಗಳು)
12GB RAM ಮತ್ತು 512GB ಸ್ಟೋರೇಜ್ ಸುಮಾರು CNY 1,9999 (ಸುಮಾರು 24,000 ರೂಗಳು)
Honor X70 ಸ್ಮಾರ್ಟ್ಫೋನ್ 6.79 ಇಂಚಿನ 1.5K AMOLED (1200×2640 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಕಣ್ಣುಗಳ ಪ್ರೊಟೆಕ್ಷನ್‌ಗಾಗಿ Oasis Eye ಪ್ರೊಟೆಕ್ಷನ್ ಹೊಂದಿದೆ. Honor X70 ಫೋನ್ ಕಾಮೆರದಲ್ಲಿ 50MP ಪ್ರೈಮರಿ OIS ಸೆನ್ಸರ್ ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Honor X70 ಫೋನ್ Snapdragon 6 Gen 4 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth 5.2, Beidou, GPS, AGPS, Glonass, Galileo, Navic, NFC, QZSS, USB Type-C, Wi-Fi 6, and OTG. Sensors onboard include ambient light sensor, acceleration sensor, compass, gravity sensor, infrared sensor, fingerprint sensor, gyroscope ಮತ್ತು proximity light sensor ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Honor X70 ಸ್ಮಾರ್ಟ್ಫೋನ್ 8300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಫೋನ್ 2D ಫೇಸ್ ಅನ್ಲಾಕ್ ಮತ್ತು IP66 + IP68 + IP69 ಪ್ರೂಫ್ ಹೊಂದಿದೆ.