ಪ್ರಸ್ತುತ MWC 2026 ಟೆಕ್ ಶೋ ಬಾರ್ಸಿಲೋನಾದಲ್ಲಿ ನಡೆಯುತ್ತಿದೆ. ಈ ಟೆಕ್ ಕಾರ್ಯಕ್ರಮದಲ್ಲಿ ಪ್ರಮುಖ ಮೊಬೈಲ್ ಸಂಸ್ಥೆ ಹಾನರ್ ತನ್ನ ಹೊಸ ಪರಿಕಲ್ಪನೆಯ Honor Robot Phone ಹೆಸರಿನ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದು ಸಂಸ್ಥೆಯ ಹೊಸ ಆಲ್ಫಾ ಆಲ್ಫಾ ತಂತ್ರದಡಿಯಲ್ಲಿ ಅನಾವರಣವಾದ ಮೊದಲ ಉತ್ಪನ್ನವಾಗಿದೆ. ಹಾನರ್ ಸಂಸ್ಥೆಯು ಈ ಉತ್ಪನ್ನವನ್ನು ಹೊಸ ತಳಿಯ ಸ್ಮಾರ್ಟ್‌ಫೋನ್ ಎಂದು ವಿವರಿಸುತ್ತದೆ. ಈ ನೂತನ ಮೊಬೈಲ್ ಕೇವಲ ಡಿಸ್‌ಪ್ಲೇ ಮತ್ತು ಧ್ವನಿ ಆಜ್ಞೆಗಳಿಗೆ ಸೀಮಿತವಾಗಿಲ್ಲ ಬದಲಾಗಿ ಇದು ಚಲಿಸುತ್ತದೆ. ಅಲ್ಲದೇ ಪ್ರತಿಕ್ರಿಯಿಸುತ್ತದೆ ಮತ್ತು ಭಾವನೆಗಳನ್ನು ತೋರಿಸುತ್ತದೆ ಹಾಗೆಯೇ ಗ್ರಾಹಕರೊಂದಿಗೆ ಭಾವನಾತ್ಮಕವಾಗಿ ಸಂವಹನ ನಡೆಸಬಹುದು. ಅಚ್ಚರಿಯಂದರೆ ಈ ಮೊಬೈಲ್ ಕೈಗಳು, ಕಾಲುಗಳು ಮತ್ತು ಮೆದುಳನ್ನು ಹೊಂದಿರುವಂತೆ ತೋರುತ್ತದೆ. ಹಾನರ್ ರೋಬೋಟ್ ಫೋನ್‌ನ ಇತರೆ ಫೀಚರ್ಸ್ ಏನು ಎಂಬುದರ ಕುರಿತು ಮುಂದೆ ತಿಳಿಯೋಣ.
Also Read : 200MP ಕ್ಯಾಮೆರಾ ಇರುವ Vivo X200 Pro ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಸಖತ್ ಇಳಿಕೆ!
ನೂತನ ಹಾನರ್ ರೋಬೋಟ್ ಫೋನ್ ಈಗ ಎಲ್ಲರ ಗಮನ ಸೆಳೆದಿದೆ. ವಿಶೇಷವೆಂದರೆ ಈ ಅಚ್ಚರಿಯ ಫೋನ್‌ನಲ್ಲಿ ಎಂಬೋಡಿಡ್ AI ಅಳವಡಿಸಲಾಗಿದ್ದು ಇದು ಸಂವಹನಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಸಹಜವಾಗಿಸುತ್ತದೆ. ಮೊಬೈಲ್ ಆಲ್-ಆಂಗಲ್ AI ವೀಡಿಯೊ ಕರೆ ಆಯ್ಕೆಗಳನ್ನು ಹೊಂದಿದೆ. ಅಂದರೆ ಕ್ಯಾಮೆರಾ ಸ್ವಯಂಚಾಲಿತವಾಗಿ ಬಳಕೆದಾರರನ್ನು ಅನುಸರಿಸುತ್ತದೆ ಮತ್ತು ಫ್ರೇಮಿಂಗ್ ಅನ್ನು ಸ್ವತಃ ಸರಿ ಮಾಡಿಕೊಳ್ಳುತ್ತದೆ. ಇದಲ್ಲದೆ ಮೊಬೈಲ್‌ನ ಕ್ಯಾಮೆರಾ ಮಾಡ್ಯೂಲ್ ತಲೆಯಾಡಿಸುವುದು ಅಥವಾ ತಲೆ ಅಲ್ಲಾಡಿಸುವಂತಹ ಅಭಿವ್ಯಕ್ತಿಗಳನ್ನು ಸಹ ತೋರಿಸುತ್ತದೆ. ಹಾಗೆಯೇ ಮೊಬೈಲ್ ಮ್ಯೂಸಿಕ್‌ನೊಂದಿಗೆ ಸಿಂಕ್ರೊನೈಸ್ ಆಗಿ ಚಲಿಸುತ್ತದೆ. ಇದು ಅದನ್ನು ಮಿನಿ-ರೋಬೋಟ್ ಮಾಡುತ್ತದೆ.
ಮೊಬೈಲ್‌ನಲ್ಲಿ ಇರುವ ಹಾರ್ಡ್‌ವೇರ್ ಸೆನ್ಸಾರ್‌ಗಳು ವಾಯ್ಸ್ ಅನ್ನು ಗುರುತಿಸುವ, ಚಲನೆಯನ್ನು ಪತ್ತೆಹಚ್ಚುವ ಮತ್ತು ದೃಶ್ಯ ಅರಿವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿವೆ. ಇದರಿಂದಾಗಿ ಈ ಫೋನ್ ಸೆನ್ಸಾರ್‌ಗಳು ಮತ್ತು ಮನುಷ್ಯರೊಂದಿಗೆ ಸಂವಹನ ನಡೆಸುತ್ತದೆ. ಈ ತಂತ್ರಜ್ಞಾನವನ್ನು ನಿಯಮಿತ ಮೊಬೈಲ್ ತರಹದ ವಿನ್ಯಾಸಕ್ಕೆ ಹೊಂದಿಸಲು ಸಂಸ್ಥೆಯು ಹಲವಾರು ಎಂಜಿನಿಯರಿಂಗ್ ತಂಡಗಳೊಂದಿಗೆ ಕೆಲಸ ಮಾಡಬೇಕಾಯಿತು. ಸಂಸ್ಥೆಯು ಉದ್ಯಮದ ಮಾನದಂಡಕ್ಕಿಂತ 70 ಪ್ರತಿಶತ ಚಿಕ್ಕದಾದ ಕಸ್ಟಮ್ ಮೈಕ್ರೋ ಮೋಟಾರ್ ಅನ್ನು ಸಹ ಅಭಿವೃದ್ಧಿಪಡಿಸಿದೆ. ಈ ಸಣ್ಣ ಮೋಟಾರ್‌ನಿಂದಾಗಿ ಹಾನರ್ ಉದ್ಯಮದ ಅತ್ಯಂತ ಸಾಂದ್ರವಾದ 4DoF ಗಿಂಬಲ್ ವ್ಯವಸ್ಥೆಯನ್ನು ನೀಡಿದೆ. ಇದು ರೋಬೋಟಿಕ್ ಚಲನೆಯ ನಿಯಂತ್ರಣದ ಅಡಿಪಾಯ ಎಂದು ಹೇಳಲಾಗಿದೆ.
ಹಾನರ್ ರೋಬೋಟ್ ಫೋನ್ ಅನ್ನು ಪ್ರೊ ಲೆವೆಲ್ ಮೊಬೈಲ್ ವೀಡಿಯೊಗ್ರಫಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು 200 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಉದ್ಯಮದ ಮೊದಲ 3 ಆಕ್ಸಿಸ್ ಗಿಂಬಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಈ ನೂತನ ಮೊಬೈಲ್ ಸೂಪರ್-ಸ್ಟೆಡಿ ವೀಡಿಯೊವನ್ನು ನೀಡುತ್ತದೆ. ಹಾಗೆಯೇ ಮೊಬೈಲ್ AI ಆಬ್ಜೆಕ್ಟ್ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಸಹ ಪಡೆದುಕೊಂಡಿದೆ. ಇದು ರಿಯಲ್ ಟೈಮ್‌ನಲ್ಲಿ ಚಲಿಸುವ ವಸ್ತುಗಳನ್ನು ಟ್ರ್ಯಾಕ್ ಮಾಡುತ್ತದೆ. ಈ ಮೊಬೈಲ್ 90° ಮತ್ತು 180° ವರೆಗಿನ ಬುದ್ಧಿವಂತ ಕ್ಯಾಮೆರಾ ತಿರುಗುವಿಕೆಯನ್ನು ನೀಡುತ್ತದೆ.