Motorola G45 5G in Amazon Summer Sale
Amazon Great Summer Sale 2025: ಗ್ರಾಹಕರಿಗೆ ಬಂಪರ್ ರಿಯಾಯಿತಿಯಲ್ಲಿ ಮೊಟೊರೊಲಾ ಕಂಪನಿಯ ಪವರ್ಫುಲ್ ಕ್ಯಾಮೆರಾ ಸ್ಮಾರ್ಟ್ ಫೋನ್ ಮೊಟೊರೊಲಾ 5G ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶ ಸಿಗುತ್ತಿದೆ. ಅಮೆಜಾನ್‌ನಲ್ಲಿ ಪ್ರಾರಂಭವಾಗಿರುವ ಗ್ರೇಟ್ ಸಮ್ಮರ್ ಸೇಲ್ ಸಮಯದಲ್ಲಿ ಈ ಸ್ಮಾರ್ಟ್ ಫೋನ್ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ. Motorola G45 5G ಅನ್ನು ದೊಡ್ಡ ರಿಯಾಯಿತಿಯೊಂದಿಗೆ ಪಟ್ಟಿ ಮಾಡಲಾಗಿದ್ದು ಅದರ ಬೆಲೆ 11,000 ಸಾವಿರ ರೂಗಳಿಗೆ ಇಳಿದಿದೆ. ಅಲ್ಲದೆ ಪ್ರತ್ಯೇಕವಾಗಿ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಪ್ರಯೋಜನವನ್ನು ಸಹ ನೀಡುತ್ತಿದೆ.
ಈ ಸೇಲ್ ನಲ್ಲಿ ಮೊಟೊರೊಲಾ ಸ್ಮಾರ್ಟ್ ಫೋನ್ 11,119 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಈ ಸ್ಮಾರ್ಟ್ ಫೋನ್ ಮೇಲೆ ವಿಶೇಷ ಬ್ಯಾಂಕ್ ಕೊಡುಗೆಯ ಪ್ರಯೋಜನವನ್ನು ಸಹ ನೀಡಲಾಗುತ್ತಿದ್ದು ಅಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸುವಾಗ ಗ್ರಾಹಕರು 1000 ರೂ.ಗಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಯಾವುದೇ ಜಾಹಿರಾತುಗಲಿಲ್ಲದೆ ಪ್ಯೂರ್ ಆಂಡ್ರಾಯ್ಡ್ ಈ Motorola G45 5G ಫೋನ್ ಬಜೆಟ್ ಬೆಲೆಯಲ್ಲಿ ಉತ್ತಮ ಡೀಲ್ ನೀಡುತ್ತಿದೆ.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Motorola G45 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 10,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: 5 Best Weather Apps: ಮಾನ್ಸೂನ್ ಮಳೆಯ ಮುನ್ಸೂಚನೆಯನ್ನು ತಿಳಿಯಲು ಬೆಸ್ಟ್ ಹವಾಮಾನ ಅಪ್ಲಿಕೇಶನ್‌ಗಳು!
ಮೊಟೊರೊಲಾ ಫೋನ್ ಕ್ರಾಲ್ಮಾಮ್ ಸ್ನಾಪ್‌ಡ್ರಾಗನ್ 6s ಜೆನ್ 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 120Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ 6.5 ಇಂಚಿನ HD+ IPS LCD ಡಿಸ್ಟ್ರೇಯನ್ನು ಹೊಂದಿದೆ. ಈ ಸಾಧನವು 50MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದ್ದು ಮುಂಭಾಗವು 16MP ಸೆಲ್ಸಿ ಕ್ಯಾಮೆರಾವನ್ನು ಹೊಂದಿದೆ. 5000mAh ಬ್ಯಾಟರಿಯು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಸ್ಟೀರಿಯೊ ಸ್ಪೀಕರ್‌ಗಳು, ಡಾಲ್ಟಿ ಅಟ್ರ್ಯಾಸ್ ಬೆಂಬಲ ಮತ್ತು IP52 ರೇಟಿಂಗ್‌ನೊಂದಿಗೆ ಸ್ಟಾಶ್ ನಿರೋಧಕ ವಿನ್ಯಾಸವನ್ನು ಹೊಂದಿದೆ.