Motorola Edge 50 Fusion gets Price drop under rs 20000 on Flipkart sale
ಭಾರತದಲ್ಲಿ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ವರ್ಷದ ಕೊನೆ ಮಾರಾಟದಲ್ಲಿ ಈ Motorola Edge 50 Fusion ಫೋನ್ ಅನ್ನು ಅದರ ಬಿಡುಗಡೆ ಬೆಲೆಗಿಂತ ಸಾವಿರಾರು ರೂಪಾಯಿ ಕಡಿಮೆ ಬೆಲೆಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್‌ನ ಈ ವರ್ಷ ಮುಕ್ತಾಯದ ನಂತರ ಇ-ಕಾಮರ್ಸ್ ದೈತ್ಯ ಮತ್ತೊಂದು ಹೊಸ ಮಾರಾಟವನ್ನು ಘೋಷಿಸುವ ಮುಂಚೆ ಈ ಡೀಲ್ ನೀಡುತ್ತಿದೆ. ಈ ಹೊಸ ವರ್ಷದ ಧಮಾಕಾ ಮಾರಾಟದಲ್ಲಿ ಮೊಟೊರೊಲಾ ಇತ್ತೀಚೆಗೆ ಬಿಡುಗಡೆಯಾಗಿರುವ ಮೋಟೋರೋಲ ಫೋನ್‌ನ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈ ಫೋನ್ ಕರ್ವ್ AMOLED ಡಿಸ್ಪ್ಲೇ, ಅತ್ಯುತ್ತಮ ಕ್ಯಾಮೆರಾ ಮತ್ತು ಪ್ರೀಮಿಯಂ ಲುಕ್ ಜೊತೆಗೆ ಪ್ಯಾಕ್ ಮಾಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಈ ಸ್ಮಾರ್ಟ್ ಫೋನ್ ಖರೀದಿಯೊಂದಿಗೆ ಇತರ ಅತ್ಯಾಕರ್ಷಕ ಕೊಡುಗೆಗಳನ್ನು ಸಹ ಲಿಮಿಟೆಡ್ ಸಮಯಕ್ಕೆ ನೀಡಲಾಗುತ್ತಿದೆ.
Also Read: Motorola Signature ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
Motorola Edge 50 Fusion ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ (Forest Green) ರೂಪಾಂತರವನ್ನು 17,999 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ (Hot Pink) ರೂಪಾಂತರವನ್ನು ₹23,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಮೂಲ ರೂಪಾಂತರದ ಬೆಲೆಯನ್ನು ₹17,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಬಿಡುಗಡೆಯ ಬೆಲೆ 22,999 ರೂಗಳಿಗೆ ಪರಿಚಯಿಸಿತ್ತು ಇದಕ್ಕೆ ಹೋಲಿಸಿದರೆ ಪ್ರಸ್ತುತ ಸುಮಾರು ₹5000 ರೂಗಳಷ್ಟು ಕಡಿತಗೊಂಡಿದೆ.
ಅಲ್ಲದೆ Motorola Edge 50 Fusion ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Motorola Edge 50 Fusion ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹16,640 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಸ್ಮಾರ್ಟ್ ಫೋನ್ 6.7 ಇಂಚಿನ pOLED ಎಂಡ್‌ಲೆಸ್ ಎಡ್ಜ್ ಡಿಸ್ಪ್ಲೇ 144Hz ರಿಫ್ರೆಶ್ ದರವನ್ನು ಹೊಂದಿದ್ದು ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50MP ಸೋನಿ LYTIA 700C ಪ್ರೈಮರಿ ಸೆನ್ಸರ್ ಮತ್ತು ಮ್ಯಾಕ್ರೋ ಶೂಟರ್ ಆಗಿ ಕಾರ್ಯನಿರ್ವಹಿಸುವ 13MP ಅಲ್ಟ್ರಾವೈಡ್ ಕ್ಯಾಮೆರಾ ಸೇರಿವೆ. ಅಲ್ಲದೆ 32MP ಮುಂಭಾಗದ ಕ್ಯಾಮೆರಾವನ್ನು ಉತ್ತಮ ಗುಣಮಟ್ಟದ ಸೆಲ್ಫಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಸ್ಮಾರ್ಟ್ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ Qualcomm Snapdragon 7s Gen 2 ಪ್ರೊಸೆಸರ್ ನಿಂದ ಚಾಲಿತವಾಗಿದ್ದು ಇದು ದೈನಂದಿನ ಕಾರ್ಯಗಳು ಮತ್ತು ಮಧ್ಯಮ ಗೇಮಿಂಗ್‌ಗೆ ಸುಗಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಫೋನ್ 68W ಟರ್ಬೊಪವರ್ ವೇಗದ ಚಾರ್ಜಿಂಗ್ ಹೊಂದಿರುವ 5000mAh ಬ್ಯಾಟರಿಯು ಪೂರ್ಣ ದಿನ ಬಾಳಿಕೆ ಬರುತ್ತದೆ ಮತ್ತು ತ್ವರಿತವಾಗಿ ರೀಚಾರ್ಜ್ ಮಾಡಬಹುದು ಎಂದು ಖಚಿತಪಡಿಸುತ್ತದೆ.