Samsung Galaxy M06 5G Sale
ನೀವು ಸ್ಯಾಮ್‌ಸಂಗ್‌ನ ಫ್ಯಾನ್ ಆಗಿದ್ದು ನಿಮಗಾಗಿ ಅಥವಾ ಬೇರೆಯವರಿಗೆ ಉಡುಗೊರೆಗಾಗಿ ಒಂದೊಳ್ಳೆ 5G ಸ್ಮಾರ್ಟ್ಫೋನ್ ಅನ್ನು ಸುಮಾರು 10,000 ರೂಗಳೊಳಗೆ ಹುಡುಕುತ್ತಿದ್ದರೆ ಈ Samsung Galaxy M06 5G ಜಬರ್ದಸ್ತ್ ಡೀಲ್ ಬಗ್ಗೆ ಒಮ್ಮೆ ತಿಳಿಯಲೇಬೇಕು. ಯಾಕೆಂದರೆ ಪ್ರಸ್ತುತ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಏಕೈಕ ಸ್ಯಾಮ್‌ಸಂಗ್‌ನ 5G ಸ್ಮಾರ್ಟ್ಫೋನ್ ಅಂದ್ರೆ ಕೇವಲ ₹9,198 ರೂಗಳಿಗೆ ಮಾರಾಟಕ್ಕೆ ಪಟ್ಟಿ ಮಾಡಲಾಗಿರುವ Samsung Galaxy M06 5G ಆಗಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಅಸಲಿ ಆಫರ್ ಬೆಲೆ ಎಷ್ಟು ಮತ್ತು ಇದರನ್ನು ಖರೀದಿಸಲು ಮುಖ್ಯ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
Samsung Galaxy M06 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹9,198 ರೂಗಳಿಗೆ ಮತ್ತು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹10,499 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರಿಗೆ ಕಂಪನಿ 200 ರೂಗಳ ಉಚಿತ ಕೂಪನ್ ಸಹ ನೀಡುತ್ತಿದೆ. ಹೆಚ್ಚುವರಿ ಡಿಸ್ಕೌಂಟ್ ಪಡೆಯಲು ಸುಮಾರು 8,700 ರೂಗಳವರೆಗೆ ವಿನಿಮಯ ಬೋನಸ್ ಸಹ ನಿಡುತ್ತಿದೆ ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Samsung Galaxy M06 5G ಸ್ಮಾರ್ಟ್ಫೋನ್ 6.7 ಇಂಚಿನ HD+ LCD ಡಿಸ್ಪ್ಲೇಯನ್ನು 90Hz ರಿಫ್ರೆಶ್ ದರ ಮತ್ತು 800 nits ಗರಿಷ್ಠ ಹೊಳಪನ್ನು ಹೊಂದಿದೆ. ಇದು MediaTek Dimensity 6300 ಮೂಲಕ ಜೋಡಿಸಲ್ಪಟ್ಟಿದೆ. ಸಾಫ್ಟ್‌ವೇರ್ ವಿಷಯದಲ್ಲಿ Samsung Galaxy M06 5G ಆಂಡ್ರಾಯ್ಡ್ 15 ಆಧಾರಿತ One UI 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಾಲ್ಕು ವರ್ಷಗಳ OS ಅಪ್‌ಗ್ರೇಡ್‌ಗಳನ್ನು ಪಡೆಯುವುದು ದೃಢಪಟ್ಟಿದೆ.
ಸ್ಮಾರ್ಟ್ಫೋನ್ 25W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ. ಇಮೇಜಿಂಗ್‌ಗಾಗಿ 50MP ಪ್ರೈಮರಿ ಕ್ಯಾಮೆರಾ, 2MP ಡೆಪ್ತ್ ಸೆನ್ಸರ್ ಮತ್ತು 8MP ಸೆಲ್ಫಿ ಕ್ಯಾಮೆರಾ ಇದೆ. ಕೈಗೆಟುಕುವ ಬೆಲೆಯಲ್ಲಿ 5G ಫೋನ್ ಹುಡುಕುತ್ತಿರುವ ಜನರಿಗೆ Galaxy M06 5G ಫ್ಲ್ಯಾಗ್‌ಶಿಪ್ ದರ್ಜೆಯ ಸಾಫ್ಟ್‌ವೇರ್ ಬೆಂಬಲದೊಂದಿಗೆ 50MP ಪ್ರೈಮರಿ ಮುಖ್ಯ ಕ್ಯಾಮೆರಾ ಮತ್ತು ಬೃಹತ್ ಬ್ಯಾಟರಿಯೊಂದಿಗೆ ಉತ್ತಮ ಆಯ್ಕೆಯಾಗಿದೆ.