108MP AI ಕ್ಯಾಮೆರಾ ಮತ್ತು 6600mAh ಬ್ಯಾಟರಿಯ HONOR X9c 5G ಮೇಲೆ ಇಂದು ಜಬರ್ದಸ್ತ್ ಡಿಸ್ಕೌಂಟ್ ಲಭ್ಯ!

Updated on 30-Sep-2025
HIGHLIGHTS

ಪ್ರಸ್ತುತ ಅಮೆಜಾನ್ ಮಾರಾಟದಲ್ಲಿ HONOR X9c 5G ಭಾರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ.

HONOR X9c 5G ಸ್ಮಾರ್ಟ್ಫೋನ್ 6.78 ಇಂಚಿನ AMOLED ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿದೆ.

ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 108MP AI ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ.

ಪ್ರಸ್ತುತ ಅಮೆಜಾನ್ ಫೆಸ್ಟಿವಲ್ ಮಾರಾಟದಲ್ಲಿ (Amazon GIF Sale 2025) ಹಾನರ್ ಕಂಪನಿಯ ಈ HONOR X9c 5G ಜಬರ್ದಸ್ತ್ ಸ್ಮಾರ್ಟ್ಫೋನ್ ಸುಂದರವಾದ ಟೈಟಾನಿಯಂ ಪರ್ಪಲ್ ಬಣ್ಣದಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ. ಈ ಫೋನ್ ಆಂಟಿ ಡ್ರಾಪ್ ಟೆಕ್ನಾಲಜಿಯೊಂದಿಗೆ (Ultra-Bounce Anti-Drop) ಕರ್ವ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಅಲ್ಲದೆ ಈ ಫೋನ್ ಕೇವಲ 189 ಗ್ರಾಂ ತೂಕವನ್ನು ಹೊಂದಿದ್ದು ಫೋನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಸ್ಮಾರ್ಟ್ಫೋನ್ ವಿಶೇಷ ಅಂದ್ರೆ ಫೋನ್ 108MP AI ಕ್ಯಾಮೆರಾ ಮತ್ತು 6600mAh ಬ್ಯಾಟರಿಯೊಂದಿಗೆ ಸಿಕ್ಕಾಪಟ್ಟೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಹಾನರ್ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಲಭ್ಯವಿದೆ.

HONOR X9c 5G ಬೆಲೆ ಮತ್ತು ಆಫರ್ ಡಿಸ್ಕೌಂಟ್ಗಳೇನು?

ಈ HONOR X9c 5G ಸ್ಮಾರ್ಟ್ಫೋನ್‌ ಆರಂಭಿಕ ಒಂದೇ ಒಂದು ಮಾದರಿಯಲ್ಲಿ ಲಭ್ಯವಿದ್ದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಪ್ರಸ್ತುತ ₹20,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು SBI ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1250 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ ಈ ಸ್ಮಾರ್ಟ್ಫೋನ್‌ ಆರಂಭಿಕ ಮಾದರಿಯನ್ನು ಸುಮಾರು 19,748 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು.

ಅಲ್ಲದೆ HONOR X9c 5G ಸ್ಮಾರ್ಟ್ಫೋನ್‌ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 19,500 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: Jio Family Plan: ಕೇವಲ 449 ರೂಗಳ ಒಂದೇ ರಿಚಾರ್ಜ್‌ನಲ್ಲಿ 3 ನಂಬರ್ ಬಳಸಬಹುದು!

HONOR X9c 5G ಫೀಚರ್ ಮತ್ತು ವಿಶೇಷತೆಗಳೇನು?

ಈ ಎಲ್ಲಾ ರಕ್ಷಣೆಯು ಸುಂದರವಾದ 6.78 ಇಂಚಿನ AMOLED ಕ್ವಾಡ್-ಕರ್ವ್ಡ್ ಡಿಸ್ಪ್ಲೇಯನ್ನು ರೇಷ್ಮೆಯಂತಹ ನಯವಾದ 120Hz ರಿಫ್ರೆಶ್ ದರದೊಂದಿಗೆ ಸುತ್ತುವರೆದಿದ್ದು ತಲ್ಲೀನಗೊಳಿಸುವ ಮತ್ತು ರೋಮಾಂಚಕ ದೃಶ್ಯ ಅನುಭವವನ್ನು ಒದಗಿಸುತ್ತದೆ. ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ ಜಬರದಸ್ತ್ 108MP AI ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಈ ಸುಧಾರಿತ ಸೆಟಪ್ ಸವಾಲಿನ ಲೋ ಲೈಟ್ ಪರಿಸ್ಥಿತಿಗಳಲ್ಲಿಯೂ ಸಹ ಸ್ಪಷ್ಟ ಸ್ಪಷ್ಟವಾದ ಫೋಟೋಗಳನ್ನು ಮತ್ತು ಸ್ಥಿರವಾದ ವೀಡಿಯೊ ರೆಕಾರ್ಡಿಂಗ್ ಅನ್ನು ಖಚಿತಪಡಿಸುತ್ತದೆ. ಜೊತೆಗೆ AI ಮೋಷನ್ ಸೆನ್ಸಿಂಗ್ ಮತ್ತು ಮ್ಯಾಜಿಕ್ ಎರೇಸರ್‌ನಂತಹ AI ಫೀಚರ್ಗಳೊಂದಿಗೆ ನಿಮ್ಮ ಫೋಟೋಗಳು ತಕ್ಷಣವೇ ಸಾಧಾರಣದಿಂದ ಪ್ರೊಫೆಷನಲ್ ರಿಸಲ್ಟ್ ನೀಡುತ್ತದೆ.

ಈ ಹಾನರ್ ಸ್ಮಾರ್ಟ್ ಫೋನ್ ಮಧ್ಯಮ ಶ್ರೇಣಿಯ ಪವರ್‌ಹೌಸ್ ಆಗಿದ್ದು ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 ಪ್ರೊಸೆಸರ್ ಹೊಂದಿದೆ. ಇದರ ಬೃಹತ್ 6600mAh ಬ್ಯಾಟರಿ ಇದು ಒಂದೇ ಚಾರ್ಜ್‌ನಲ್ಲಿ ಮೂರು ದಿನಗಳವರೆಗೆ ಬಳಕೆಯನ್ನು ನೀಡುವುದರೊಂದಿಗೆ 66W ಸೂಪರ್‌ಚಾರ್ಜ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಹಾನರ್ ಇದರಲ್ಲಿ ಅಲ್ಟ್ರಾ ಬೌನ್ಸ್ ತಂತ್ರಜ್ಞಾನವನ್ನು ಒಳಗೊಂಡಿದ್ದು ಫೋನ್ ಅಂಡರ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ಅಕ್ಸೆಲೆರೊಮೀಟರ್, ಗೈರೊ ಸೆನ್ಸರ್‌ಗಳ ಪ್ರಮಾಣಿತ ಸೂಟ್ ಒಳಗೊಂಡಿದೆ. ಇದು IP65M ಡಸ್ಟ್ ಮತ್ತು ವಾಟರ್ ಪ್ರತಿರೋಧವನ್ನು ನೀಡುವುದರೊಂದಿಗೆ ಇದರಲ್ಲಿ ಆಂಟಿ ಡ್ರಾಪ್ ಡಿಸ್ಪ್ಲೇಯನ್ನು ಹೊಂದಿದ್ದು ಐದು ಮೀಟರ್ನಿಂದ ಕೆಳಗೆ ಬಿದ್ದರೂ ಏನೂ ಆಗದಂತ ಗಟ್ಟಿ ಮುಟ್ಟದ ಡಿಸ್ಪ್ಲೇ ಹೊಂದಿದೆ.

Disclosure: This Article Contains Affiliate Links

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :