Samsung Galaxy A35 5G get huge price drop on Flipkart
Samsung Galaxy A35 5G Price Drop: ನೀವು ಸ್ಯಾಮ್‌ಸಂಗ್ ಫ್ಯಾನ್ ಆಗಿದ್ದು ನಿಮಗೊಂದು ಜಬರ್ದಸ್ತ್ ಫುಲ್ ಫೀಚರ್ ಲೋಡೆಡ್ 5G ಸ್ಮಾರ್ಟ್ಫೋನ್ ಸುಮಾರು 20,000 ರೂಗಳೊಳಗೆ ಖರೀದಿಸಲು ಬಯಸುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. ಯಾಕೆಂದರೆ ಫ್ಲಿಪ್ಕಾರ್ಟ್ ಮೂಲಕ ಸ್ಯಾಮ್‌ಸಂಗ್ ತನ್ನ ಹೆಚ್ಚು ಮಾರಾಟವಾಗುತ್ತಿರುವ Samsung Galaxy A35 5G ಸ್ಮಾರ್ಟ್ಫೋನ್ ಬೆಲೆಯನ್ನು ಸದ್ದಿಲ್ಲದೇ ಕಡಿಮೆ ಮಾಡಿದೆ. ಈ ಡೀಲ್ ಪ್ರಸ್ತುತ ಲಿಮಿಟೆಡ್ ಸಮಯಕ್ಕೆ ಮಾತ್ರ ಲಭ್ಯವಿದ್ದು ನಿಮ್ಮ ಕೈ ಜಾರುವ ಮುಂಚೆ ಈ ಡೀಲ್ ಪಡೆದುಕೊಳ್ಳಿ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಹೊಸ ಆಫರ್ ಬೆಲೆ ಎಷ್ಟು ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಪಟ್ಟಿ ಮಾಡಲಾಗಿರುವ ಈ ಲೇಟೆಸ್ಟ್ Samsung Galaxy A35 5G ಸ್ಮಾರ್ಟ್ಫೋನ್ ಒಟ್ಟು ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಮೂಲಕ ಇದರ ಆರಂಭಿಕ ರೂಪಾಂತರ 8GB RAM ಮತ್ತು 128GB ಸ್ಟೋರೇಜ್ ಬಿಡುಗಡೆಯ ಬೆಲೆಗಿಂತ ಬರೋಬ್ಬರಿ 13,999 ರೂಗಳ ಡಿಸ್ಕೌಂಟ್ ನಂತರ 19,999 ರೂಗಳಿಗೆ ಮಾರಾಟವಾಗುತ್ತಿದೆ. ಇದರ ಕ್ರಮವಾಗಿ ಮತ್ತೊಂದು ಮಾದರಿ 8GB RAM ಮತ್ತು 256GB ಸ್ಟೋರೇಜ್ ಮಾದರಿ ಸುಮಾರು 21,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ.
ಅಲ್ಲದೆ Samsung Galaxy A16 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Samsung Galaxy A16 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 14,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: Best Air Coolers: ಬೇಸಿಗೆಯ ಬಿಸಿಲಲ್ಲಿ ನಿಮ್ಮನ್ನು ಸದಾ ತಪ್ಪಾಗಿಡುವ ಲೇಟೆಸ್ಟ್ ಏರ್ ಕೂಲರ್ಗಳು!
ಈ Samsung Galaxy A35 5G ಸ್ಮಾರ್ಟ್ಫೋನ್ 2340 x 1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.6 ಇಂಚಿನ ಪೂರ್ಣ HD + ಸೂಪರ್ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ನೊಂದಿಗೆ ಹೊಂದಿದೆ. ಸ್ಮಾರ್ಟ್ ಫೋನ್‌ನಲ್ಲಿ ಸ್ಮೂತ್ ಮತ್ತು ಸಿಂಪಲ್ ಕಾರ್ಯ ಬಳಕೆಗಾಗಿ Exynos 1380 ಚಿಪ್‌ಸೆಟ್ ಅನ್ನು ನೀಡಿದೆ. ಈ ಫೋನ್‌ನಲ್ಲಿ LED ಫ್ಲ್ಯಾಷ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಜೊತೆಗೆ 8MP ಮೆಗಾಪಿಕ್ಸೆಲ್ ಅಲ್ಟಾವೈಡ್ ಆಂಗಲ್ ಲೆನ್ಸ್ ಹೊಂದಿದೆ. ಅಲ್ಲದೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಕ್ಯಾಮೆರಾ ಹೊಂದಿದೆ.
ಇದನ್ನೂ ಓದಿ: Aadhaar Update: ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರನ್ನು ಬದಲಾಯಿಸಬಹುದು? ಬೇರೆ ಮಾಹಿತಿಗೆ ಮಿತಿ ಎಷ್ಟು?
Samsung Galaxy A35 5G ಫೋನ್‌ನಲ್ಲಿ 5000mAh ಬ್ಯಾಟರಿಯೊಂದಿಗೆ 25w ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ಬಯೋಮೆಟ್ರಿಕ್ ಭದ್ರತೆಗಾಗಿ ಕಂಪನಿಯು ಇನ್-ಡಿಸ್ಟ್ರೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡುತ್ತಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ OneUI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಫೋನ್ನಲ್ಲಿ IP67 ಡಸ್ಟ್ ಮತ್ತು ವಾಟರ್ ಪ್ರೂಫ್ ರೇಟಿಂಗ್ ಅನ್ನು ಸಹ ನೀಡುತ್ತಿದೆ. ಉತ್ತಮ ಆಡಿಯೋ ಅನುಭವಕ್ಕಾಗಿ ಸ್ಟೀರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಟಿ ಅಟ್ಟೋನ್ ಅನ್ನು ಸಹ ಪಡೆಯುತ್ತೀರಿ.