iQOO Z10 Price in India
ವಿವೋದ ಸಬ್ ಬ್ರಾಂಡ್ ಐಕ್ಯೂ ತನ್ನ ಅತ್ಯಂತ ಪವರ್ಫುಲ್ ಬ್ಯಾಟರಿ ಮತ್ತು ಸೂಪರ್ ಕೂಲ್ ಸೆಲ್ಫಿ ಕ್ಯಾಮೆರಾದ iQOO Z10 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್‌ಗೆ ಹೆಸರಿಸಿದೆ. ಈ iQOO Z10 ಸ್ಮಾರ್ಟ್ ಫೋನ್ 7300mAh ಬ್ಯಾಟರಿಯನ್ನು ಹೊಂದಿದ್ದು 90W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು ಭಾರತದಲ್ಲಿ 7300mAh ಬ್ಯಾಟರಿಯನ್ನು ಪಡೆಯುವ ಮೊಟ್ಟ ಮೊದಲ 5G ಫೋನ್ ಆಗಿದೆ. ಬ್ಯಾಟರಿಯ ಜೊತೆಗೆ iQOO Z10 ಫೋನ್ ಪವರ್ಫುಲ್ ಪ್ರೊಸೆಸರ್ ಮತ್ತು ಕ್ಯಾಮೆರಾ ಕೂಡ ಇದ್ದು ಇದು ಈ ಫೋನ್ ಅನ್ನು ಮಧ್ಯಮ ವಿಭಾಗದಲ್ಲಿ ಅಲ್-ರೌಂಡರ್ ಫೋನ್ ಆಗಿ ಮಾಡುತ್ತದೆ.
ಕಂಪನಿಯು IQOO Z10 ಅನ್ನು ಒಟ್ಟು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಮೊದಲನೇಯದಾಗಿ 8GB RAM + 128GB ಮಾದರಿಗೆ 21,999 ರೂಗಳು ಇದರ 8GB + 256GB ಮಾದರಿಗೆ 23,999 ರೂಗಳಾಗಲಿದ್ದು ಇದರ ಕೊನೆಯದಾಗಿ ಇದರ 12GB + 256GB ಆವೃತ್ತಿಗಳ ಬೆಲೆ ಕ್ರಮವಾಗಿ 25,999 ರೂಗಳಾಗಿವೆ.
ಇದು ಗ್ರೇಸಿಯರ್ ಸಿಲ್ವರ್ ಮತ್ತು ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. iQOO Z10 ಮೊದಲ ಮಾರಾಟದಲ್ಲಿ ಗ್ರಾಹಕರು ಈ ಫೋನ್ ಅನ್ನು 2000 ರೂಗಳ ಬ್ಯಾಂಕ್ ಅಥವಾ ವಿನಿಮಯ ಆಫರ್ ಅಡಿಯಲ್ಲಿ ಸುಮಾರು ರೂ. 19,999 ರೂಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
IQOO Z10 ಸ್ಮಾರ್ಟ್ಫೋನ್ 6.77-ಇಂಚಿನ ಪೂರ್ಣ HD AMOLED ಡಿಸ್ಟ್ರೇಯನ್ನು 120Hz ರಿಫ್ರೆಶ್ ದರ ಮತ್ತು 5,000 nits (ಹೆಚ್ಚಿನ ಬ್ರಿಟ್‌ನೆಸ್ ಮೋಡ್‌ನಲ್ಲಿ 1300 nits) ಗರಿಷ್ಠ ಬೈಟ್‌ನೆನ್ ಹೊಂದಿದೆ. ಫೋನ್ ಅನ್‌ಲಾಕ್ ಮಾಡಲು ಫೋನ್‌ನಲ್ಲಿ ಇನ್-ಡಿಸ್ಟ್ರೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ಈ ಫೋನ್ MIL-STD-810H ಪ್ರಮಾಣೀಕರಣದೊಂದಿಗೆ ಬರುತ್ತದೆ. IQOO Z10 ಸ್ಮಾರ್ಟ್ಫೋನ್ ನೀರು ಮತ್ತು ಧೂಳಿನಿಂದ ರಕ್ಷಿಸಲು ಫೋನ್‌ಗೆ IP65 ಪ್ರಮಾಣೀಕರಣವಿದೆ.
ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಫೋನ್ LPDDR4X RAM ಮತ್ತು UFS 2.2 ಸ್ಟೋರೇಜ್ ಬರುತ್ತದೆ. ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ IQOO Z10 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಇಲ್ಲಿಯವರೆಗಿನ ಭಾರತೀಯ ಸ್ಮಾರ್ಟ್‌ಫೋನ್‌ಗಳಲ್ಲಿ ಅತಿ ದೊಡ್ಡ 7,300mAh ಬ್ಯಾಟರಿಯನ್ನು ಹೊಂದಿದ್ದು ಅದು 90W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.