ಗೂಗಲ್ ಕಂಪನಿಯ Google Pixel 9a ಸ್ಮಾರ್ಟ್‌ಫೋನ್ ಸ್ಟೈಲಿಶ್ ಲುಕ್ ಹಾಗೂ ಆಕರ್ಷಕ ಲುಕ್‌ನೊಂದಿಗೆ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ. ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಇದೀಗ ಗೂಗಲ್ ಪಿಕ್ಸಲ್ 9a ಮೊಬೈಲ್ ಬೆಲೆಯಲ್ಲಿ ಬೊಂಬಾಟ್ ಇಳಿಕೆ ಕಾಣಿಸಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಗೂಗಲ್ ಸಂಸ್ಥೆಯ ಈ ಮೊಬೈಲ್ ಗೂಗಲ್‌ನ Tensor G4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 5,100 mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಗೂಗಲ್ ಪಿಕ್ಸಲ್ 9a ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Vivo T5 Pro ಮೊಬೈಲ್ 9,020mAh ಬ್ಯಾಟರಿಯೊಂದಿಗೆ ಎಂಟ್ರಿ ಕೊಡುವುದು ಕನ್ಫರ್ಮ್!
ಗೂಗಲ್ ಕಂಪನಿಯ ಗೂಗಲ್ ಪಿಕ್ಸಲ್ 9a ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB + 256GB ವೇರಿಯಂಟ್ ಬೆಲೆ 49,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 39,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಈ ಫೋನ್ ಆಕರ್ಷಕ ಕಲರ್ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ.
ಗೂಗಲ್ ಪಿಕ್ಸಲ್ 9a ಸ್ಮಾರ್ಟ್‌ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.3 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇದರ ಸ್ಕ್ರೀನ್ 2700 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 1080 x 2424 ಪಿಕ್ಸೆಲ್‌ಗಳ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಈ ಮೊಬೈಲ್ ಗೂಗಲ್‌ನ Tensor G4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 8 GB RAM + 256 ಸ್ಟೋರೇಜ್ ಆಯ್ಕೆ ಪಡೆದಿದೆ.
ಹಾಗೆಯೇ ಗೂಗಲ್ ಪಿಕ್ಸಲ್ 9a ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 48MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದರ ದ್ವಿತೀಯ ಕ್ಯಾಮೆರಾವು 13 MP ಅಲ್ಟ್ರಾವೈಡ್ ಸೆನ್ಸಾರ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 13MP ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 5,100 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ.