Google Pixel 11 Pro Fold launched with ultra sleek design and mind blowing price
ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ನೂತನವಾಗಿ Google Pixel 11 Pro Fold ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗೂಗಲ್ ಕಂಪನಿಯ ಈ ಹೊಸ ಮೊಬೈಲ್ Tensor G6 ಚಿಪ್‌ಸೆಟ್ ಪ್ರೊಸೆಸರ್ ಪಡೆದುಕೊಂಡಿರುವ ಜೊತೆಗೆ Titan M3 ಸೆಕ್ಯುರಿಟಿ ಕೋಪ್ರೊಸೆಸರ್ ಸಪೋರ್ಟ್ ಸಹ ಹೊಂದಿದೆ. ಹಾಗೆಯೇ ಈ ನೂತನ ಫೋಲ್ಡ್ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರುವ ಜೊತೆಗೆ ಈ ಫೋನ್ OLED ಸೂಪರ್ ಆಕ್ಟುವಾ ಕವರ್ ಡಿಸ್‌ಪ್ಲೇ ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಲಿವ್ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಾಗಾದರೇ ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್ ಸ್ಮಾರ್ಟ್‌ಫೋನ್ ಸರಣಿ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಬಹುನಿರೀಕ್ಷಿತ Google Pixel 11 ಸರಣಿ ಬಿಡುಗಡೆ; ಬೆಲೆ ಹಾಗೂ ಫೀಚರ್ಸ್ ಮಾಹಿತಿ ಇಲ್ಲಿದೆ
ಭಾರತದಲ್ಲಿ ಹೊಸದಾಗಿ ಲಗ್ಗೆ ಇಟ್ಟಿರುವ ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್ ಮೊಬೈಲ್ ಸಿಂಗಲ್ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಇದರ 16GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 1,86,999 ರೂ.ಗಳು ಆಗಿದೆ. ಇನ್ನು ಈ ಫೋನ್ ಆಲಿವ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅಂದಹಾಗೆ ಪುಸ್ತಕ ಶೈಲಿಯ ಮಡಚಬಹುದಾದ ಈ ಮೊಬೈಲ್ ಫ್ಲಿಪ್‌ಕಾರ್ಟ್ ಮತ್ತು ಗೂಗಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಪೂರ್ವ-ಆರ್ಡರ್‌ಗೆ ಲಭ್ಯವಿದೆ.
ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್ ಮೊಬೈಲ್ ಒಳಭಾಗದಲ್ಲಿ 8 ಇಂಚಿನ OLED ಸೂಪರ್ ಆಕ್ಟುವಾ ಫ್ಲೆಕ್ಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 3,600 nits ವರೆಗೆ ಗರಿಷ್ಠ ಬ್ರೈಟ್ನೆಸ್ ಮತ್ತು HDR ಬೆಂಬಲವನ್ನು ಪಡೆದಿದೆ. ಇನ್ನು ಇದರ ಕವರ್ ಡಿಸ್‌ಪ್ಲೇಯು 6.5 ಇಂಚಿನ OLED ಸೂಪರ್ ಆಕ್ಟುವಾ ಮಾದರಿಯನ್ನು ಹೊಂದಿದೆ. ಅಂದಹಾಗೆ ಈ ಫೋನ್ ಗೂಗಲ್ ಟೆನ್ಸರ್ G6 ಪ್ರೊಸೆಸರ್ ಜೊತೆಗೆ ಟೈಟಾನ್ M3 ಸೆಕ್ಯುರಿಟಿ ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 16GB RAM + 512GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.
ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 10.5MP ಮತ್ತು 10.8MP ಸೆನ್ಸಾರ್ ಸಾಮರ್ಥ್ಯ ಹೊಂದಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಡ್ಯುಯಲ್ ಕ್ಯಾಮೆರಾಗಳಿದ್ದು, ಅವುಗಳು ಕ್ರಮವಾಗಿ 10MP + 10MP ಸೆನ್ಸಾರ್ ಸಪೋರ್ಟ್ ಪಡೆದಿವೆ. ಅಲ್ಲದೇ ಈ ಫೋನ್ 4,806mAh ಬ್ಯಾಟರಿ ಸೌಲಭ್ಯ ಪಡೆದಿದ್ದು, 30W ವೈರ್ಡ್ ಮತ್ತು 25W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.