ಬಹುನಿರೀಕ್ಷಿತ Google Pixel 11 ಸರಣಿ ಬಿಡುಗಡೆ; ಬೆಲೆ ಹಾಗೂ ಫೀಚರ್ಸ್‌ ಮಾಹಿತಿ ಇಲ್ಲಿದೆ

ಬಹುನಿರೀಕ್ಷಿತ Google Pixel 11 ಸರಣಿ ಬಿಡುಗಡೆ; ಬೆಲೆ ಹಾಗೂ ಫೀಚರ್ಸ್‌ ಮಾಹಿತಿ ಇಲ್ಲಿದೆ

ಸರ್ಚ್ ಇಂಜಿನ್ ದೈತ್ಯ Google ಸಂಸ್ಥೆಯು ಹೊಸದಾಗಿ Pixel 11, Pixel 11 Pro ಮತ್ತು Pixel 11 Pro XL ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಇಂದು (ಆಗಷ್ಟ್‌ 12 ರಂದು) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು Tensor G6 ಚಿಪ್‌ಸೆಟ್ ಪ್ರೊಸೆಸರ್‌ ಪಡೆದುಕೊಂಡಿದೆ. ಇವುಗಳ ಪೈಕಿ ಪಿಕ್ಸೆಲ್ 11 ಪ್ರೊ ಮತ್ತು ಪಿಕ್ಸೆಲ್ 11 ಪ್ರೊ XL ಹಿಂಭಾಗದ ಪ್ಯಾನೆಲ್‌ನಲ್ಲಿ ಹೊಸ ಹೈಲೈಟ್ ಫೀಚರ್ಸ್‌ ಅನ್ನು ಹೊಂದಿವೆ. ಪಿಕ್ಸೆಲ್ 11 ಫೋನ್‌ ಪಿಸ್ತಾ, ಹೈಬಿಸ್ಕಸ್, ಫ್ರಾಸ್ಟ್ ಮತ್ತು ಅಬ್ಸಿಡಿಯನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗಾದರೇ ಗೂಗಲ್‌ ಪಿಕ್ಸೆಲ್ 11 ಸ್ಮಾರ್ಟ್‌ಫೋನ್‌ ಸರಣಿ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಭಾರತದಲ್ಲಿ Realme 16x 5G ಸ್ಮಾರ್ಟ್‌ಫೋನ್‌ ಬಿಡುಗಡೆ; 7,000mAh ಬ್ಯಾಟರಿ ಸೌಲಭ್ಯ

Google Pixel 11 ಸರಣಿಯ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಪಿಕ್ಸೆಲ್ 11 ಫೋನಿನ 12 GB RAM + 256GB ಸ್ಟೋರೇಜ್ ಬೆಲೆ 89,999 ರೂ.ಗಳು ಆಗಿದೆ. ಹಾಗೆಯೇ 12 RAM + 512GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಆಯ್ಕೆಯ ಬೆಲೆ 1,04,999 ರೂ.ಗಳು ಆಗಿದೆ. ಇನ್ನು ಈ ಫೋನ್‌ ಪಿಸ್ತಾ, ಹೈಬಿಸ್ಕಸ್, ಫ್ರಾಸ್ಟ್ ಮತ್ತು ಅಬ್ಸಿಡಿಯನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಗೂಗಲ್ ಪಿಕ್ಸೆಲ್ 11 ಪ್ರೊ ಫೋನಿನ 12 GB RAM + 256GB ಸ್ಟೋರೇಜ್ ಬೆಲೆ 1,19,999 ರೂ.ಗಳು ಆಗಿದೆ. ಹಾಗೆಯೇ 12 RAM + 512GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಆಯ್ಕೆಯ ಬೆಲೆ 1,34,999 ರೂ.ಗಳು ಆಗಿದೆ. ಈ ಫೋನ್‌ ಕ್ಯಾನ್ಯನ್, ಫಾಗ್, ಆಲಿವ್ ಮತ್ತು ಆಲ್-ಮ್ಯಾಟ್ ಅಬ್ಸಿಡಿಯನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

Google Pixel 11 specs

ಗೂಗಲ್ ಪಿಕ್ಸೆಲ್ 11 ಪ್ರೊ XL ಫೋನಿನ 12 GB RAM + 256GB ಸ್ಟೋರೇಜ್ ಬೆಲೆ 1,34,999 ರೂ.ಗಳು ಆಗಿದೆ. ಹಾಗೆಯೇ 12 RAM + 512GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಆಯ್ಕೆಯ ಬೆಲೆ 1,49,999 ರೂ.ಗಳು ಆಗಿದೆ. ಈ ಫೋನ್‌ ಸಹ ಈ ಫೋನ್‌ ಕ್ಯಾನ್ಯನ್, ಫಾಗ್, ಆಲಿವ್ ಮತ್ತು ಆಲ್-ಮ್ಯಾಟ್ ಅಬ್ಸಿಡಿಯನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

ಗೂಗಲ್ ಪಿಕ್ಸೆಲ್ 11 ಫೀಚರ್ಸ್‌

ಗೂಗಲ್ ಪಿಕ್ಸೆಲ್ 11 ಫೋನ್‌ 6.3 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಸ್ಕ್ರೀನ್‌ 120 Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿದೆ. ಹಾಗೆಯೇ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಜೊತೆಗೆ 3,000 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಅನ್ನು ನೀಡುತ್ತದೆ. ಅಂದಹಾಗೆ ಈ ಫೋನ್‌ ಗೂಗಲ್ ಟೆನ್ಸರ್ G6 ಪ್ರೊಸೆಸರ್ ಜೊತೆಗೆ ಟೈಟಾನ್ M3 ಸೆಕ್ಯುರಿಟಿ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 12GB RAM + 512GB ವರೆಗಿನ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಈ ಫೋನ್‌ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 13MP ಮತ್ತು 10.8MP ಸೆನ್ಸಾರ್‌ ಬಲ ಪಡೆದುಕೊಂಡಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 10.5MP ಕ್ಯಾಮೆರಾ ರಚನೆ ಒಳಗೊಂಡಿದೆ. ಇದು 4,985mAh ಬ್ಯಾಟರಿ ಸೌಲಭ್ಯ ಪಡೆದಿದ್ದು, 30W ವೈರ್ಡ್ ಮತ್ತು 25W Qi 2.2 ಪಿಕ್ಸೆಲ್‌ಸ್ನ್ಯಾಪ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.

ಪಿಕ್ಸೆಲ್ 11 ಪ್ರೊ ಫೋನಿನ ಫೀಚರ್ಸ್‌

ಪಿಕ್ಸೆಲ್ 11 ಪ್ರೊ ಫೋನ್‌ 6.3 ಇಂಚಿನ 1.5K LTPO AMOLED ಡಿಸ್‌ಪ್ಲೇ ಹೊಂದಿದೆ. ಅಲ್ಲದೇ 3,600nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಜೊತೆಗೆ 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಹಾಗೆಯೇ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಈ ಫೋನ್‌ ಗೂಗಲ್ ಟೆನ್ಸರ್ G6 ಪ್ರೊಸೆಸರ್ ಜೊತೆಗೆ ಟೈಟಾನ್ M3 ಸೆಕ್ಯುರಿಟಿ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 12GB RAM + 512GB ವರೆಗಿನ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಈ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50MP ಸೆನ್ಸಾರ್‌ ಪಡೆದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 48MP ಮತ್ತು 48MP ಸೆನ್ಸಾರ್‌ ಬಲ ಪಡೆದುಕೊಂಡಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 42MP ಕ್ಯಾಮೆರಾ ರಚನೆ ಒಳಗೊಂಡಿದೆ. ಇದು 4,840mAh ಬ್ಯಾಟರಿ ಸೌಲಭ್ಯ ಒಳಗೊಂಡಿದ್ದು, 30W ವೈರ್ಡ್ ಮತ್ತು 25W Qi 2.2 PixelSnap ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.

ಪಿಕ್ಸೆಲ್ 11 ಪ್ರೊ XL ಫೋನಿನ ಫೀಚರ್ಸ್‌

ಪಿಕ್ಸೆಲ್ 11 ಪ್ರೊ XL ಫೋನ್‌ 6.8 ಇಂಚಿನ QHD+ AMOLED ಡಿಸ್‌ಪ್ಲೇ ಹೊಂದಿದೆ. ಅಲ್ಲದೇ 3,600nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಜೊತೆಗೆ 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಹಾಗೆಯೇ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಈ ಫೋನ್‌ ಗೂಗಲ್ ಟೆನ್ಸರ್ G6 ಪ್ರೊಸೆಸರ್ ಜೊತೆಗೆ ಟೈಟಾನ್ M3 ಸೆಕ್ಯುರಿಟಿ ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 12GB RAM + 512GB ವರೆಗಿನ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಇನ್ನು ಈ ಹೈ ಎಂಡ್‌ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 50MP ಸೆನ್ಸಾರ್‌ ಪಡೆದಿದೆ. ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 48MP ಮತ್ತು 48MP ಸೆನ್ಸಾರ್‌ ಬಲ ಪಡೆದುಕೊಂಡಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 42MP ಕ್ಯಾಮೆರಾ ರಚನೆ ಒಳಗೊಂಡಿದೆ. ಈ ಫೋನ್‌ 5,115mAh ಬ್ಯಾಟರಿ ಸೌಲಭ್ಯ ಒಳಗೊಂಡಿದ್ದು, 30W ವೈರ್ಡ್ ಮತ್ತು 25W Qi 2.2 PixelSnap ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile