Realme Narzo 70 Turbo 5G Special Offer
ಪ್ರಸ್ತುತ Realme Narzo 70 Turbo 5G ಸ್ಮಾರ್ಟ್‌ಫೋನ್ ಮೇಲೆ ಕಂಪನಿ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ನೀವು ಅತಿ ಕಡಿಮೆ ಬೆಲೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಈ Realme Narzo 70 Turbo 5G ಸ್ಮಾರ್ಟ್‌ಫೋನ್ ಅತ್ಯುತ್ತಮ ಆಯ್ಕೆಯಾಗಲಿದೆ. ಯಾಕೆಂದರೆ ಈ Realme ಸ್ಮಾರ್ಟ್‌ಫೋನ್‌ನಲ್ಲಿ ಪ್ರಸ್ತುತ 3000 ರೂಗಳ ಕೂಪನ್ ರಿಯಾಯಿತಿಯೊಂದಿಗೆ ಹೆಚ್ಚುವರಿಯಾಗಿ ಬ್ಯಾಂಕ್ ರಿಯಾಯಿತಿಗಳನ್ನು ಸಹ ಕಂಪನಿ ಲಭ್ಯವಿದೆ.
ಇದೀಗ Realme Narzo 70 Turbo 5G ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಇಂಡಿಯಾದಲ್ಲಿ 13,998 ರೂಗೆ ಖರೀದಿಸಬಹುದು. ಈ Realme ಫೋನ್ ಮೇಲೆ 3000 ರೂಗಳ ತ್ವರಿತ ರಿಯಾಯಿತಿ ಕೂಪನ್ ನೀಡಲಾಗುತ್ತಿದೆ. ಇದರೊಂದಿಗೆ ಅಮೆಜಾನ್‌ನಲ್ಲಿ ಅನೇಕ ಬ್ಯಾಂಕ್ ರಿಯಾಯಿತಿಗಳನ್ನು ಸಹ ನೀಡಲಾಗುತ್ತಿದೆ. ನೀವು ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್, HSBC ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಶೇಕಡಾ 7.5 ರಷ್ಟು ತ್ವರಿತ ರಿಯಾಯಿತಿಯನ್ನು ನೀಡಬಹುದು. ಈ ರಿಯಾಯಿತಿ 1000 ರೂಗಳವರೆಗೆ ಮಾತ್ರ ಲಭ್ಯವಿರುತ್ತದೆ.
ಅಲ್ಲದೆ 3000 ರೂಗಳ ಕೂಪನ್ ರಿಯಾಯಿತಿ ಮತ್ತು ಬ್ಯಾಂಕ್ ರಿಯಾಯಿತಿಯೊಂದಿಗೆ ಖರೀದಿದಾರರು ಈ Realme ಫೋನ್ ಅನ್ನು 12,998 ರೂಗಳಿಗೆ ಖರೀದಿಸಬಹುದು. ನೀವು ಐಸಿಐಸಿಐ ಬ್ಯಾಂಕ್ ಅಮೆಜಾನ್ ಪೇ ಕಾರ್ಡ್ ಹೊಂದಿದ್ದರೆ ನಿಮಗೆ 5% ಕ್ಯಾಶ್‌ಬ್ಯಾಕ್ ಸಿಗುತ್ತದೆ. ಅದೇ ಸಮಯದಲ್ಲಿ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚುವರಿ ರಿಯಾಯಿತಿಯ ಪ್ರಯೋಜನವನ್ನು ನೀವು ಪಡೆಯಬಹುದು. ಇದು ನಿಮ್ಮ ಫೋನ್‌ನ ಸ್ಥಿತಿಯನ್ನು ಅವಲಂಬಿಸಿರುತ್ತದೆ.
Also Read: ಅಬ್ಬಾಬ್ಬ! 12GB RAM ಹೊಂದಿರುವ Lava Blaze 3 5G ಮೇಲೆ ಬರೋಬ್ಬರಿ 1500 ರೂಗಳ ಡಿಸ್ಕೌಂಟ್‌ಗಳು!
Realme Narzo 70 Turbo 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರ ಮತ್ತು 92.65% ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ರಿಯಲ್ಮೆ ಫೋನ್‌ನಲ್ಲಿ ಮೀಡಿಯಾಟೆಕ್‌ನ ಡೈಮೆನ್ಸಿಟಿ 7300 5G ಚಿಪ್‌ಸೆಟ್ ಲಭ್ಯವಿದೆ. ಫೋನ್‌ನ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಜೊತೆಗೆ 2MP ಡೆಪ್ತ್ ಸೆನ್ಸರ್ ಹೊಂದಿದ್ದು ಇದರೊಂದಿಗೆ ಈ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಸಹಾಯಕ ಲೆನ್ಸ್ ಸಹ ಲಭ್ಯವಿದೆ.
ಈ Realme ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Realme Narzo 70 Turbo 5G ಸ್ಮಾರ್ಟ್‌ಫೋನ್ ಬ್ಲೂಟೂತ್ 5.4, ಡ್ಯುಯಲ್-ಬ್ಯಾಂಡ್ ವೈ-ಫೈ, GPS ಮತ್ತು USB ಟೈಪ್ C 2.0 ಪೋರ್ಟ್ ಅನ್ನು ಹೊಂದಿದೆ. ಈ Realme ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.