Samsung Galaxy M35 5G Sale 2025
Samsung Galaxy M35 5G: ನೀವು ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ಪ್ರಿಯರಾಗಿದ್ದರೆ ನಿಮಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮವಾದ ಈ Samsung Galaxy M35 5G ಸ್ಮಾರ್ಟ್ಫೋನ್ ಅನ್ನು ಸುಮಾರು 15,000 ರೂಪಾಯಿಗಳೊಂದಿಗೆ 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದೊಂದಿಗೆ ಖರೀದಿಸುವ ಅವಕಾಶವನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ತನ್ನ ನೈಜ ಬೆಲೆಯನ್ನ ಕಳೆದುಕೊಂಡು ಲಿಮಿಟೆಡ್ ಸಮಯದವರೆಗೆ ಸಾಮಾನ್ಯ ಜನರ ಕೈಗೆಟಕುವ ಬೆಲೆಗೆ ಸಿಕ್ಕಾಪಟ್ಟೆ ಇಂಟ್ಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಮಾರಾಟವಾಗುತ್ತಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಪಡೆಯಿರಿ.
Samsung Galaxy M35 5G ಸ್ಮಾರ್ಟ್ಫೋನ್ ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಅಂದ್ರೆ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಕೇವಲ ₹14,339 ರೂಗಳಿಗೆ ಪಟ್ಟಿಯಾಗಿದ್ದರೆ ಇದರ ಕ್ರಮವಾಗಿ ಇದರ 8GB RAM ಮತ್ತು 256GB ಸ್ಟೋರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿ ₹22,999 ರೂಗಳಿಗೆ ಪಟ್ಟಿಯಾಗಿದೆ.
ಆದರೆ 6GB ರೂಪಾಂತರವನ್ನು ಖರೀದಿಸಲು ಸಲಹೆ ನೀಡುತ್ತೇನೆ. ಅಲ್ಲದೆ ಆಸಕ್ತ ಗ್ರಾಹಕರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು 1000 ರೂಗಳವರೆಗಿನ ಡಿಸ್ಕೌಂಟ್ ಸಹ ಪಡೆಯುವುದರೊಂದಿಗೆ Samsung Galaxy M35 5G ಸ್ಮಾರ್ಟ್ಫೋನ್ ಕೇವಲ ₹13,339 ರೂಗಳಿಗೆ ಖರೀದಿಸಬಹುದು.
Also Read: CMF by Nothing Phone 1 ಬೆಲೆ ಕಡಿತ! 6GB RAM ಮತ್ತು 50MP ಕ್ಯಾಮೆರಾದ ಸೂಪರ್ ಫೋನ್ ಹೊಸ ಬೆಲೆ ಎಷ್ಟು?
ಸ್ಯಾಮ್‌ಸಂಗ್ 6.6 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೆಮ್ಮೆಪಡುವ Galaxy M35 5G ಅದರ ಪೂರ್ಣ-HD+ ರೆಸಲ್ಯೂಶನ್ ಮತ್ತು ಪ್ರಭಾವಶಾಲಿ 120Hz ರಿಫ್ರೆಶ್ ದರದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲ್ಪಟ್ಟಿದೆ. Samsung Galaxy M35 5G ಬಹುಮುಖ ಕ್ಯಾಮೆರಾ ಸೆಟಪ್ ಅನ್ನು ಮೆಚ್ಚುತ್ತಾರೆ ತೀಕ್ಷ್ಣವಾದ ಮತ್ತು ವಿವರವಾದ ಶಾಟ್‌ಗಳಿಗಾಗಿ 50MP ಪ್ರೈಮರಿ ಸೆನ್ಸರ್ ಹೈಲೈಟ್ ಮಾಡಲಾಗಿದೆ. 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾದಿಂದ ಪೂರಕವಾಗಿದೆ. ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮರಾ ಸ್ಪಷ್ಟ ಮತ್ತು ರೋಮಾಂಚಕ ಪೋಟ್ರೇಟ್ ಭರವಸೆ ನೀಡುತ್ತದೆ.
Samsung Galaxy M35 5G ಸ್ಮಾರ್ಟ್‌ಫೋನ್ Exynos 1380 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಸುಗಮ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಖಚಿತಪಡಿಸುತ್ತದೆ. 128GB ಸ್ಟೋರೇಜ್‌ನೊಂದಿಗೆ 6GB RAM ಮತ್ತು 256GB ಸ್ಟೋರೇಜ್‌ನೊಂದಿಗೆ 8GB RAM ವರೆಗಿನ ಹೆಚ್ಚಿನ ರೂಪಾಂತರಗಳು ಸೇರಿದಂತೆ ಬಹು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ವೈ-ಫೈ 6, ಬ್ಲೂಟೂತ್ 5.3, ಮತ್ತು ಎನ್‌ಎಫ್‌ಸಿ-ಆಧಾರಿತದೊಂದಿಗೆ 6000mAh ಬ್ಯಾಟರಿ ದೀರ್ಘಾವಧಿಯ ಬಳಕೆಯನ್ನು ನೀಡುತ್ತದೆ.