Samsung Galaxy M31 ಫೋನ್ 6000mAh ಬ್ಯಾಟರಿ ಮತ್ತು 64MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ

Updated on 12-Feb-2020
HIGHLIGHTS

Samsung Galaxy M31 ಇನ್ಫಿನಿಟಿ ಯು ಕಟೌಟ್‌ನೊಂದಿಗೆ FHD+ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ

ಭಾರತದಲ್ಲಿ ಈ ತಿಂಗಳು ಸ್ಯಾಮ್‌ಸಂಗ್‌ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬರಲಿದೆ. ಈ ಫೋನ್‌ನ ಹೆಸರು Samsung Galaxy M31 ಎನ್ನಲಾಗುತ್ತಿದೆ. ಈ ಸ್ಯಾಮ್‌ಸಂಗ್ ಬಜೆಟ್ ಸ್ಮಾರ್ಟ್‌ಫೋನ್ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ನ ಅಧಿಕೃತ ಉಡಾವಣೆಯ ಮೊದಲು ಸ್ಯಾಮ್‌ಸಂಗ್ ಮೈಕ್ರೋಸೈಟ್ ಲೈವ್ ಮಾಡಿದೆ. ಇದು ಫೋನ್‌ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. Samsung Galaxy M31 ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಜೊತೆಗೆ ಸ್ಯಾಮ್‌ಸಂಗ್ ತನ್ನ ಟ್ವಿಟ್ಟರ್ ಮೂಲಕವೂ ತಿಳಿಸಿದೆ.

https://twitter.com/SamsungIndia/status/1227238615366791168?ref_src=twsrc%5Etfw

ಈ ಹೊಸ Samsung Galaxy M31 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳಿವೆ. ಸ್ಯಾಮ್‌ಸಂಗ್ ತನ್ನ ಹಿಂಭಾಗದಲ್ಲಿರುವ ಮುಖ್ಯ ಕ್ಯಾಮೆರಾ 64MP ಮೆಗಾಪಿಕ್ಸೆಲ್‌ಗಳಾಗಲಿದೆ ಎಂದು ಈಗಾಗಲೇ ಖಚಿತಪಡಿಸಿದೆ. ಸ್ಮಾರ್ಟ್‌ಫೋನ್‌ ಬ್ಯಾಕ್ ಪ್ಯಾನಲ್ ಮಾತ್ರೆ ಆಕಾರದ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ. ಇದು ಇನ್ಫಿನಿಟಿ ಯು ಕಟೌಟ್‌ನೊಂದಿಗೆ FHD+ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಹೊಂದಿದ್ದು ಇದು ಅದರ ದೊಡ್ಡ ಹೈಲೈಟ್ ಆಗಿರುತ್ತದೆ.

ಈ Samsung Galaxy M31 ಸ್ಮಾರ್ಟ್‌ಫೋನ್ ಕಂಪನಿಯ ಜನಪ್ರಿಯ Galaxy M30 ಮತ್ತು Galaxy M30s ಫೋನ್ಗಳ ಉತ್ತರಾಧಿಕಾರಿ ಎಂದು ಕರೆಯಬವುದು. ಈ ಸ್ಮಾರ್ಟ್‌ಫೋನ್ 6000 ಎಮ್‌ಎಹೆಚ್ ಬ್ಯಾಟರಿಯನ್ನು 15w ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಇದರೊಂದಿಗೆ ಈ  ಸ್ಮಾರ್ಟ್‌ಫೋನ್ Exynos 9611 ಮತ್ತು 10nm ನ್ಯಾನೋ ಮೀಟರ್ ಚಿಪ್ಸೆಟ್ ಜೊತೆಗೆ ಬರಲಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 6GB ವರೆಗೆ ಮತ್ತು 128GB ವರೆಗೆ ಇಂಟರ್ನಲ್ ಸ್ಟೋರೇಜ್ ಕ್ರಮವಾಗಿ ಬರಬಹುದು. 

ಅಲ್ಲದೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ Samsung Galaxy M30s ಫೋನಲ್ಲಿ 6.4 ಇಂಚಿನ FHD+ ಸೂಪರ್ ಅಮೋಲೆಡ್ ಇನ್ಫಿನಿಟಿ ಯು ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಫೋನ್‌ನ ಹಿಂಭಾಗದಲ್ಲಿರುವ ಪ್ರೈಮರಿ ಕ್ಯಾಮೆರಾ 48MP ಮೆಗಾಪಿಕ್ಸೆಲ್‌ಗಳು. ಇದಲ್ಲದೆ ಮತ್ತೊಂದು ಫೋನ್‌ನ ಹಿಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಫೋನ್‌ನ ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :