Lava Agni 3 5G Price Cut
Lava Agni 3 5G Smartphone Price Cut: ಭಾರತ ಸ್ವದೇಶಿ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ (LAVA) ಡುಯಲ್ ಡಿಸ್ಪ್ಲೇಯೊಂದಿಗೆ ಬರುವ Lava Agni 3 5G ಸ್ಮಾರ್ಟ್ಫೋನ್ ಮೇಲೆ ಅದ್ದೂರಿಯಾಗಿ 4000 ರೂಗಳ ಡಿಸ್ಕೌಂಟ್ ನೀಡುತ್ತಿದೆ. ಪ್ರಸ್ತುತ ಅಮೆಜಾನ್ ಸದ್ದಿಲ್ಲದೇ ಈ ಆಫರ್ ಅನ್ನು ಲಿಮಿಟೆಡ್ ಸಮಯದವರೆಗೆ ನೀಡುತ್ತಿದ್ದು ಹೊಸ Lava Agni 3 5G ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಅಮೆಜಾನ್ ಮೂಲಕ ಈ Lava Agni 3 5G ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದರ ಆರಂಭಿಕ 8GB +128GB ಚಾರ್ಜರ್ ಇಲ್ಲದೆ ₹20,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದೆ ಫೋನ್ ನಿಮಗೆ ಚಾರ್ಜರ್ ಜೊತೆಗೆ ₹22,999 ರೂಗಳಿಗೆ ಖರೀದಿಸಬಹುದು. ಇದರ ಕ್ರಮವಾಗಿ ಇದರ 8GB+256GB ಚಾರ್ಜರ್ ಜೊತೆಗೆ ₹24,999 ರೂಗಳಿಗೆ ಖರೀದಿಸಬಹುದು. HDFC Bank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ₹4000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ ₹16,999 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Lava Agni 3 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹19,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: ಕೇವಲ 6,999 ರೂಗಳಿಗೆ 12GB RAM ಮತ್ತು 50MP ಕ್ಯಾಮೆರಾವುಳ್ಳ ಈ Motorola ಫೋನ್ಗಳನೊಮ್ಮೆ ಪರಿಶೀಲಿಸಿ!
Lava Agni 3 ಸ್ಮಾರ್ಟ್ಫೋನ್ ಡುಯಲ್ ಡಿಸ್ಪ್ಲೇಯೊಂದಿಗೆ ಬರಲಿದ್ದು ಸ್ಮಾರ್ಟ್ಫೋನ್ ಹಿಂಭಾಗದ ಪ್ಯಾನಲ್ ಬದಿಯಲ್ಲಿ 1.74 ಇಂಚಿನ ಸಣ್ಣ ಡಿಸ್ಪ್ಲೇಯನ್ನು ಸಹ ನೀಡಿರುವುದನ್ನು ಟೀಸರ್ನಲ್ಲಿ ತೋರಿಸಲಾಗಿದೆ. Lava Agni 3 ಎರಡು AMOLED ಡಿಸ್ಪ್ಲೇಗಳು ಮುಖ್ಯ 6.78 ಇಂಚಿನ ಮುಂಭಾಗದ ಕರ್ವ್ಡ್ ಪ್ಯಾನಲ್ ಡಿಸ್ಪ್ಲೇ ಜೊತೆಗೆ 120Hz ಮತ್ತು ಇತರ ಹಿಂಭಾಗದಲ್ಲಿ 1.74 ಇಂಚಿನ ಸೆಕೆಂಡರಿ AMOLED ಡಿಸ್ಪ್ಲೇ ಕ್ಯಾಮೆರಾ ಮುಂದಿನ ಹಿಂಭಾಗದಲ್ಲಿ ಇರುತ್ತದೆ.
Lava Agni 3 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸರ್ (IOS) ಜೊತೆಗೆ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವು ಸೆಲ್ಫಿ ಪ್ರಿಯರಿಗೆ ಮತ್ತು ವೀಡಿಯೊ ಕರೆಗಳಿಗೆ ಸೂಕ್ತವಾಗಿದೆ. ಅಲ್ಲದೆ ಅತ್ಯುತ್ತಮ ಆಡಿಯೋ ಅನುಭವಕ್ಕಾಗಿ Lava Agni 3 ಸ್ಮಾರ್ಟ್ಫೋನ್ ಈಗ Dolby Atmos ಡುಯಲ್ ಸ್ಟೀರಿಯೋ ಸ್ಪೀಕರ್ ಹೊಂದಿದೆ. ಫೋನ್ಗೆ ಪವರ್ ನೀಡಲು 5000mAh ಬ್ಯಾಟರಿಯನ್ನು ಕಂಪನಿ ನೀಡುತ್ತಿದೆ.