Samsung Galaxy M13 vs Moto G13: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್?

Updated on 18-Apr-2023
HIGHLIGHTS

Samsung Galaxy M13 vs Moto G13 ಫೋನ್ಗಳ ಫೀಚರ್‌ಗಳೇನು? ಬೆಲೆ ಎಷ್ಟು? ಎಲ್ಲಿ ಲಭ್ಯ ತಿಳಿಯಿರಿ

ಮಾರುಕಟ್ಟೆಯಲ್ಲಿ ತಮ್ಮ ವಿವಿಧ ಬೆಲೆಯ ಮೂಲಕ ಸ್ಮಾರ್ಟ್‌ಫೋನ್‌ಗಳು ತನ್ನದೆ ರೀತಿಯ ಬೇಡಿಕೆಗಳನ್ನು ಹೊಂದಿವೆ.

Samsung Galaxy M13 ಮತ್ತು Moto G13 ಕೇವಲ ₹10,000 ರೂಗಳೊಳಗೆ ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ.

Samsung Galaxy M13 vs Moto G13: ಪ್ರಸುತ್ತ ಸ್ಮಾರ್ಟ್‌ಫೋನ್‌ಗಳು ಟೆಕ್‌ ಲೋಕದ ಅಚ್ಚರಿ ಎನ್ನುವ ಮಟ್ಟಿಗೆ ಜನಪ್ರಿಯತೆ ಪಡೆದಿವೆ. ವಿಶಿಷ್ಟವಾದ ಡಿಸೈನ್‌ ಹಾಗೂ ಲುಕ್‌ನಿಂದ ಗಮನ ಸೆಳೆದಿವೆ. ಅಲ್ಲದೆ ಮಾರುಕಟ್ಟೆಯಲ್ಲಿ ತಮ್ಮ ವಿವಿಧ ಬೆಲೆಯ ಮೂಲಕ ಸ್ಮಾರ್ಟ್‌ಫೋನ್‌ಗಳು ತನ್ನದೆ ರೀತಿಯ ಬೇಡಿಕೆಗಳನ್ನು ಹೊಂದಿವೆ. M ಸರಣಿಯ Samsung Galaxy M13 ಮತ್ತು G ಸರಣಿಯ Moto G13 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುವುದಾದರೆ ಇವುಗಳು ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ. ಇಂದು ನಾವು ಇವುಗಳನ್ನು ಹೋಲಿಸುತ್ತಿದ್ದೇವೆ. ಈ ಎರಡು ಫೋನ್ಗಳ ಫೀಚರ್‌ಗಳೇನು ಇವುಗಳಲ್ಲಿ ಯಾವುದು ಬೆಸ್ಟ್ ನೋಡೋಣ.

Samsung Galaxy M13 vs Moto G13 ಡಿಸ್ಪ್ಲೇ

Samsung Galaxy M13 ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್‌ HD+ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 401 PPI ಡೆನ್ಸಿಟಿ ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ 5 ಅನ್ನು ಒಳಗೊಂಡಿದೆ. Moto G13 ಸ್ಮಾರ್ಟ್‌ಫೋನ್ 6.5 ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 270 PPI ಡೆನ್ಸಿಟಿ ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಇದು ಪಂಡಾ  ಗ್ಲಾಸ್ ಅನ್ನು ಒಳಗೊಂಡಿದೆ.

Samsung Galaxy M13 vs Moto G13 ಕ್ಯಾಮೆರಾ:

Samsung Galaxy M13 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದ್ದು 5MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಡೆಪ್ತ್ ಲೆನ್ಸ್ ಬೆಂಬಲವನ್ನು ನೀಡಲಾಗಿದ್ದು 8MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ಪಡೆದುಕೊಂಡಿದೆ. Moto G13 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗೆಯೇ 8MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ಪಡೆದುಕೊಂಡಿದೆ.

Samsung Galaxy M13 vs Moto G13 ಪ್ರೊಸೆಸರ್

Samsung Galaxy M13 ಸ್ಮಾರ್ಟ್‌ಫೋನ್‌ Exynos 850 ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12.0-ಆಧಾರಿತ One UI 4 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 128GB ವರೆಗಿನ ಬಿಲ್ಟ್-ಇನ್ ಮೆಮೊರಿಯನ್ನು ಒದಗಿಸಲಾಗಿದ್ದು ಇದನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು. Moto G13 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 128GB ಇಂಟರ್ನಲ್  ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸ್ಟೋರೇಜ್ ಕೆಪ್ಯಾಸಿಟಿಯನ್ನು ಬೆಂಬಲಿಸುವ ಆಯ್ಕೆಯನ್ನು ಸಹ ನೀಡಲಾಗಿದೆ.

Samsung Galaxy M13 vs Moto G13 ಬ್ಯಾಟರಿ

Moto G13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 20W ಫಾಸ್ಟ್ ಚಾರ್ಜಿಂಗ್‌‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. Samsung Galaxy M13 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, 4G LTE ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.

Samsung Galaxy M13 vs Moto G13 ಬೆಲೆ

Samsung Galaxy M13 ಆಕ್ವಾ ಗ್ರೀನ್, ಲೈಟ್ ಗ್ರೀನ್, ಮಿಡ್ ನೈಟ್  ಬ್ಲೂ ಮತ್ತು ಡಾರ್ಕ್ ಬ್ಲೂ ಕಲರ್‌ಗಳ ಆಯ್ಕೆಯ ಲ್ಲಿ ರೂ 9,699 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Moto G13 ಮ್ಯಾಟ್ ಚಾರ್ಕೋಲ್, ಬ್ಲೂ ಲ್ಯಾವೆಂಡರ್ ಮತ್ತು ರೋಸ್ ಗೋಲ್ಡ್ ಕಲರ್‌ಗಳ ಆಯ್ಕೆಯಲ್ಲಿ ರೂ 9,499 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :