CMF Phone 2 Pro to launch on April 28 confirmed by Nothing
CMF Phone 2 Pro India launch: ಭಾರತದಲ್ಲಿ ಜನಪ್ರಿಯ ಮತ್ತು ಅತಿ ಯೂನಿಕ್ ಡಿಸೈನಿಂಗ್ ಲುಕ್ ಜೊತೆಗೆ ಬರುವ ಈ ಸ್ಮಾರ್ಟ್ಫೋನ್ ಬ್ರಾಂಡ್ ನಥಿಂಗ್ (Nothing) ಈಗ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದನ್ನು ಕಂಪನಿ ಸ್ವತಃ ಇಂದು CMF Phone 2 Pro ಸ್ಮಾರ್ಟ್ಫೋನ್ ಹ್ಯಾಂಡ್‌ಸೆಟ್‌ನ ಮೊದಲ ಅಧಿಕೃತ ಟ್ವಿಟ್ಟರ್ ಪೋಸ್ಟ್ ಮಾಡಿದೆ. ಈ ಮುಂಬರಲಿರುವ CMF Phone 2 Pro ಸ್ಮಾರ್ಟ್ಫೋನ್ ಏಪ್ರಿಲ್ ಕೊನೆ ವಾರದಲ್ಲಿ ಬಿಡುಗಡೆಯಾಗಲಿರುವುದಾಗಿ ಪೋಸ್ಟ್ ಮೂಲಕ ತಿಳಿಸಿದೆ.
ಈ ಮುಂಬರಲಿರುವ ಈ CMF Phone 2 Pro ಸ್ಮಾರ್ಟ್ಫೋನ್ ಬಗ್ಗೆ ಕಂಪನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೂ ಇತ್ತೀಚಿನ ಟೀಸರ್ ಪ್ರಕಾರ ಹ್ಯಾಂಡ್‌ಸೆಟ್ ಹೊಸ ಲುಕ್ ಮ್ಯಾಟ್ ಫಿನಿಶ್‌ನೊಂದಿಗೆ ಬರುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ್ ಇದೆ 28ನೇ ಏಪ್ರಿಲ್ 2025 ರಂದು ಸಂಜೆ 6:30pm ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಇದರ ಲೈಫ್ ಸ್ಟ್ರೀಮ್ ಅನ್ನು ನಥಿಂಗ್ ಅಧಿಕೃತ ಇದರೊಂದಿಗೆ ಕಂಪನಿ 3 ಹೊಸ ಮಾದರಿಯ ಇಯರ್ಬಡ್ಸ್ ಅನ್ನು ಸಹ ಪರಿಚಯಿಸಲಿದೆ. ಕಂಪನಿ ಈ ಎಲ್ಲ ಪ್ರಾಡಕ್ಟ್ ಅನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ.
CMF Phone 2 Pro ದೊಡ್ಡ AMOLED ಡಿಸ್ಪ್ಲೇಯೊಂದಿಗೆ ಬರಲಿದ್ದು ಉತ್ತಮ ಸ್ಕ್ರೀಮ್ ರೆಸುಲ್ಯೂಷನ್ ಅನ್ನು ಸಪೋರ್ಟ್ ಮಾಡಲಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಲಿದೆ. ಅಲ್ಲದೆ ಈ ಮುಂಬರಲಿರುವ CMF Phone 2 Pro ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಪ್ರೊಸೆಸರ್ನೊಂದಿಗೆ ಚಾಲಿತವಾಗಲಿದೆ. ಆಂಡ್ರಾಯ್ಡ್ 15 ಅನ್ನು ಹೊಂದಲಿದೆ. ಇದು ಕಸ್ಟಮೈಸ್ ಮಾಡಬಹುದಾದ ಬ್ಯಾಕ್ ಕವರ್ ಮತ್ತು ಲ್ಯಾನ್ಯಾರ್ಡ್ ಮತ್ತು ಇತರ ಪರಿಕರಗಳನ್ನು ಜೋಡಿಸಲು ಸ್ಕ್ರೂ ಅನ್ನು ಉಳಿಸಿಕೊಳ್ಳುತ್ತದೆ.
ಸ್ಮಾರ್ಟ್ಫೋನ್ ದೊಡ್ಡ ಡಿಸೆಂಟ್ 5000mAh ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜರ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಅಡಿಯಲ್ಲಿ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ. ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದಾದದರೆ ಫೋನ್ ಸುಮಾರು 19,999 ರೂಗಳಿಗೆ ನಿರೀಕ್ಷಿಸಲಾಗಿದೆ. ಇದನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಸ್ಮಾರ್ಟ್ಫೋನ್ ಮಾರಾಟವನ್ನು ನಿರೀಕ್ಷಿಸಲಾಗಿದೆ.