realme Narzo 70 Turbo 5G phone get price discount under 20K on Amazon
Realme Narzo 70 Turbo 5G Price Cut: ಅಮೆಜಾನ್‌ನಲ್ಲಿ ಪ್ರಸ್ತುತ Realme Narzo 70 Turbo 5G ಸ್ಮಾರ್ಟ್‌ಫೋನ್ ಮೇಲೆ ಕಂಪನಿ ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಯಾಕೆಂದರೆ ಈ ರಿಯಲ್‌ಮಿ Gaming Smartphone ಪ್ರಸ್ತುತ 1500 ರೂಗಳ ಉಚಿತ ಕೂಪನ್ ರಿಯಾಯಿತಿಯೊಂದಿಗೆ ಹೆಚ್ಚುವರಿಯಾಗಿ ಬ್ಯಾಂಕ್ ರಿಯಾಯಿತಿಗಳನ್ನು ಸಹ ಕಂಪನಿ ಲಭ್ಯವಿದೆ. ನೀವು ಅತಿ ಕಡಿಮೆ ಬೆಲೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ರಿಯಲ್‌ಮಿ ಈ ಲೇಟೆಸ್ಟ್ 5G ಸ್ಮಾರ್ಟ್‌ಫೋನ್ ಖರೀದಿಸಲು ಅತ್ಯುತ್ತಮ ಆಯ್ಕೆಯಾಗಲಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
ಇದೀಗ Realme Narzo 70 Turbo 5G ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಇಂಡಿಯಾದಲ್ಲಿ ₹12,499 ರೂಪಾಯಿಗೆ ಖರೀದಿಸಬಹುದು. ಈ Realme ಫೋನ್ ಮೇಲೆ 1500 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ನೀಡಲಾಗುತ್ತಿದೆ. ಅಲ್ಲದೆ ಇದರೊಂದಿಗೆ ಅಮೆಜಾನ್‌ನಲ್ಲಿ ಅನೇಕ ಬ್ಯಾಂಕ್ ರಿಯಾಯಿತಿಗಳನ್ನು ಸಹ ನೀಡಲಾಗುತ್ತಿದೆ.
ನೀವು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಶೇಕಡಾ 7.5 ರಷ್ಟು ತ್ವರಿತವಾಗಿ ಸುಮಾರು 2000 ರೂಗಳವರೆಗಿನಗಿನ ರಿಯಾಯಿತಿಯನ್ನು ಪಡೆಯಬಹುದು. ಒಟ್ಟಾರೆಯಾಗಿ ನಿಮಗೊಂದು ಗೇಮಿಂಗ್ ಸ್ಮಾರ್ಟ್‌ಫೋನ್ ಬೇಕಿದ್ದರೆ ಅಮೆಜಾನ್‌ನಲ್ಲಿ Realme Narzo 70 Turbo 5G ಪ್ರಸ್ತುತ ಬರೋಬ್ಬರಿ ₹3500 ರೂಗಳ ರಿಯಾಯಿತಿಯೊಂದಿಗೆ ₹12,499 ರೂಪಾಯಿಗಳಿಗೆ ಖರೀದಿಸಬಹುದು.
Realme Narzo 70 Turbo 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರ ಮತ್ತು 92.65% ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ರಿಯಲ್‌ಮಿ ಫೋನ್‌ನಲ್ಲಿ ಮೀಡಿಯಾಟೆಕ್‌ನ ಡೈಮೆನ್ಸಿಟಿ 7300 5G ಚಿಪ್‌ಸೆಟ್ ಲಭ್ಯವಿದೆ. ಫೋನ್‌ನ ಹಿಂಭಾಗದಲ್ಲಿ 50MP ಪ್ರೈಮರಿ ಕ್ಯಾಮೆರಾ ಜೊತೆಗೆ 2MP ಡೆಪ್ತ್ ಸೆನ್ಸರ್ ಹೊಂದಿದ್ದು ಇದರೊಂದಿಗೆ ಈ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಸಹಾಯಕ ಲೆನ್ಸ್ ಸಹ ಲಭ್ಯವಿದೆ.
ಈ Realme ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Realme Narzo 70 Turbo 5G ಸ್ಮಾರ್ಟ್‌ಫೋನ್ ಬ್ಲೂಟೂತ್ 5.4, ಡ್ಯುಯಲ್-ಬ್ಯಾಂಡ್ ವೈ-ಫೈ, GPS ಮತ್ತು USB ಟೈಪ್ C 2.0 ಪೋರ್ಟ್ ಅನ್ನು ಹೊಂದಿದೆ. ಈ Realme ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.