boltt Ace 5G and boltt Evo with 6000mah battery launched in India Price Specs and features
Boltt ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ACE 5G ಮತ್ತು EVO 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಹೈಲೈಟ್ ಎಂದರೆ 6,000mAh ಬ್ಯಾಟರಿ ಪವರ್ ಹಾಗೂ 15,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಬೋಲ್ಟ್ ACE 5G ಮತ್ತು EVO 4G ಫೋನ್‌ಗಳು ಬಜೆಟ್ ಬೆಲೆಯಲ್ಲಿ ಆಕರ್ಷಕ ಫೀಚರ್ಸ್ ಮೂಲಕ ಮಾರುಕಟ್ಟೆಯ ಗಮನ ಸೆಳೆದಿವೆ. ಹಾಗಾದರೇ ಬೋಲ್ಟ್ ACE 5G ಮತ್ತು EVO 4G ಫೋನ್‌ಗಳ ಬೆಲೆ, ಫೀಚರ್ಸ್‌ಗಳು ಮತ್ತು ವಿಶೇಷಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Also Read : iQOO Z11 vs OnePlus Nord CE6: ಮೀಡ್‌ರೇಂಜ್ ಬೆಲೆಯಲ್ಲಿ ಯಾವ ಫೋನ್ ಬೆಸ್ಟ್?
ಬೋಲ್ಟ್ ACE 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ. 4GB RAM + 128GB ಸ್ಟೋರೇಜ್ ಮಾದರಿಯ ಬೆಲೆ 12,999 ರೂ.ಗಳು ಆಗಿದೆ. ಅಲ್ಲದೇ 6GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 13,999 ರೂ.ಗಳ ಬೆಲೆ ನಿಗದಿಪಡಿಸಲಾಗಿದೆ. ಟಾಪ್ ಎಂಡ್ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 14,999 ರೂ.ಗಳು ಆಗಿದೆ. ಇನ್ನು ಬೋಲ್ಟ್ EVO 4G ಫೋನ್‌ನ 4GB RAM + 64GB ಸ್ಟೋರೇಜ್ ವೇರಿಯಂಟ್ 9,999 ರೂ.ಗಳು ಆಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ 10,999 ರೂ.ಗಳು ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.
ಡಿಸ್ಪ್ಲೇ ವಿಚಾರದಲ್ಲಿ, ಬೋಲ್ಟ್ ACE 5G ಮತ್ತು EVO 4G ಎರಡೂ 6.79 ಇಂಚಿನ HD+ ಡಿಸ್ಪ್ಲೇ ಹೊಂದಿವೆ. ಈ ಸ್ಕ್ರೀನ್ 720×1640 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಬ್ಯಾಟರಿ ವಿಚಾರದಲ್ಲಿ ಎರಡೂ ಫೋನ್‌ಗಳಲ್ಲಿ 6,000mAh ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹೀಗಾಗಿ ಸಾಮಾನ್ಯ ಬಳಕೆಯಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ನಿರೀಕ್ಷಿಸಬಹುದು.
ಹಾಗೆಯೇ ಬೋಲ್ಟ್ ACE 5G ಯುನಿಸೊಕ್ T8200 ಚಿಪ್‌ಸೆಟ್ ಬಳಸಿಕೊಂಡಿದೆ. ಮತ್ತೊಂದೆಡೆ, ಬೋಲ್ಟ್ EVO 4G ಸ್ಮಾರ್ಟ್‌ಫೋನ್ ಯುನಿಸೊಕ್ T7250 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನೊಂದಿಗೆ ಬರುತ್ತದೆ. ಕ್ಯಾಮೆರಾ ವಿಭಾಗದಲ್ಲಿ ACE 5G ಹಿಂಭಾಗದಲ್ಲಿ f/1.8 ಅಪರ್ಚರ್‌ನ 64MP ಪ್ರೈಮರಿ ಕ್ಯಾಮೆರಾ ಹೊಂದಿದೆ. EVO 4Gನಲ್ಲಿ 50MP ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಎರಡೂ ಫೋನ್‌ಗಳಲ್ಲಿ f/2.0 ಅಪರ್ಚರ್‌ನ 8MP ಫ್ರಂಟ್ ಕ್ಯಾಮೆರಾ ಇದೆ.