Samsung Galaxy Z Fold6 5G Price Drop
ಹೊಸ ವರ್ಷದ ಪ್ರಯುಕ್ತ ಅಮೆಜಾನ್‌ನಲ್ಲಿ ಆಯೋಜಿಸಲಾಗಿರುವ ವಿಶೇಷ ಮಾರಾಟ ಮೇಳದಲ್ಲಿ ಸ್ಯಾಮ್‌ಸಂಗ್ ತನ್ನ ಪ್ರೀಮಿಯಂ ಫೋನ್ Samsung Galaxy Z Fold6 5G ಮೇಲೆ ಭಾರಿ ಮೊತ್ತದ ರಿಯಾಯಿತಿ ಘೋಷಿಸಲಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡವರಿಗೆ ಇದು ಸುವರ್ಣಾವಕಾಶವಾಗಿದೆ. ಕಳೆದ ವರ್ಷದ ಬಿಡುಗಡೆ ಬೆಲೆಗೆ ಹೋಲಿಸಿದರೆ ಈ ವರ್ಷದ ಸೇಲ್‌ನಲ್ಲಿ ಗ್ರಾಹಕರು ಸುಮಾರು 30,000 ದಿಂದ 40,000 ರೂಪಾಯಿಗಳವರೆಗೆ ನೇರ ಲಾಭವನ್ನು ಪಡೆಯುತ್ತಿದ್ದಾರೆ. ಕೇವಲ ಫ್ಲಾಟ್ ಡಿಸ್ಕೌಂಟ್ ಮಾತ್ರವಲ್ಲದೆ ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡುವವರಿಗೆ ‘ಬಂಪರ್ ಎಕ್ಸ್‌ಚೇಂಜ್ ಬೋನಸ್’ ಕೂಡ ಲಭ್ಯವಿದ್ದು ಅಂತಿಮ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ.
Also Read: ZEBRONICS Dolby Soundbar: ಇದಕ್ಕಿಂತ ಕಡಿಮೆ ಬೆಲೆಗೆ ಮತ್ತೊಂದಿಲ್ಲ! ಜಬರ್ದಸ್ತ್ ಸೌಂಡ್ ಮತ್ತು ಪ್ರೀಮಿಯಂ ಲುಕ್!
ಈ ಆಫರ್ ಅವಧಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 5G ಫೋನ್‌ನ ಆರಂಭಿಕ ಬೆಲೆಯು ಆಕರ್ಷಕ ದರಕ್ಕೆ ಇಳಿದಿದೆ. ಇದರಿಂದಾಗಿ ಲಕ್ಷ ದಾಟಿದ್ದ ಫೋನ್ ಬೆಲೆ ಈಗ ಸಾಮಾನ್ಯ ಗ್ರಾಹಕರಿಗೂ ಕೈಗೆಟಕುವ ದರಕ್ಕೆ ಹತ್ತಿರವಾಗುತ್ತಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಬ್ಯಾಂಕ್ ಆಫರ್‌ಗಳ ಅಡಿಯಲ್ಲಿ ವಿಶೇಷವಾಗಿ SBI ಅಥವಾ ICICI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ ಹೆಚ್ಚುವರಿಯಾಗಿ 5,000 ರೂಪಾಯಿಗಳ ಉಚಿತ ಕೂಪನ್ ಇನ್‌ಸ್ಟಂಟ್ ರಿಯಾಯಿತಿ ಸಿಗಲಿದೆ. ಇದಲ್ಲದೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ (No Cost EMI) ಕಂತಿನ ವ್ಯವಸ್ಥೆಯೂ ಇರುವುದರಿಂದ ಬಜೆಟ್ ಅಡಚಣೆ ಇಲ್ಲದೆ ಈ ಮಡಚಬಹುದಾದ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಅಲ್ಲದೆ Samsung Galaxy Z Fold6 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 44,450 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 5G ಒಂದು ಅದ್ಭುತವಾದ ಸ್ಮಾರ್ಟ್‌ಫೋನ್ ಆಗಿದೆ. ಇದರಲ್ಲಿ 7.6 ಇಂಚಿನ ದೊಡ್ಡ ಡೈನಾಮಿಕ್ ಅಮೋಲೆಡ್ 2X ಮೇನ್ ಡಿಸ್‌ಪ್ಲೇ ಮತ್ತು 6.3 ಇಂಚಿನ ಕವರ್ ಡಿಸ್‌ಪ್ಲೇ ನೀಡಲಾಗಿದೆ. ಫೋನ್ ವೇಗವಾಗಿ ಕೆಲಸ ಮಾಡಲು Snapdragon 8 Gen 3 for Galaxy ಪ್ರೊಸೆಸರ್ ಬಳಸಲಾಗಿದೆ. ಇದು ಗೇಮಿಂಗ್ ಮತ್ತು ಮಲ್ಟಿ-ಟಾಸ್ಕಿಂಗ್‌ಗೆ ಅತ್ಯುತ್ತಮವಾಗಿದೆ. ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಹಾಗೂ ಪ್ರೊ-ಗ್ರೇಡ್ ಲೆನ್ಸ್‌ಗಳನ್ನು ನೀಡಲಾಗಿದೆ. ವಿಶೇಷವಾಗಿ ಇದರಲ್ಲಿರುವ Galaxy AI ಫೀಚರ್‌ಗಳು ನಿಮ್ಮ ಫೋನ್ ಬಳಸುವ ಶೈಲಿಯನ್ನೇ ಬದಲಿಸುತ್ತವೆ. ಸರಿಸುಮಾರು 4400mAh ಬ್ಯಾಟರಿ ಮತ್ತು S-Pen ಬೆಂಬಲದೊಂದಿಗೆ ಇದು ಪೂರ್ಣ ಪ್ರಮಾಣದ ಡಿಜಿಟಲ್ ನೋಟ್‌ಬುಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.