Apples First Foldable iPhone Duo Unveiled
ಆಪಲ್ ತನ್ನ Surprise and Shine ಕಾರ್ಯಕ್ರಮದಲ್ಲಿ ಆಪಲ್ ತನ್ನ ಮೊದಲ foldable ಐಫೋನ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. iPhone Duo ಎಂದು ಕರೆಯಲಾಗಿರುವ ಈ foldable ಫೋನ್ ಸ್ಟಾರ್ ವೈಟ್ ಹಾಗೂ ನೈಟ್ ಸ್ಕೈ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಐಫೋನ್ ಡ್ಯುಯೊನಲ್ಲಿ ಆಪಲ್‌ನ ಹೊಸ A20 Pro ಚಿಪ್‌ಸೆಟ್ ಪವರ್ ಕೆಲಸ ಮಾಡಲಿದೆ. ಅಲ್ಲದೇ ಐಫೋನ್ ಡ್ಯುಯೊ ಫೋನ್ MagSafe ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗಾದರೆ ಆಪಲ್ ಕಂಪನಿಯ ಐಫೋನ್ ಡ್ಯುಯೊ ಫೋನ್ ಬೆಲೆ ಎಷ್ಟು?ಫೀಚರ್ಸ್‌ಗಳೇನು? ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Apple iPhone 18 Pro ಸರಣಿ ಲಾಂಚ್: ಹೊಸ ಐಫೋನ್‌ಗಳ ಬೆಲೆ ಮತ್ತು ಫೀಚರ್ಸ್ ಮಾಹಿತಿ ಇಲ್ಲಿದೆ
ಆಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ ಡ್ಯುಯೊ ಫೋಲ್ಡೆಬಲ್ ಮೊಬೈಲ್ ಐಫೋನ್ ಪ್ರಿಯರ ಗಮನ ಸೆಳೆಯುತ್ತಿದೆ. ಈ ಫೋಲ್ಡೆಬಲ್ ಫೋನ್ ಡಿಸ್‌ಪ್ಲೇ 7.76 ಇಂಚಿನ ಗಾತ್ರದಲ್ಲಿ ಇದೆ. ಇದು 2713×1920 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಹಾಗೆಯೇ ಇದರ ಕವರ್ ಡಿಸ್‌ಪ್ಲೇ 5.49 ಇಂಚಿನ ಗಾತ್ರದಲ್ಲಿ ಇದ್ದು, ಇದರ ಸ್ಕ್ರೀನ್ 1422 x 2088 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಅಲ್ಲದೇ ಐಫೋನ್ 18 ಪ್ರೊ ಸರಣಿಯಂತೆ ಆಪಲ್‌ನ ಈ ಫೋಲ್ಡೆಬಲ್ ಫೋನ್ ಸಹ ಹೊಸ A20 ಪ್ರೊ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿವೆ. ಇದು 256GB, 512GB, 1TB ಮತ್ತು 2TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಇನ್ನು ಐಫೋನ್ ಡ್ಯುಯೊ ಮೊಬೈಲ್ ಕ್ಯಾಮೆರಾ ವಿಭಾಗದಲ್ಲೂ ಗಮನಾರ್ಹ ಆಕರ್ಷಣೆ ಪಡೆದುಕೊಂಡಿದೆ. ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇವುಗಳು ಕ್ರಮವಾಗಿ 48MP ಸೆನ್ಸಾರ್ + 48MP ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 12MP ಸೆನ್ಸಾರ್‌ನ ಕ್ಯಾಮೆರಾ ರಚನೆ ನೀಡಲಾಗಿದೆ. ಅಂದಹಾಗೆ ಈ ಫೋನ್ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಐಫೋನ್ ಡ್ಯುಯೊ – 256GB – 2,99,900 ರೂ.ಗಳು
ಐಫೋನ್ ಡ್ಯುಯೊ – 512GB – 3,24,900 ರೂ.ಗಳು
ಐಫೋನ್ ಡ್ಯುಯೊ – 1TB – 3,74,900 ರೂ.ಗಳು
ಐಫೋನ್ ಡ್ಯುಯೊ – 2TB – 4,49,900 ರೂ.ಗಳು
ಇನ್ನು ಭಾರತದಲ್ಲಿ ಈ ಫೋನ್ ಸ್ಟಾರ್ ವೈಟ್ ಮತ್ತು ನೈಟ್ ಸ್ಕೈ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಹೊಸ ಫೋಲ್ಡೆಬಲ್ ಐಫೋನ್ ಇದೇ ಅಕ್ಟೋಬರ್ 16 ರಿಂದ ಪ್ರೀ-ಆರ್ಡರ್‌ಗೆ ಲಭ್ಯವಿರುತ್ತದೆ ಹಾಗೂ ಅಕ್ಟೋಬರ್ 23 ರಿಂದ ಮಾರಾಟಕ್ಕೆ ಬರಲಿದೆ.