ಟೆಕ್ ದೈತ್ಯ ಆಪಲ್ ಸಂಸ್ಥೆಯು ಈ ವರ್ಷದ ಮೊದಲ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಿದೆ. ಇದೇ ಮಾರ್ಚ್ 4, 2026 ರಂದು ಕಾರ್ಯಕ್ರಮವನ್ನು ನಡೆಸಲು ಸಜ್ಜಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಂಸ್ಥೆಯು ಕೈಗೆಟುವ ಬೆಲೆಯ MacBook ಡಿವೈಸ್ ಹಾಗೂ iPhone 17e ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಬಹುನಿರೀಕ್ಷಿತ iPhone 17e ಫೋನ್ ಅಪ್‌ಗ್ರೇಡ್ ಕಾರ್ಯಕ್ಷಮತೆ, ಅತ್ಯುತ್ತಮ ಕಾರ್ಯವೈಖರಿ ಮತ್ತು ಉತ್ತಮ ಕ್ಯಾಮೆರಾ ಸೇರಿದಂತೆ ಕೆಲವು ಹೊಸ ಅಪ್‌ಗ್ರೇಡ್‌ಗಳನ್ನು ಪಡೆಯುವ ನಿರೀಕ್ಷೆಗಳು ಇವೆ ಎಂದು ಹೇಳಲಾಗುತ್ತದೆ. ಹಾಗಾದರೆ ಆಪಲ್ ಕಂಪನಿಯ ಮುಂಬರುವ iPhone 17e ಸ್ಮಾರ್ಟ್‌ಫೋನಿನ ನೀರಿಕ್ಷಿತ ಫೀಚರ್ಸ್ ಹಾಗೂ ಲಾಂಚ್ ದಿನಾಂಕದ ಬಗ್ಗೆ ಮುಂದೆ ತಿಳಿಯೋಣ.
Also Read : ಅತೀ ಶೀಘ್ರದಲ್ಲೇ Motorola Edge 70 Fusion ಬಿಡುಗಡೆ! ಕುತೂಹಲ ಹೆಚ್ಚಿಸಿದ ಲೀಕ್ ಫೀಚರ್ಸ್
ಆಪಲ್ ಸಂಸ್ಥೆಯು ಪರಿಚಯಿಸಲಿರುವ ಐಫೋನ್ 17e ಸ್ಮಾರ್ಟ್‌ಫೋನ್ ಈಗಾಗಲೆ ಗ್ರಾಹಕರ ಕುತೂಹಲ ಇಮ್ಮಡಿಗೊಳಿಸಿದೆ. ಆಪಲ್ ಮಾರ್ಚ್ 4 ರಂದು ನಿಗದಿಪಡಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಐಫೋನ್ 17e ಒಳಗೊಂಡಂತೆ ಗ್ರಾಹಕಸ್ನೇಹಿ ಬೆಲೆಯ ಮ್ಯಾಕ್‌ಬುಕ್, ಐಪ್ಯಾಡ್ ಅಪ್‌ಡೇಟ್‌ಗಳು ಹಾಗೂ M5 ಮ್ಯಾಕ್‌ಬುಕ್ ಸರಣಿಯನ್ನು ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ.
ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸಿರುವ ಆಪಲ್ ಕಂಪನಿಯ ಐಫೋನ್ 17e ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುವ ರೇಂಜ್‌ನಲ್ಲಿ ಕಾಣಿಸಿಕೊಳ್ಳಲಿದೆ. ಭಾರತದಲ್ಲಿ ಐಫೋನ್ 17e ಫೋನಿನ ಆರಂಭಿಕ ವೇರಿಯಂಟ್ ಬೆಲೆ 59,900 ರೂ.ಗಳು ಎಂದು ನಿರೀಕ್ಷಿಸಲಾಗುತ್ತಿದೆ. ಅದೇ ರೀತಿ 256GB ವೇರಿಯಂಟ್ ಬೆಲೆ 69,900 ರೂ.ಗಳು ಹಾಗೂ 512GB ಯ ಹೈ ಎಂಡ್ ವೇರಿಯಂಟ್ ಬೆಲೆ 89,900 ರೂ. ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಂದಹಾಗೆ ಬೆಲೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಆಪಲ್ ಸಂಸ್ಥೆಯ ಮುಂಬರುವ ಐಫೋನ್ 17e ಫೋನ್ 6.1 ಇಂಚಿನ OLED ಮಾದರಿಯ ಡಿಸ್‌ಪ್ಲೇ ಪಡೆದಿರಲಿದೆ. ಹಾಗೆಯೇ 60Hz ರಿಫ್ರೆಶ್ ರೇಟ್ ಒಳಗೊಂಡಿರುವ ನಿರೀಕ್ಷೆಗಳಿವೆ. ಅಲ್ಲದೇ ಈ ಮೊಬೈಲ್ ಡೈನಾಮಿಕ್ ಐಲ್ಯಾಂಡ್ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ ಆಪಲ್ A19 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ 8GB RAM ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.
ಹಾಗೆಯೇ ಐಫೋನ್ 17e ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾವು 48MP ಸೆನ್ಸಾರ್ ಪಡೆದಿರುವ ಸಾಧ್ಯತೆಗಳು ಹೆಚ್ಚಿವೆ. ಇದರೊಂದಿಗೆ ಇನ್ನೊಂದು ಕ್ಯಾಮೆರಾವು 13MP ಅಲ್ಟ್ರಾ ವೈಡ್ ಸೆನ್ಸಾರ್ ನಲ್ಲಿ ಇರಲಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ಸೆಂಟರ್ ಸ್ಟೇಜ್ ಸಪೋರ್ಟ್‌ನ 18MP ಕ್ಯಾಮೆರಾ ಒದಗಿಸುವ ಸೂಚನೆಗಳು ಇವೆ. ಇನ್ನು ಈ ಫೋನ್ 4,000 mAh ಬ್ಯಾಟರಿ ಸಪೋರ್ಟ್ ಜೊತೆಗೆ MagSafe ಚಾರ್ಜಿಂಗ್ ಅನ್ನು ಬೆಂಬಲಿಸುವುದು ಬಹುತೇಕ ಪಕ್ಕಾ ಎನ್ನಲಾಗಿದೆ.