Apple iPhone 17 pro and 17 Pro Max launched india price specs and feature details
ನೀವೇನಾದರೂ ಆಪಲ್ ಸಂಸ್ಥೆಯ iPhone 17 Pro ಸ್ಮಾರ್ಟ್‌ಫೋನ್ ಅನ್ನು ಬೊಂಬಾಟ್ ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಪ್ಲಾನ್ ಮಾಡಿದ್ದಿರಾ? ಹಾಗಿದ್ದರೆ Vijay Sales ಆನ್‌ಲೈನ್ ಪ್ಲಾಟ್‌ಫಾರ್ಮ್ ನಿಮಗೆ ಸೂಕ್ತ ಪ್ಲಾಟ್‌ಫಾರ್ಮ್ ಎನ್ನಬಹುದು. ಏಕೆಂದರೆ ಈ ಆನ್‌ಲೈನ್ ಪ್ಲಾಟ್‌ಫಾರ್ಮ್ ನಲ್ಲಿ ಸದ್ಯ ಆಪಲ್‌ನ iPhone 17 Pro ಮಾಡೆಲ್ ಗಮನಾರ್ಹ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಖರೀದಿದಾರರು ಪಡೆಯಬಹುದಾಗಿದೆ. ಇನ್ನು ಈ ಆಪಲ್ ಐಫೋನ್ ಆಕರ್ಷಕ ಕಾಸ್ಮಿಕ್ ಆರೆಂಜ್, ಸಿಲ್ವರ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಐಫೋನ್ A19 Pro ಚಿಪ್‌ಸೆಟ್ ಸಪೋರ್ಟ್ ಪಡೆದಿದೆ. ಹಾಗಾದರೇ Apple iPhone 17 Pro ಫೋನಿಗೆ ಲಭ್ಯ ಇರುವ ಆಫರ್ ಹಾಗೂ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : ಭಾರತದಲ್ಲಿ OPPO K14x ಮೊಬೈಲ್ ಬಿಡುಗಡೆಗೆ ಸಜ್ಜು! ಲಾಂಚ್ ದಿನಾಂಕ ಹಾಗೂ ಫೀಚರ್ಸ್ ಏನು?
ಆಪಲ್ ಕಂಪನಿಯ iPhone 17 Pro ಫೋನ್ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಐಫೋನ್ ಬೆಲೆಯು 1,34,900 ರೂಗಳು ಆಗಿದೆ. ಆದರೆ ಪ್ರಸ್ತುತ Vijay Sales ನ ಅಧಿಕೃತ ಆನ್‌ಲೈನ್ ಪ್ಲಾಟ್‌ಫಾರ್ಮ್ನಲ್ಲಿ iPhone 17 Pro ಸ್ಮಾರ್ಟ್‌ಫೋನ್ 2,410 ರೂಗಳ ನೇರ ರಿಯಾಯಿತಿ ಪಡೆದಿದ್ದು, 1,32,490 ರೂಗಳಿಗೆ ಖರೀದಿಗೆ ಸಿಗಲಿದೆ. ಹಾಗೆಯೇ HDFC Bank ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 4,500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಗ್ರಾಹಕರು ಪಡೆದುಕೊಳ್ಳಲು ಚಾನ್ಸ್ ಇದೆ.
ಆಪಲ್ iPhone 17 Pro ಮೊಬೈಲ್ 120Hz ಪ್ರೊಮೋಷನ್ ತಂತ್ರಜ್ಞಾನ ಜೊತೆಗೆ 6.3 ಇಂಚಿನ OLED ಡಿಸ್‌ಪ್ಲೇ ಪಡೆದಿದೆ. ಇದು ಆಲ್ವೇಸ್ ಆನ್ ಆಗಿರುವ ಡಿಸ್ಪ್ಲೇ ಆಗಿದ್ದು ಜೊತೆಗೆ ಆಂಟಿ-ರಿಫ್ಲೆಕ್ಟಿವ್ ಲೇಪನವನ್ನು ಪಡೆದಿದೆ. ಹಾಗೆಯೇ ಈ ಫೋನ್ ಇದು ಸೆರಾಮಿಕ್ ಶೀಲ್ಡ್ 2 ನಿಂದ ರಕ್ಷಿಸಲ್ಪಟ್ಟಿದೆ. ಇನ್ನು iPhone 17 Pro ಫೋನ್ ಸಂಸ್ಥೆಯ A19 Pro ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ 12GB RAM ವರೆಗೆ ಆಯ್ಕೆ ಇದೆ. ಈ ಫೋನ್ ಒಂದೇ ಚಾರ್ಜ್‌ನಲ್ಲಿ 39 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ.
ಹಾಗೆಯೇ iPhone 17 Pro ಮೊಬೈಲ್ ಕ್ಯಾಮೆರಾದ ವಿಭಾಗದಿಂದಲೂ ಗಮನ ಸೆಳಯುತ್ತದೆ. ಈ ಐಫೋನ್ ಹಿಂಭಾಗದಲ್ಲಿ 48MP ಟ್ರಿಪಲ್ ಫ್ಯೂಷನ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಕ್ಯಾಮೆರಾಗಳು ಕ್ರಮವಾಗಿ 48MP ಫ್ಯೂಷನ್, 48MP ಅಲ್ಟ್ರಾವೈಡ್ ಹಾಗೂ 48MP ಟೆಲಿಫೋಟೋ ಲೆನ್ಸ್‌ಗಳ ಅನ್ನು ಹೊಂದಿವೆ. ಅಲ್ಲದೇ ಇವು 8x ಆಪ್ಟಿಕಲ್ ಜೂಮ್ ಮತ್ತು 8K ವೀಡಿಯೊ ರೆಕಾರ್ಡಿಂಗ್‌ಗೆ ಸಪೋರ್ಟ್ ಅನ್ನು ಕೂಡಾ ಪಡೆದಿವೆ. ಇದರೊಂದಿಗೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 18MP ಕ್ಯಾಮೆರಾ ವ್ಯವಸ್ಥೆ ಅನ್ನು ಹೊಂದಿದೆ.