Apple Hebbal Store
ಇಂದು ಆಪಲ್ ತನ್ನ ಭಾರತದ ಹೊಸ ರಿಟೇಲ್ ಸ್ಟೋರ್ Apple Hebbal ಅನ್ನು ಮುಂದಿನ ತಿಂಗಳು ಅಂದ್ರೆ 2ನೇ ಸೆಪ್ಟೆಂಬರ್ 2025 ರಂದು ಸಾರ್ವಜನಿಕರಿಗೆ ತೆರೆಯುವುದಾಗಿ ಪ್ರಕಟಿಸಿದೆ. ಈ ಬಿಡುಗಡೆ ಭಾರತದಲ್ಲಿ ಆಪಲ್ನ ಮಹತ್ವದ ವಿಸ್ತರಣೆಯಾಗಿದೆ. ಭಾರತದಲ್ಲಿ ಈಗಾಗಲೇ ಮುಂಬೈ ಮತ್ತು ದೆಹಲಿ ಮೆಟ್ರೋ ಸಿಟಿಗಳಲ್ಲಿ ಲಭ್ಯವಿರುವ ಈ ಆಪಲ್ ಸ್ಟೋರ್ ಈಗ ನಮ್ಮ ಈಗ ಬೆಂಗಳೂರಿನಲ್ಲೂ ತೆರೆಯಲು ಸಜ್ಜಾಗಿದೆ.
ಇದರಿಂದ ಭಾರತೀಯರು ಅದರಲ್ಲೂ ಬೆಂಗಳೂರಿನ ಸುತ್ತಮುತ್ತಲಿನ ಗ್ರಾಹಕರು ಆಪಲ್ ಪ್ರಾಡಕ್ಟ್ಗಳನ್ನು ಅನ್ವೇಷಿಸಲು, ಖರೀದಿಸಲು ಈಗ ಬೆಂಗಳೂರಿನಲ್ಲಿ ನೇರವಾಗಿ ಆಪಲ್‌ನ ವಿಶಿಷ್ಟ ಸೇವೆಗಳನ್ನು ಅನುಭವಿಸಲು ಹೊಸ ಮಾರ್ಗಗಳನ್ನು ಪಡೆಯಲಿದ್ದಾರೆ. ಹಾಗಾದ್ರೆ ಇದರ ಬಗ್ಗೆ ಈವರೆಗಿನ ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಈ ಹೊಸ ಸ್ಟೋರ್‌ನಲ್ಲಿ ಆಪಲ್ ಸ್ಪೆಷಲಿಸ್ಟ್‌ಗಳು, ಕ್ರಿಯೇಟಿವ್‌ಗಳು, ಜೀನಿಯಸ್‌ಗಳು ಮತ್ತು ಬಿಸಿನೆಸ್ ಸಲಹೆಗಾರರ ತಂಡದಿಂದ ವೃತ್ತಿಪರ ಮಾರ್ಗದರ್ಶನ ಮತ್ತು ಬೆಂಬಲ ದೊರೆಯುತ್ತದೆ. ಗ್ರಾಹಕರು ಹೊಸ iPhone, iPad, Mac, AirPod ಮತ್ತು Apple Watch ಸೇರಿ ಮತ್ತೆ ಅನೇಕ ಪರಿಕರಗಳನ್ನು ಖರೀದಿಸಬಹುದು. ಅಲ್ಲದೆ ಇದರ ಮೂಲಕ ಗ್ರಾಹಕರು ಹೆಚ್ಚುವರಿಯಾಗಿ ಇದರ ನಂತರ ಪ್ರತಿ ದಿನದ Apple Hebbal ವಿಶೇಷ ವಾಲ್ಪೇಪರ್ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಾಗಲಿದೆ.
ಈಗಾಗಲೇ ಇದರ ಒಂದು ಲುಕ್ ಅನ್ನು ನೀಡಿರುವ ಆಪಲ್ ತಂಡ ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಬಣ್ಣದ ರೆಕ್ಕೆಗಳಿಂದ ಪ್ರೇರಿತವಾಗಿದೆ. ಇದು ಕೇವಲ ಆಕರ್ಷಕ ಕಲಾಕೃತಿ ಮಾತ್ರವಲ್ಲ ಭಾರತದ ಹೆಮ್ಮೆಯ ಪ್ರತೀಕವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಹೇಳಿರುವಂತೆ ಬೆಂಗಳೂರಿನ ಹೆಬ್ಬಾಳದ ಈ ಸ್ಟೋರ್ ಭಾರತದಲ್ಲಿ ಆಪಲ್‌ನ ಮೂರನೇ ಅಧಿಕೃತ ರಿಟೇಲ್ ಸ್ಟೋರ್ ಆಗಿದೆ. ಇದು ಬೆಂಗಳೂರಿನ ತಂತ್ರಜ್ಞಾನ ನಗರಕ್ಕೆ ಹೊಸ ಡಿಜಿಟಲ್ ತಾಣವನ್ನು ನೀಡಲಿದೆ.
Also Read: ಇಂಟರ್ನೆಟ್ ಇಲ್ಲದೆ ನಿಮ್ಮ ಫೀಚರ್ ಫೋನ್‌ನಲ್ಲಿ UPI ಪೇಮೆಂಟ್ ಮಾಡುವುದು ಹೇಗೆ?
ಇಂದು ನಡೆದ ಆಪಲ್ ಸ್ಟೋರ್ ಉದ್ಘಾಟನಾ ದಿನದ ಮೊದಲು ಆಪಲ್ ಗ್ರಾಹಕರಿಗೆ Apple Hebbal ವಿಶೇಷ ವಾಲ್ಪೇಪರ್ಗಳನ್ನು ಡೌನ್‌ಲೋಡ್ ಮಾಡಲು, ಬೆಂಗಳೂರು ಸ್ಪೂರ್ತಿಯ ಆಪಲ್ ಮ್ಯೂಸಿಕ್ ಪ್ಲೇಲಿಸ್ಟ್ ಆಲಿಸಲು ಮತ್ತು ಮುಂಬರುವ ಸ್ಟೋರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅವಕಾಶ ನೀಡುತ್ತಿದೆ. ಈ ಸ್ಟೋರ್ ಆರಂಭವು ಬೆಂಗಳೂರು ತಂತ್ರಜ್ಞಾನ ಪ್ರೇಮಿಗಳಿಗೂ, ಉದ್ಯಮಿಕರಿಗೂ, ವಿದ್ಯಾರ್ಥಿಗಳಿಗೂ ಹಾಗೂ ಕ್ರಿಯೇಟಿವ್ ವೃತ್ತಿಪರರಿಗೂ ಡಿಜಿಟಲ್ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.